ಆದರ್ಶ ಪಾಲನೆಯಿಂದ ಏಳಿಗೆ
ಬೀರೂರು: ಅಂಬೇಡ್ಕರ್, ಬಸವಣ್ಣ, ಕನಕ ಮುಂತಾದ ದಾರ್ಶನಿಕರ ಜಯಂತಿ ಆಚರಿಸಿ ಆದರ್ಶ ಅಳವಡಿಸಿಕೊಂಡಲ್ಲಿ ಮಾತ್ರ ಸಮಾಜದ ಏಳಿಗೆ ಸಾಧ್ಯ ಎಂದು ಕಾಗಿನೆಲೆ ನಿರಂಜನಾನಂದಪುರಿ ಶ್ರೀ ಹೇಳಿದರು.
ಪಟ್ಟಣದ ಸಂಗೊಳ್ಳಿರಾಯಣ್ಣ ರಂಗಮಂದಿರದಲ್ಲಿ ಏರ್ಪಡಿಸಿದ್ದ 526ನೇ ಕನಕ ಜಯಂತ್ಯುತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಸಮಾರಂಭ ಉದ್ಘಾಟಿಸಿದ ಜಿಪಂ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಮಾತನಾಡಿ, 16 ನೇ ಶತಮಾನದಲ್ಲಿ ಸಮಾಜದ ಅಸ್ಪೃಶ್ಯತೆ, ಮೂಢನಂಬಿಕೆ, ಢಂಭಾಚಾರಗಳನ್ನು ವಿರೋಧಿಸಿ ಸಮಾಜ ಸುಧಾರಣೆಗಾಗಿ ಹೋರಾಟ ಮಾಡಿ, ದಾಸಶ್ರೇಷ್ಠರಾಗಿ ಇತಿಹಾಸ ನಿರ್ಮಿಸಿದವರು ಕನಕದಾಸರು ಎಂದರು.
ಕನಕ ವೇದಿಕೆ ಕಾರ್ಯಾಧ್ಯಕ್ಷ ಮಹೇಶ್ ಒಡೆಯರ್ ಮಾತನಾಡಿದರು. ಉಪನ್ಯಾಸಕ ಬೂದಾಳ್ ನಟರಾಜ್ ಕನಕದಾಸರ ಕುರಿತು ಉಪನ್ಯಾಸ ನೀಡಿದರು. ಸ್ಥಬ್ದ ಚಿತ್ರಗಳ ಮೆರವಣಿಗೆಗೆ ಜಿಪಂ ಸದಸ್ಯ ಬಿ.ಪಿ. ನಾಗರಾಜ್ ಚಾಲನೆ ನೀಡಿದರು.
ಎಂ. ಮಲ್ಲಪ್ಪ ಅಧ್ಯಕ್ಷತೆ ವಹಿಸಿದ್ದರು. ಕುರುಬರ ಸಂಘದ ಅಧ್ಯಕ್ಷ ಗುರುಸಿದ್ದಪ್ಪ, ಸಮಾಜ ಸೇವಕ ಎಚ್. ಉಮೇಶ್, ಜಿಪಂ ಸದಸ್ಯೆ ಪದ್ಮಾ ಚಂದ್ರಪ್ಪ, ಕರಿಬಡ್ಡೆ ಶ್ರೀನಿವಾಸ್, ಸಾವಿತ್ರಿ ಗಂಗಪ್ಪ, ಪುರಸಭಾ ಸದಸ್ಯರಾದ ಸವಿತಾ ರಮೇಶ್,ನಾಗರಾಜ್, ಶಶಿಧರ್, ರವಿಕುಮಾರ್, ಡಾ. ತೀರ್ಥನಾಥ್, ಡಾ. ವಾಸುದೇವಮೂರ್ತಿ, ಡಾ. ಕೆಂಚೇಗೌಡ, ಕನಕ ಮಹಿಳಾ ವೇದಿಕೆ ಗೌರವಾಧ್ಯಕ್ಷೆ ಪಾರ್ವತಮ್ಮ, ಪುರಂದರಪ್ಪ, ಅನ್ನಪೂರ್ಣ, ಹಾಲಪ್ಪ ಮೊದಲಾದರು ಇದ್ದರು. ಶೈಲಜಾ ತಂಡ ಪ್ರಾರ್ಥಿಸಿ, ಶಿಲ್ಪಾ ಒಡೆಯರ್ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

