ನಾಳೆ ದತ್ತಮಾಲೆಗೆ ಚಾಲನೆ
ಕ.ಪ್ರ.ವಾರ್ತೆ, ಕಡೂರು, ಡಿ.10
ಡಿ.12ರಂದು ಕಡೂರು ತಾಲೂಕು ಅಂತರಘಟ್ಟೆಯ ಶ್ರೀದುರ್ಗಾಂಬ ದೇವಿ ಸನ್ನಿಧಾನದಲ್ಲಿ ದತ್ತಮಾಲೆಗ ಚಾಲನೆ ನೀಡಲಿದ್ದು, ನೂರಾರು ದತ್ತ ಭಕ್ತರು ದತ್ತಮಾಲೆ ಧರಿಸಲಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ತಿನ ಹಿರಿಯ ಮುಖಂಡ ಲಕ್ಷ್ಮೀನಾರಾಯಣ ತಿಳಿಸಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದತ್ತ ಜಯಂತಿ ಹಿನ್ನೆಲೆಯಲ್ಲಿ ಕಡೂರು ತಾಲೂಕಿನ ವಿಶ್ವ ಹಿಂದೂ ಪರಿಷತ್ನ ನೂತನ ಘಟಕ ರಚಸಿ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ಸಂಘಟನೆ ರಾಜ್ಯ ಕಾರ್ಯದರ್ಶಿ ಕೇಶವ ಹೆಗಡೆ, ಕಲ್ಲಡ್ಕ ಪ್ರಭಾಕರ್ ಭಟ್, ಜಿಲ್ಲಾ ವಿಎಚ್ಪಿ ಕಾರ್ಯದರ್ಶಿ ಶಿವಶಂಕರ್, ಜಿಲ್ಲಾ ಭಜರಂಗ ದಳ ಸಂಯೋಜಕ ಆರ್.ಡಿ.ಮಹೇಂದ್ರ, ಪ್ರಾಂತ ಸುರಕ್ಷಾ ಪ್ರಮುಖ್ ಪ್ರದೀಪ್ ಸಮ್ಮುಖಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಸಂಘಟನೆ ತಾಲೂಕು ಅಧ್ಯಕ್ಷರಾಗಿ ಎಸ್.ಜಿ.ಕೊಪ್ಪಲು ನಾಗರಾಜ್, ಉಪಾಧ್ಯಕ್ಷರಾಗಿ ಸಿದ್ದರಹಳ್ಳಿ ಮೈಲಾರಪ್ಪ ಅವರನ್ನು ಆಯ್ಕೆ ಮಾಡಲಾಗಿದೆ ಎಂದರು. ಈ ಹಿನ್ನೆಲೆಯಲ್ಲಿ ನೂತನ ಅಧ್ಯಕ್ಷರ ನೇತೃತ್ವದಲ್ಲಿ ಕಡೂರು ಪಟ್ಟಣದಲ್ಲಿ ದತ್ತಮಾಲೆ ಬೈಠಕ್ ನಡೆಸುವ ಮೂಲಕ ಬೆಳಿಗ್ಗೆ 10 ಗಂಟೆಗೆ ಕಡೂರು ತಾಲೂಕು ಅಂತರಘಟ್ಟೆ ಶ್ರೀದುರ್ಗಾಂಬ ಸನ್ನಿಧಿಯಲ್ಲಿ ಜಿಲ್ಲಾ ಭಜರಂಗದಳದ ಸಹ ಸಂಚಾಲಕ ಸಂಕ್ಲಾಪುರ ಪ್ರಭು ನೇತೃತ್ವದಲ್ಲಿ ನೂರಾರು ದತ್ತ ಭಕ್ತರು ದತ್ತಮಾಲಾಧಾರಿಗಳಾಗಿದ್ದಾರೆ. ಸಂಜೆ 4 ಗಂಟೆಗೆ ಕಡೂರಿನ ಶ್ರೀಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಸಂಘ ಪರಿವಾರದ ಮುಖಂಡರು ಮತ್ತು ದತ್ತ ಭಕ್ತರು ದತ್ತಮಾಲೆ ಧರಿಸುವರು ಎಂದರು.ಬಿಜೆಪಿ ತಾಲೂಕು ಅಧ್ಯಕ್ಷ ಕೆ.ಎಚ್. ಶಂಕರ್, ನಗರ ಘಟಕದ ಅಧ್ಯಕ್ಷ ಮಣಿ, ಪಂಚನಹಳ್ಳಿ ಪ್ರದೀಪ್, ಮಧು, ಕರೇಕಲ್ಲಳ್ಳಿ ಮಲ್ಲೇಶ್ ಇತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

