ನಾಳೆಯಿಂದ ದುಂಡು ಮೇಜಿನ ಸಭೆ
ಕ.ಪ್ರ.ವಾರ್ತೆ, ಬಾಳೆಹೊನ್ನೂರು, ಡಿ.20
ಇಂದಿನ ದಿನಗಳಲ್ಲಿ ಹದಗೆಟ್ಟ ಪ್ರಜಾಪ್ರಭುತ್ವದ ಶುದ್ಧೀಕರಣ ಮತ್ತು ಚುನಾವಣಾ ಪದ್ಧತಿಯ ಅಮೂಲಾಗ್ರ ಸುಧಾರಣೆಗೆ ಡಿ. 22, 23 ರಂದು ಬೆಂಗಳೂರಿನ ಪ್ರೆಸ್ ಕ್ಲಬ್ನಲ್ಲಿ ದುಂಡು ಮೇಜಿನ ಸಭೆ ಮತ್ತು ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಪ್ರಜಾಪ್ರಭುತ್ವ ಉಳಿಸಿ ಆಂದೋಲನ ವೇದಿಕೆಯ ಸಂಚಾಲಕಿ ಸುಮಾ ನಾಗೇಶ್ ಹೇಳಿದ್ದಾರೆ.
ಸಿಎಫ್ಡಿ, ಎನ್ಸಿಸಿ, ಜೆಎಸ್ಪಿ, ಎಡಿಆರ್, ಸಿಪಿಎನ್ಆರ್, ಬೆಂಗಳೂರು ಪ್ರೆಸ್ ಕ್ಲಬ್ ಹಾಗೂ ಇತರೆ ಸಂಘಟನೆಗಳ ಆಶ್ರಯದಲ್ಲಿ ರಾಷ್ಟ್ರಮಟ್ಟದ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಸಂವಿಧಾನ, ನ್ಯಾಯಾಂಗ ತಜ್ಞರು, ಪತ್ರಿಕಾ ಲೇಖಕರು ಹಾಗೂ ಸಾಮಾಜಿಕ ಹೋರಾಟಗಾರರು ಕಾರ್ಯಾಗಾರದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದೀಗ ಸಮಾಜ ಪರಿವರ್ತನಾ ಸಮಿತಿಯ ಎಸ್.ಆರ್. ಹಿರೇಮಠ ವಿರುದ್ಧ ವಿಧಾನಸಭೆಯಲ್ಲಿ ಹಕ್ಕುಚ್ಯುತಿ ಮಂಡಿಸಲಾಗಿದೆ. ಈ ಹಿಂದೆ ಡಾ. ಬಾಲಸುಬ್ರಹ್ಮಣ್ಯಂ ಅವರಿಗೆ ಇದೇ ರೀತಿ ಹಕ್ಕುಚ್ಯುತಿ ಮಾಡಲಾಗಿತ್ತು. ಸರ್ಕಾರವೇ ನೇಮಿಸಿದ ಬಾಲಸುಬ್ರಹ್ಮಣ್ಯಂ ಸಮಿತಿ ಸಂವಿಧಾನಾತ್ಮಕ ಸಂಸ್ಥೆಯಾಗಿದ್ದು, ಇದು ಶಾಸಕ ರಮೇಶ್ಕುಮಾರ್ ಅವರು ತಪ್ಪಿತಸ್ಥರು ಎಂದು ಹೇಳಿದ್ದಾರೆ.
ಅರಣ್ಯ ಇಲಾಖೆಯು ರಮೇಶ್ಕುಮಾರ್ ಮೇಲೆ ಪ್ರಕರಣ ದಾಖಲಿಸಿದೆ. ನ್ಯಾಯಾಲಯ ಈ ವ್ಯಕ್ತಿಯ ಒತ್ತುವರಿ ಭೂಮಿ ತೆರವಿಗೆ ಆದೇಶ ನೀಡಿದೆ. ಆದರೂ ಸಮಾಜದ ಎದುರು ತಾನು ಉತ್ತಮ ವ್ಯಕ್ತಿ ಎಂದು ತಿಳಿಸುವ ಉದ್ದೇಶದಿಂದ ಪವಿತ್ರ ಶಾಸನ ಸಭೆಯ ದುರ್ಬಳಕೆ ಮಾಡುವ ಯತ್ನ ನಡೆದಿದೆ. ಇದರ ವಿರುದ್ಧ ಪ್ರತಿಪಕ್ಷಗಳು ಮೌನ ವಹಿಸಿವೆ. ಇದೀಗ ಹಿರೇಮಠ್ ವಿರುದ್ಧ ಹಕ್ಕುಚ್ಯುತಿ ನಿರ್ಣಯ ಖಂಡನೀಯವಾಗಿದೆ.
ಚುನಾವಣಾ ಸುಧಾರಣೆಗೆ ಈ ಸಭೆ ನಡೆಸುತ್ತಿದ್ದು, ಇಲ್ಲಿನ ನಿರ್ಣಯಗಳನ್ನು ರಾಷ್ಟ್ರಪತಿಗಳಿಗೆ ಸಲ್ಲಿಸಲಾಗುವುದು. ಜಿಲ್ಲೆಯಿಂದ ಒಟ್ಟು 20 ಜನ ಇದರಲ್ಲಿ ಭಾಗವಹಿಸುತ್ತಿದ್ದು, ಪ್ರಜಾಪ್ರಭುತ್ವ ಉಳಿಸಿ ಆಂದೋಲನ ವೇದಿಕೆ ಸಕ್ರಿಯವಾಗಿ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

