ಎಸ್ವಿಪಿ ಉತ್ತಮ ಭಾಷಾಂತರಕಾರ
ನರಸಿಂಹರಾಜಪುರ: ಕವಿ ಎಸ್.ವಿ. ಪರಮೇಶ್ವರಭಟ್ಟರು ಬೇರೆ ಭಾಷೆಗಳ ಕೃತಿಗಳನ್ನು ಭಾಷಾಂತರ ಮಾಡುವಾಗ ಮೂಲ ಕವಿಯ ಭಾವನೆಗಳಿಗೆ ಧಕ್ಕೆಯಾಗದಂತೆ ಭಾಷಾಂತರ ಮಾಡುತ್ತಿದ್ದರು ಎಂದು ಲೇಖಕಿ ಹಾಗೂ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಭಾಗ್ಯಾ ನಂಜುಂಡಸ್ವಾಮಿ ತಿಳಿಸಿದರು.
ಅವರು ಸೋಮವಾರ ಸ.ಪ.ಪೂ. ಕಾಲೇಜು ಆವರಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಸಬಾ ಹೋಬಳಿ ಘಟಕದ ಆಶ್ರಯದಲ್ಲಿ ನಡೆದ ದಿ.ಎಚ್. ಸೂರ್ಯನಾರಾಯಣರಾವ್ ಮತ್ತು ಕಮಲಮ್ಮ ಅವರ ನೆನಪಿನ ದತ್ತಿ ಉಪನ್ಯಾಸ ಕಾರ್ಯಕ್ರಮಲ್ಲಿ ಉಪನ್ಯಾಸ ನೀಡಿದರು.
ತ್ರಿಭಾಷಾ ಪಂಡಿತರು: ಪರಮೇಶ್ವರ ಭಟ್ಟರು ಕಾಳಿದಾಸನ ಕೃತಿಗಳನ್ನು ಕನ್ನಡಕ್ಕೆ ಭಾಷಾಂತರ ಮಾಡಿದ್ದರು. ಅವರು ತ್ರಿಭಾಷಾ ಪಂಡಿತರಾಗಿದ್ದು, ಸಂಸ್ಕೃತ, ಕನ್ನಡ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಪ್ರಬುದ್ಧತೆ ಹೊಂದಿದ್ದರು. ಅವರು ರಾಗಿಣಿ, ಗಗನ ಚುಕ್ಕಿ, ಉಪು ಕಡಲು ಸೇರಿದಂತೆ ಒಟ್ಟು 60 ಕೃತಿಗಳನ್ನು ರಚಿಸಿದ್ದರು ಎಂದು ಅವರು ತಿಳಿಸಿದರು.
ಪರಮೇಶ್ವರ ಭಟ್ಟರು ಕೇವಲ ಸಾಹಿತಿಗಳಲ್ಲದೆ ಸ್ವತಂತ್ರವಾಗಿ ಗಾದೆ ಹಾಗೂ ಒಗಟುಗಳನ್ನೂ ಅದ್ಭುತವಾಗಿ ರಚಿಸಿದ್ದರು. ಉತ್ತಮ ಪಾಂಡಿತ್ಯ ಪಡೆದಿದ್ದ ಭಟ್ಟರು, ತಮ್ಮ ವೃತ್ತಿ ಜೀವನದಲ್ಲಿ ಹಲವು ಏಳುಬೀಳುಗಳನ್ನು ಕಂಡಿದ್ದರು ಎಂದರು. ತಾಲೂಕು ಕಸಾಪ ಅಧ್ಯಕ್ಷ ಎಸ್.ಜಿ. ಕೃಷ್ಣಮೂರ್ತಿ ಸಮಾರಂಭ ಉದ್ಘಾಟಿಸಿ ಮಾತನಾಡಿ, ಹಲವು ಕನ್ನಡ ಭಾಷೆಯ ಅಭಿಮಾನಿಗಳು ಕನ್ನಡ ಸಾಹಿತ್ಯ ವಿಕಾಸಕ್ಕೆ ದತ್ತಿಯನ್ನು ದಾನವಾಗಿ ನೀಡಿದ್ದಾರೆ. ದತ್ತಿ ದಾನಿಗಳಿಂದಲೇ ದತ್ತಿ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.
ಕಸಾಪ ಕಸಬಾ ಹೋಬಳಿ ಘಟಕದ ಅಧ್ಯಕ್ಷ ಪಿ.ಸಿ. ಮ್ಯಾಥ್ಯೂ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ದತ್ತಿ ದಾನಿ ಎಚ್.ಎಸ್. ಚಂದ್ರಶೇಖರ್, ಪಪಂ ಸದಸ್ಯೆ ಸಮೀರಾ ನಹೀಂ, ಸಾಹಿತಿ ಜಯಮ್ಮ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸರ್ವಮಂಗಳಮ್ಮ, ಕಸಾಪ ಹಿರಿಯ ಸದಸ್ಯ ಸುಬ್ಬಣ್ಣ ನಾಡಿಗ್, ಮೀನಾಕ್ಷಿ ಕಾಂತರಾಜ್, ತಾಲೂಕು ಕಸಾಪ ಗೌರವ ಸಂಘಟನಾ ಕಾರ್ಯದರ್ಶಿ ಎಂ.ಪಿ.ಚಕ್ರಪಾಣಿ, ಕಸಾಪ ಕಾರ್ಯದರ್ಶಿ ಜುಬೇದ, ಗಣಪತಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

