ಚಿಕ್ಕಮಗಳೂರು

'ಸಮೂಹ ಅಧ್ಯಯನದಿಂದ ಸಾಮರಸ್ಯ'

Published On :

ಬಾಳೆಹೊನ್ನೂರು: ತಂದೆ- ತಾಯಂದಿರ ಆಸೆ ಆಕಾಂಕ್ಷೆ ಪೂರೈಸುವುದು ಮಕ್ಕಳ ಕರ್ತವ್ಯ ಎಂದು ಜಯಪುರ ಕೂಟ ಮಹಾ ಜಗತ್ತು ಅಂಗಸಂಸ್ಥೆಯ ಅಧ್ಯಕ್ಷ ಗಣೇಶಮೂರ್ತಿ ನಾವುಡ ಹೇಳಿದ್ದಾರೆ.
ಸಮೀಪದ ಹೇರೂರು ಗ್ರಾಪಂ ವ್ಯಾಪ್ತಿಯ ಕೆಮ್ಮಣ್ಣು ಗ್ರಾಮದ ಪ್ರಜಾಪ್ರಭುತ್ವ ಉಳಿಸಿ ಆಂದೋಲನ ವೇದಿಕೆಯ ಸಂಚಾಲಕಿ ಸುಮಾ ನಾಗೇಶ್ ಅವರ ಮನೆಯಂಗಳದಲ್ಲಿ ಹಮ್ಮಿಕೊಂಡಿದ್ದ ಪೆರ್ಡೂರು ಜನಾರ್ದನ ಅವರ ಸಂಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮಾಜಮುಖಿಯಾಗಿ ಬದುಕಿದ ಜನಾರ್ದನ ಅವರು ನಿಧನದ ನಂತರವೂ ಬೇರೆಯವರಿಗೆ ಅನುಕೂಲವಾಗಲೆಂದು ನೇತ್ರದಾನ ಮಾಡಿದ ವ್ಯಕ್ತಿ. ಅವರು ಹಾಕಿಕೊಟ್ಟ ಮಾರ್ಗ, ಆದರ್ಶ ಸಮಾಜಕ್ಕೆ ಮೇಲ್ಪಂಕ್ತಿಯಾಗಿದೆ. ಸಾವಿನ ನಂತರ ನೇತ್ರದಾನ ಮಾಡಿ ದೃಷ್ಟಿಹೀನರಿಗೆ ದೃಷ್ಟಿ ನೀಡುವ ಕಾರ್ಯದಲ್ಲಿ ಸಮುದಾಯದವರು ತೊಡಗಬೇಕು ಎಂದರು.
ಅಂಗಸಂಸ್ಥೆಯ ವತಿಯಿಂದ ರಜಾ ದಿನಗಳಲ್ಲಿ ವಸಂತವೇದ ಶಿಬಿರ ಏರ್ಪಡಿಸಿ ನಿತ್ಯಾನುಷ್ಠಾನ, ಅಧ್ಯಾತ್ಮ ಚಿಂತನೆಯೊಂದಿಗೆ ಮಾರ್ಗದರ್ಶನ ನೀಡಲಾಗುವುದು. ದಾನಿಗಳ ಸಹಕಾರದಿಂದ ಶಿಬಿರಗಳು ಯಶಸ್ವಿಯಾಗುತ್ತಿದ್ದು, ಸಮೂಹ ಅಧ್ಯಯನದಿಂದ ಜ್ಞಾನ ವೃದ್ಧಿಸಿ ಸಾಮರಸ್ಯ ಮೂಡಲು ಸಹಕಾರಿ ಎಂದು ಹೇಳಿದರು.
ನರಸಿಂಹರಾಜಪುರ ತಾಲೂಕು ಬ್ರಾಹ್ಮಣ ಸಮಾಜದ ಉಪಾಧ್ಯಕ್ಷ ಯಜ್ಞಪುರುಷ ಭಟ್ ಮಾತನಾಡಿ, ಆಧುನಿಕತೆಯ ಭರಾಟೆಯಲ್ಲಿ ಸಂಸ್ಕಾರ ವಿಧಿಗಳು ಮೊಟಕುಗೊಳ್ಳುತ್ತಿದ್ದು, ಈ ಬಗ್ಗೆ ಸಮುದಾಯ ಎಚ್ಚೆತ್ತುಕೊಳ್ಳಬೇಕು. ಹಿರಿಯರ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಹು.ವಾ. ಶ್ರೀವತ್ಸ ಮಾತನಾಡಿ, ಸಭೆಯಲ್ಲಿ ಚರ್ಚಿಸಿದ ವಿಷಯಗಳು ವಾಸ್ತವವಾಗಿದ್ದು, ಈ ಬಗ್ಗೆ ಸಮುದಾಯದ ಸಂಘ- ಸಂಸ್ಥೆಗಳು ಚಿಂತಿಸಬೇಕಾದ ಅಗತ್ಯತೆ ಇದೆ ಎಂದರು.
ದಳದಮನೆ ವೆಂಕಟಕೃಷ್ಣಯ್ಯ, ಆನೆಗಲ್ಲುಮಠದ ಜಯರಾಂ ಕೆದ್ಲಾಯ, ಉಮೇಶ್ ಭಟ್, ದೊರೆಸ್ವಾಮಿ ಅಯ್ಯಂಗಾರ್, ಕಾರ್ಯಕ್ರಮ ಸಂಯೋಜಕರಾದ ಸುಮಾ ನಾಗೇಶ್, ನಾಗೇಶ್ ಆಂಗೀರಸ ಇದ್ದರು.
ಇದೇ ಸಂದರ್ಭದಲ್ಲಿ ಗಣೇಶಮೂರ್ತಿ ನಾವುಡ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಯಶಸ್ವಿ ಹೈನುಗಾರಿಕೆ ನಡೆಸುತ್ತಿರುವ ಮಹಿಳೆ ಶಾರದ ಅವರನ್ನು ಸನ್ಮಾನಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.