ರಸಾಯನ ಅಧ್ಯಯನ ಅತ್ಯಗತ್ಯ
ಚಿಕ್ಕಮಗಳೂರು: ಜವಾಬ್ದಾರಿಯುತ ರಸಾಯನಶಾಸ್ತ್ರಜ್ಞ ಮಾತ್ರ ಈ ಭೂಮಿಯ ನಾಗರಿಕತೆಯ ಭವಿಷ್ಯದ ಸವಾಲುಗಳಿಗೆ ಉತ್ತರಿಸಬಲ್ಲ ಎಂದು ಕುವೆಂಪು ವಿ.ವಿ. ರಸಾಯನಶಾಸ್ತ್ರ ವಿಭಾಗದ ಸಂಸ್ಥಾಪಕ ಅಧ್ಯಕ್ಷ ಪ್ರೊ. ಪಿ. ವಾಸುದೇವನಾಯಕ್ ಹೇಳಿದ್ದಾರೆ.
ನಗರದ ಐಡಿಎಸ್‌ಜಿ ಪ್ರಥಮ ದರ್ಜೆ ಕಾಲೇಜಿನ ರಸಾಯನಶಾಸ್ತ್ರ ವಿಭಾಗ ಆಯೋಜಿಸಿದ್ದ ಯುಜಿಸಿ ಪ್ರಾಯೋಜಿತ ರಸಾಯನಶಾಸ್ತ್ರ ಕಲಿಕೆ ಪ್ರಾಮುಖ್ಯತೆ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಮನುಕುಲದ ಭವಿಷ್ಯದ ಸವಾಲುಗಳಿಗೆ ಮೂಲ ವಿಜ್ಞಾನ, ಅದರಲ್ಲೂ ಮುಖ್ಯವಾಗಿ ರಸಾಯನಶಾಸ್ತ್ರದ ಅರಿವು ಮತ್ತು ಅಧ್ಯಯನ ಅತ್ಯಗತ್ಯ ಎಂದು ಪ್ರತಿಪಾದಿಸಿದರು.
ಒಂದು ದೇಶದ ಆರ್ಥಿಕ ಸ್ಥಿತಿ, ಪರಿಸರ, ಜೈವಿಕ ವ್ಯವಸ್ಥೆಯ ಉಳಿವು, ಸರಿಯಾದ ರಾಸಾಯನಿಕ ಕ್ರಿಯೆ ಮತ್ತು ಪ್ರಜ್ಞೆಯುಳ್ಳ ರಸಾಯನಶಾಸ್ತ್ರಜ್ಞರ ಮೇಲೆ ಅವಲಂಬಿತವಾಗಿದೆ. ಅವನು ಸಾಮಾಜಿಕ ಕಳಕಳಿ ಇರುವಂತನಾಗಿರಬೇಕು ಎಂದು ವಿಶ್ಲೇಷಿಸಿದರು.
ಕುವೆಂಪು ವಿ.ವಿ. ಪರಿಕ್ಷಾಂಗ ಕುಲಸಚಿವ ಪ್ರೊ. ಎಚ್.ಎಸ್. ಭೋಜ್ಯಾನಾಯ್ಕ ವಿಚಾರಸಂಕಿರಣದ ಸಮಾರೋಪ ಭಾಷಣ ಮಾಡಿದರು. ಸಂಚಾಲಕ ಗಣೇಶ್ ಆಚಾರ್ಯ, ಪ್ರಾಂಶುಪಾಲೆ ಡಾ. ಜರೀನಾ ಕೌಸರ್, ಪ್ರಾಧ್ಯಾಪಕರುಗಳಾದ ಡಾ. ನಟರಾಜ್, ಡಾ. ಸೋಮಶೇಖರಪ್ಪ, ಡಾ. ಮೋಹನ್ ಕುಮಾರ್, ಡಾ. ಪ್ರತಿಮ ಮಥಾಯಸ್, ಪಲ್ಲವಿ, ಕಾಲೇಜ್ ಅಭಿವೃದ್ಧಿ ಮಂಡಳಿ ಅಧ್ಯಕ್ಷ ನರೇಂದ್ರಪೈ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ರಸಾಯನಶಾಸ್ತ್ರಜ್ಞರಾದ ಡಾ. ಮೈಕೆಲ್‌ರಜಮತಿ ಮತ್ತು ನಿವೃತ್ತ ಪ್ರೊ. ಎಂ.ಆರ್. ನಾಗರಾಜ್ ತಾಂತ್ರಿಕ ಉಪನ್ಯಾಸ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

