ಕಲಾವಿದರಿಂದ ಏಡ್ಸ್ ಜನಜಾಗೃತಿ
ನರಸಿಂಹರಾಜಪುರ: ಇಲ್ಲಿನ ಬಸ್ ನಿಲ್ದಾಣ ಆವರಣದಲ್ಲಿ ಶುಕ್ರವಾರ ಏಡ್ಸ್ ಹಾಗೂ ಎಚ್‌ಐವಿ ಬಗ್ಗೆ ಜನಜಾಗೃತಿ ಮೂಡಿಸಲು ಜಾಥಾ ಹಾಗೂ ಜಾನಪದ ಕಲಾವಿದರಿಂದ ಕಲಾ ಪ್ರದರ್ಶನ ನಡೆಯಿತು.
ಏಡ್ಸ್ ಪ್ರಿವೆನ್ಷನ್ ಸೊಸೈಟಿ, ಜಿಲ್ಲಾಡಳಿತ, ಆರೋಗ್ಯ ಇಲಾಖೆ, ವಾರ್ತಾ ಇಲಾಖೆ ಆಶ್ರಯದಲ್ಲಿ ನಡೆದ ಏಡ್ಸ್ ಅರಿವು ಬಗ್ಗೆ ಜಾಗೃತಿ ಮೂಡಿಸಲು ಭದ್ರಾವತಿಯ ಹರಕೆರೆಯ ಜಾನಪದ ಕಲಾವದರು ಜಾನಪದ ಹಾಡು, ನೃತ್ಯದೊಂದಿಗೆ ಏಡ್ಸ್‌ರೋಗ ಹರಡದಂತೆ ವಹಿಸಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಮಾಹಿತಿ ನೀಡಿದರು.
ಏಡ್ಸ್‌ರೋಗಿ ರಕ್ತ ಪಡೆಯಬಾರದು, ಬಳಕೆ ಮುನ್ನ ರಕ್ತ ಪರೀಕ್ಷಿಸಬೇಕು, ಒಮ್ಮೆ ಬಳಸಿದ ಸಿರೀಂಜ್ ಪುನಃ ಬಳಕೆ ಮಾಡಬಾರದು, ಕಟಿಂಗ್ ಶಾಪಿನಲ್ಲಿ ಸೇವಿಂಗ್ ಮಾಡಿದ ಬ್ಲೇಡುಗಳನ್ನು ಮತ್ತೆ ಬಳಕೆ ಮಾಡಬಾರದು, ಏಡ್ಸ್‌ರೋಗಿಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಏಡ್ಸ್‌ರೋಗಿಗಳನ್ನು ತಿರಸ್ಕಾರ ಮನೋಭಾವದಿಂದ ನೋಡಬಾರದು, ಅವರಿಗೆ ಉತ್ತಮ ಪೌಷ್ಟಿಕ ಆಹಾರ ನೀಡಬೇಕು, ಆತ್ಮವಿಶ್ವಾಸದ ನುಡಿಗಳಿಂದ ಧೈರ್ಯ ತುಂಬಬೇಕು ಎಂಬಿತ್ಯಾದಿ ಸಲಹೆಗಳನ್ನು ಹಾಡು, ನೃತ್ಯದ ಮೂಲಕವೇ ನೀಡಿದ್ದು ವಿಶೇಷವಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

