ಚಿಕ್ಕಮಗಳೂರು

ರಬ್ಬರ್ ತೋಟ ಮಣ್ಣು ಪರೀಕ್ಷೆ

Published On :

ನರಸಿಂಹರಾಜಪುರ: ತಾಲೂಕು ರಬ್ಬರ್ ಉತ್ಪಾದಕರ ಸಂಘದ ಆಶ್ರಯದಲ್ಲಿ ತಾಲೂಕಿನ ರಬ್ಬರ್ ತೋಟಗಳ ಮಣ್ಣು ಪರೀಕ್ಷೆ ಹಾಗೂ ರಬ್ಬರ್ ಟ್ಯಾಪರ್‌ಗಳಿಗೆ ತರಬೇತಿ ಹಮ್ಮಿಕೊಳ್ಳಲಾಗಿತ್ತು.
ರಬ್ಬರ್ ಉತ್ಪಾದಕರ ಸಂಘದ ಅಧ್ಯಕ್ಷ ಟಿ.ವಿ. ವಿಜಯ ಅವರ ರಬ್ಬರ್ ತೋಟದಲ್ಲಿ ನಡೆದ ರಬ್ಬರ್ ಟ್ಯಾಪಿಂಗ್ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಸಂಘದ ಅಧ್ಯಕ್ಷ ಟಿ.ವಿ. ವಿಜಯ ಮಾತನಾಡಿ, ಉತ್ತಮ ಗುಣಮಟ್ಟದ ರಬ್ಬರ್ ಶೀಟುಗಳನ್ನು ತಯಾರಿಸಬೇಕಾಗಿದೆ. ವಿದೇಶಗಳಲ್ಲೂ ಸಹ ಉತ್ತಮ ರಬ್ಬರ್ ಶೀಟುಗಳಿಗೆ ಮಾತ್ರ ಬೇಡಿಕೆ ಇದೆ. ಉತ್ತಮ ಗುಣ ಮಟ್ಟದ ಗ್ರೇಡ್ ಶೀಟುಗಳನ್ನು ಉತ್ಪಾದಿಸಿದರೆ ಉತ್ತಮ ಧಾರಣೆಯು ಸಿಗಲಿದೆ ಎಂದರು.
ಅಲ್ಲದೆ ರಬ್ಬರ್ ಟ್ಯಾಪರ್‌ಗಳು ಯಾವುದೇ ಕಾರಣಕ್ಕೂ ಮದ್ಯಪಾನ ಮಾಡಿ ಟ್ಯಾಪಿಂಗ್ ಮಾಡಬಾರದು. ಟ್ಯಾಪಿಂಗ್‌ನಲ್ಲಿ ವ್ಯತ್ಯಾಸವಾದರೆ ರಬ್ಬರ್ ಗಿಡ ಹಾಳಾಗಲಿದೆ. ಬೆಳಗಿನ 4ರಿಂದ 7 ಗಂಟೆಯವರೆಗೆ ಟ್ಯಾಂಪಿಂಗ್‌ಗೆ ಸಕಾಲ ಎಂದು ಸಲಹೆ ನೀಡಿದರು.
ರಬ್ಬರ್ ಉತ್ಪಾದಕರ ಸಂಘದ ನಿರ್ದೇಶಕ ಕೆ.ವಿ. ಸತ್ಯನಾರಾಯಣಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ, ಟ್ಯಾಪರ್ ತರಬೇತಿಯಲ್ಲಿ ಪಾಲ್ಗೊಂಡವರಿಗೆ ಪ್ರತಿ ದಿನ 50 ಭತ್ಯೆ ನೀಡಲಾಗುತ್ತದೆ. 18 ಜನರ ಎರಡು ತಂಡಗಳಿಗೆ 8 ದಿನಗಳ ಟ್ಯಾಪಿಂಗ್ ನೀಡಲಾಯಿತು ಎಂದು ತಿಳಿಸಿದರು.
ಸಭೆಯಲ್ಲಿ ರಬ್ಬರ್ ಉತ್ಪಾದಕರ ಸಂಘದ ಕಾರ್ಯದರ್ಶಿ ಉಪೇಂದ್ರ, ನಿರ್ದೇಶಕರಾದ ಬಿ.ಕೆ. ಜಾನಕೀರಾಂ, ಲೋಕೇಶ್, ರಬ್ಬರ್ ಮಂಡಳಿಯ ಅಭಿವೃದ್ಧಿ ಅಧಿಕಾರಿ ದಿಲೀಪ್ ಮತ್ತಿತರರು ಉಪಸ್ಥಿತರಿದ್ದರು.
ಮಣ್ಣು ಪರೀಕ್ಷೆ: ಕಳೆದ 3 ದಿನಗಳ ಕಾಲ ಕಸಬಾ ಹೋಬಳಿಯ ವ್ಯಾಪ್ತಿಯ 109 ರೈತರ ರಬ್ಬರ್ ತೋಟಗಳಲ್ಲಿ ಮಣ್ಣು ಪರೀಕ್ಷೆಯ ಆಂದೋಲನ ಹಮ್ಮಿಕೊಳ್ಳಲಾಗಿತ್ತು. ವಿಜ್ಞಾನಿ ಮಧುಸೂದನ್ ಅವರ ತಂಡವು ರಬ್ಬರ್ ತೋಟಗಳ ಮಣ್ಣನ್ನು ಸಂಗ್ರಹಿಸಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.