ಚಿಕ್ಕಮಗಳೂರು

ರೋಟರಿ ಸಂಸ್ಥೆ ಕಾರ್ಯಗಳಿಂದ ಜನಮನ್ನಣೆ

Published On :

ಮೂಡಿಗೆರೆ: ರೋಟರಿ ಸಂಸ್ಥೆಯು ಸಾರ್ವಜನಿಕರ ಹಿತದೃಷ್ಟಿಯಿಂದ ಉತ್ತಮ ಕಾರ್ಯಗಳನ್ನು ಹಮ್ಮಿಕೊಳ್ಳುವುದರ  ಮೂಲಕ ಜನಮನ್ನಣೆಗೆ ಪಾತ್ರವಾಗಿದೆ ಎಂದು ರೊಟೇರಿಯನ್ ಜಿಲ್ಲಾ ರಾಜ್ಯಪಾಲ ಡಾ. ದೇವದಾಸ್ ಪೈ ಅಭಿಪ್ರಾಯಪಟ್ಟರು.
   ಪಟ್ಟಣದ ಜೇಸಿ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ರೋಟರಿ ಜಿಲ್ಲಾ ರಾಜ್ಯಪಾಲರ ಭೇಟಿ ಸಂದರ್ಭ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಮೂಡಿಗೆರೆ ಸೇರಿದಂತೆ ಸುತ್ತಮುತ್ತಲ ಜನರಿಗೆ ಅತಿ ಮುಖ್ಯವಾಗಿ ಬೇಕಾದಂತಹ ಕ್ರಿಮಿಟೋರಿಯಮ್ ರುದ್ರಭೂಮಿಯನ್ನು ಆಧುನೀಕರಣಗೊಳಿಸಲಾಗಿದೆ ಎಂದರು.
   ಜಿಲ್ಲಾ ಉಪರಾಜ್ಯಪಾಲ ಸಿ.ಬಿ. ಆನಂದ್ ಮಾತನಾಡಿ, ಮನೆಯಲ್ಲಿರುವ ಹಿರಿಯರು ಯುವ ಪೀಳಿಗೆಗಳನ್ನು  ಸರಿದಾರಿಗೆ ತರುವುದರೊಂದಿಗೆ ಉತ್ತಮ ಸಮಾಜದ ವ್ಯಕ್ತಿಯನ್ನಾಗಿಸಲು ಪ್ರಯತ್ನ ನಡೆಸಬೇಕಾಗಿದೆ ಎಂದರು.
 ಮೂಡಿಗೆರೆ ರೋಟರಿ ಸಂಸ್ಥೆಯ ಸದಸ್ಯರು ರೋಟರಿ ಫೌಂಡೇಷನ್‌ಗೆ ರು. 1 ಲಕ್ಷದ ಚೆಕ್ಕನ್ನು ದೇಣಿಗೆಯಾಗಿ ನೀಡಿದರು.
   ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಡಿಗೆರೆ ರೋಟರಿ ಸಂಸ್ಥೆ ಅಧ್ಯಕ್ಷ ರೋಹನ್ ವಿಜೇಂದ್ರ ವಹಿಸಿದ್ದರು. ಕಾರ್ಯದರ್ಶಿ ಎಂ.ಪಿ. ಆಧುನಿಕ್, ಸಿ.ಸಿ. ಸವೀನ್ ಉಪಸ್ಥಿತರಿದ್ದರು.
ಗೋಣಿಬೀಡು, ಅರೇಹಳ್ಳಿ, ಚಿಕ್ಕಮಗಳೂರು, ಬೇಲೂರು, ಸಕಲೇಶಪುರ, ಅರೇಹಳ್ಳಿ ಸೇರಿದಂತೆ ಅನೇಕ ಭಾಗಗಳಿಂದ ರೋಟರಿ ಅಧ್ಯಕ್ಷರು, ಕಾರ್ಯದರ್ಶಿಗಳು ಆಗಮಿಸಿದ್ದರು. ನೂತನ ಸದಸ್ಯರಾಗಿ ಎಂ. ಶಿವಪ್ರಕಾಶ್, ಎಂ.ಬಿ. ದಶರಥ್ ಪ್ರಮಾಣ ವಚನ ಸ್ವಿಕರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.