ಚಿಕ್ಕಮಗಳೂರು

ಹಳೆ ಬಸ್ಸಿಗೆ ಹೊಸ ಬಣ್ಣ

Published On :

ಕ.ಪ್ರ.ವಾರ್ತೆ, ಮೂಡಿಗೆರೆ, ಡಿ. 25
ಕ.ರಾ.ರ. ಸಂಸ್ಥೆಯ ಮೂಡಿಗೆರೆ ಘಟಕ ಅವ್ಯವಸ್ಥೆ ಆಗರವಾಗಿದ್ದು,  ಅವಧಿ ಮೀರಿದ ಬಸ್ಸುಗಳ ತಪಾಸಣೆ ನಡೆಸದೆ ಅದೇ ವಾಹನಕ್ಕೆ ಬಣ್ಣಬಳಿದು ನಂಬರ್ ಬದಲಾಯಿಸಿ ಮಾರ್ಗಸೂಚಿಗೆ ಕಳುಹಿಸಲಾಗುತ್ತಿದೆ.
ಇದರ ಪರಿಣಾಮ ಹಳೆಯ ಬಸ್ಸುಗಳು ಬಸ್ಸು ಎಲ್ಲೆಂದರಲ್ಲೆ ನಿಲ್ಲುತ್ತಿದ್ದು, ಈ ಬಸ್ಸುಗಳನ್ನು ಹತ್ತಿದ ಪ್ರಯಾಣಿಕ ರಿಂದ ಉಗಿಸಿಕೊಳ್ಳುವ ಪ್ರಮೇಯ ಒದಗಿ ಬಂದಿದೆ ಎಂದು ನೊಂದ ಚಾಲಕ ಮತ್ತು ನಿರ್ವಾಹಕರು ತಿಳಿಸಿದ್ದಾರೆ.
ನಂಬರ್ ಬದಲಾಯಿಸಿ ಸಂಚಾರ: ಮೂಡಿಗೆರೆ ಘಟಕದಲ್ಲಿ ಹತ್ತಕ್ಕೂ ಅಧಿಕ ಬಸ್ಸುಗಳು ಅವಧಿ ಮೀರಿದ್ದು, ಆ ಬಸ್ಸುಗಳಿಗೆ ನಂಬರ್ ಬದಲಾಯಿಸಿ, ರಸ್ತೆಯಲ್ಲಿ ಸಂಚರಿಸುತ್ತಿದ್ದರೂ, ಸಾರಿಗೆ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ. ಹಳೇ  ಬಸ್ಸಿನ ಎಂಜಿನ್ ಮತ್ತು ಚಾರ್‌ಸಿ ನಂಬರ್ ಹಳೆಯದು ಗೊತ್ತಾಗಬಾರದೆಂದು ಅದನ್ನು ಕೆರೆಯಲಾಗಿದ್ದು, ಬಣ್ಣ ಬಳಿದು, ಅದೇ ಬಸ್ಸಿಗೆ ಹೊಸ ನಂಬರ್ ಅಳವಡಿಸಲಾಗುತ್ತಿದೆ. ನಂಬರ್ ಬದಲಾಯಿಸಿಕೊಂಡು ಬರುವಂತೆ ಅಧಿಕಾರಿಗಳು ಆದೇಶಿಸಿ ಚಾಲಕರುಗಳನ್ನು ನೇಮಿಸಿದ್ದು, ಸಾರಿಗೆ ಇಲಾಖೆಗೆ ಹೋಗುವ ಚಾಲಕ ಮನಸ್ಸಿಗೆ ಬಂದ ಚಾರ್‌ಸಿ ನಂಬರ್ ಹೇಳಿದನ್ನೇ ಸರಿ ಎಂದು ಬದಲಾಯಿಸಿ ನಂಬರ್ ನೀಡಲಾಗುತ್ತಿದೆ. ಅಧಿಕಾರಿಗಳ ಆದೇಶದಂತೆ ಸ್ವತಃ ತಾವೇ ಹಳೇ ಗಾಡಿಗೆ ನಂಬರ್ ಬದಲಾಯಿಸಿದ ಚಾಲಕರು ಮತ್ತು ನಿರ್ವಾಹಕರು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.
ಕಿ.ಮೀ.ವಂಚನೆ: ಚಿಕ್ಕಮಗಳೂರು ವಿಭಾಗದ ಮೂಡಿಗೆರೆ, ಚಿಕ್ಕಮಗಳೂರು, ಕಡೂರು, ಅರಸೀಕೆರೆ, ಸಕಲೇಶಪುರ ಘಟಕಗಳಲ್ಲಿ ಮೂಡಿಗೆರೆ- ಹುಬ್ಬಳಿಯ ದೂರ 800 ಕಿ.ಮೀ. ಎಂದು ಲೋಕೋಪಯೋಗಿ ಇಲಾಖೆ ಗುರುತಿಸಿದ್ದರೆ, ಚಿಕ್ಕಮಗಳೂರು ಕ.ರಾ.ರ ಸಂಸ್ಥೆ ವಿಭಾಗ 700 ಕಿ.ಮೀ. ಎಂದು ಗುರುತಿಸುವುದರ ಮೂಲಕ 100 ಲೀಟರ್ ಡಿಸೇಲ್ ಹಣವನ್ನು ಚಾಲಕ ಮತ್ತು ನಿರ್ವಾಹಕರಿಂದ ವಸೂಲಿ ಮಾಡುತ್ತಿದೆ.
ಒಡವೆ ಅಡವಿಟ್ಟು ಹಣ: ಡೀಸೆಲ್ ಹಣ ಕಟ್ಟಲು ಸಾಧ್ಯವಾಗದೇ ಕೆಲವು ನಿರ್ವಾಹಕರು ಮತ್ತು ಚಾಲಕರು ಮನೆಯ ಒಡವೆ ವಸ್ತುಗಳನ್ನು ಅಡವಿಟ್ಟು ಹಣ ಕಟ್ಟುತ್ತಿದ್ದಾರೆ ಮತ್ತು ಪ್ರತಿ ಮೆಮೋಗೆ ರು. 100 ದಂಡವನ್ನು ಕಡ್ಡಾಯವಾಗಿ ಕಟ್ಟಲೇಬೇಕಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.