ಚಿಕ್ಕಮಗಳೂರು

ಸುಧನ್ವ ಮೋಕ್ಷ ತಾಳಮದ್ದಳೆ

Published On :

ಬಾಳೆಹೊನ್ನೂರು: ಇಲ್ಲಿಗೆ ಸಮೀಪದ ಜಯಪುರ- ಶೃಂಗೇರಿ ರಸ್ತೆಯ ಗಡಿಕಲ್ಲು ಗ್ರಾಮದ ಸತ್ತಿಕಲ್ಲಿನ ವಾಸುದೇವ ಅವರ ಮನೆಯಂಗಳದಲ್ಲಿ ದಿ. ಸಿಂಗಪ್ಪಯ್ಯ ಸಂಸ್ಮರಣೆ ಕಾರ್ಯಕ್ರಮದಲ್ಲಿ ಸುಧನ್ವ ಮೋಕ್ಷ ತಾಳಮದ್ದಳೆ ಕಾರ್ಯಕ್ರಮ ನಡೆಯಿತು.
ಸಾಂಪ್ರದಾಯಿಕ ಕೃಷಿ ಪದ್ಧತಿಯಲ್ಲಿ ನಿಷ್ಣಾತರಾಗಿದ್ದ ಗ್ರಾಮದ ಹಿರಿಯ ಚೇತನ ಸಿಂಗಪ್ಪಯ್ಯ ಯಕ್ಷಗಾನ ಪೋಷಕರಾಗಿದ್ದು, ಅವರ ನೆನಪಿಗಾಗಿ ಸ್ಥಳೀಯ ಖ್ಯಾತ ಕಲಾವಿದರು ಹಾಗೂ ಆಹ್ವಾನಿತ ಕಲಾವಿದರನ್ನು ಕರೆಸಿ ಪ್ರಸ್ತುತಪಡಿಸಿದ ಸುಧನ್ವ ಮೋಕ್ಷ ತಾಳ ಮದ್ದಳೆ ಪ್ರದರ್ಶನ ಕಲಾಭಿಮಾನಿಗಳನ್ನು ರಂಜಿಸುವಲ್ಲಿ ಯಶಸ್ವಿಯಾಯಿತು.
ಯಕ್ಷಗಾನ ಕ್ಷೇತ್ರದ ಗಾನ ಕೋಗಿಲೆ ಸುಬ್ರಹ್ಮಣ್ಯ ಧಾರೇಶ್ವರ, ಹಿರಿಯ ಮದ್ದಳೆಗಾರ ಯಲ್ಲಾಪುರ ಶಂಕರ ಭಾಗವತ್, ಉಜಿರೆ ಅಶೋಕ ಭಟ್, ಎಂ. ಪ್ರಭಾಕರ ಜೋಷಿ, ಮಲೆನಾಡು ಭಾಗದ ಖ್ಯಾತ ಯಕ್ಷಗಾನ ಅರ್ಥಧಾರಿ ಜ್ಯೋತಿಷ್ಯ ವಿದ್ವಾನ್ ತೋಟದೂರಿನ ಟಿ.ವಿ. ಅಜಿತ್ ಕಾರಂತ್, ಜನಾರ್ದನ ಮಂಡಗಾರು, ಮದ್ದಳೆ ವಾದಕ ಭಾಗವತರ ಮನೆ ವೆಂಕಟೇಶ್ ಭಟ್, ಉದಯೋನ್ಮುಖ ಭಾಗವತ ಹೇರೂರಿನ ಎ.ಜಿ. ಶಿವಾನಂದ ಭಟ್ ಹಾಗೂ ಸ್ಥಳೀಯ ಗಣ್ಯರನ್ನು ವಾಸುದೇವ್ ಕುಟುಂಬ ಸದಸ್ಯರು ಸನ್ಮಾನಿಸಿದರು.
ಮಲೆನಾಡಿನ ಖ್ಯಾತ ಭಾಗವತ ಮತ್ವಾನಿ ಶಿವಶಂಕರ್, ಮದ್ದಳೆಗಾರರಾದ ಭಾಗವತರ ಮನೆ ವೆಂಕಟೇಶ್ ಭಟ್, ಹುಲುಗಾರು ಗಣೇಶ ಮೂರ್ತಿ, ಜಯಪುರ ಹಂಸನಾದ ಯಕ್ಷ ಬಳಗದ ಕಲಾವಿದ ಮೂತೊಳ್ಳಿ ಎಂ.ಎಸ್. ಸುಬ್ರಹ್ಮಣ್ಯ, ಶೃಂಗೇರಿಯ ನಾಗೇಶ್ ಕಾಮತ್,
ಮಂಡಗಾರು ನರಸಿಂಹಮೂರ್ತಿ, ಯಕ್ಷಗಾನ ಪೋಷಕರಾದ ಜಯಪುರದ ಜಗದೀಶ್ ಹೆಬ್ಬಾರ್, ಚಂದ್ರಕಾಂತ್ ಶೇಟ್, ಕುಂದೂರಿನ ಕೆ.ಆರ್. ಸುಬ್ರಹ್ಮಣ್ಯ, ಹೇರೂರು ದೂಬ್ಳ ಅಭ್ಯುದಯ ಸ್ವ ಸಹಾಯ ಸಂಘದ
ಭಾಸ್ಕರ ರಾವ್, ಕಾಫಿ ಬೆಳೆಗಾರ ಬಾಳೆಮನೆ ನಟರಾಜ್, ಜಯಪುರ ಸತ್ಯಸಾಯಿ ಸಂಸ್ಥೆಯ ಶಿಕ್ಷಕರಾದ ಅಭಿನಂದನ್, ಯತೀಶ್ ಶೆಟ್ಟಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.