ಹಸಿರು ಆರೋಗ್ಯ ಅಭಿಯಾನ ಉದ್ಘಾಟನೆ
ತರೀಕೆರೆ: ಔಷಧ ಗಿಡಗಳ ಕಳ್ಳಸಾಗಾಣಿಕೆಯನ್ನು ಕೂಡಲೇ ತಡೆಗಟ್ಟಬೇಕೆಂದು ಪಶ್ಚಿಮಘಟ್ಟ ಕಾರ್ಯಪಡೆ ನಿರ್ದೇಶಕ ಗಜೇಂದ್ರ ಗೊರಸು ಕೂಡಿಗೆ ತಿಳಿಸಿದ್ದಾರೆ.
ಅರಣ್ಯ ಇಲಾಖೆ ತರೀಕೆರೆ ವಲಯ, ಭದ್ರಾವತಿ ಅರಣ್ಯ ವಿಭಾಗ, ತಾಲೂಕು ಪಾರಂಪರಿಕ ಔಷಧ ಪರಿಷತ್, ಗ್ರಾಮೀಣ ಅರಣ್ಯ ಸಮಿತಿ, ಪಶ್ಚಿಮ ಘಟ್ಟಗಳ ಕಾರ್ಯಪಡೆಯಿಂದ, ಪಟ್ಟಣದ ವಲಯ ಅರಣ್ಯ ಕಚೇರಿ ಆವರಣದಲ್ಲಿ ಹಸಿರು ಆರೋಗ್ಯ ಅಭಿಯಾನ, ವನೌಷಧ ಮನೆ ಮದ್ದು ಶಿಬಿರದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಔಷಧ ಗಿಡಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಕಾನೂನಿಗೆ ಹೆಚ್ಚು ನಿಭಂದನೆ ಇಟ್ಟು, ಔಷಧ ಗಿಡಗಳ ಕಳ್ಳ ಸಾಗಾಣಿಕೆಯನ್ನು ತಡೆಗಟ್ಟಬೇಕು. ಪರಿಸರ ಸಂರಕ್ಷಣೆ ಜೊತೆಗೆ ಪ್ರಕೃತಿಯನ್ನು ಕಾಪಾಡಬೇಕು. ಜನರ ಮತ್ತು ಅರಣ್ಯ ಸಂಬಂಧವನ್ನು ಗಟ್ಟಿಗೊಳಿಸಬೇಕು. ಆಯುರ್ವೇದ ಶಾಸ್ತ್ರದ ಹಿನ್ನಲೆಯಲ್ಲೇ ನಾಟಿ ವೈದ್ಯ ಇದೆ. ಸಕಾರತ್ಮಕ ಯೋಜನೆಗಳು ಅಗತ್ಯವಾಗಿದೆ. ಆಯುರ್ವೇದದಲ್ಲಿ ಆಹಾರವೇ ಔಷಧ, ನಾಟಿ ವೈದ್ಯರಲ್ಲಿ ಹಿಂಜರಿಕೆ ಬೇಡ
ಎಂದು ತಿಳಿಸಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಸ್. ಪಾಟೀಲ್ ಮಾತನಾಡಿ, ಇದು ಮಹತ್ವದ ಕಾರ್ಯಕ್ರಮವಾಗಿದೆ. ಆಯುರ್ವೇದ ಕ್ಷೇತ್ರ ವಿಸ್ತಾರವಾಗಿದೆ. ಪತಂಜಲಿ, ಶಶೃತ ಇಂತಹವರ ತಪಸ್ಸಿನಿಂದ ಆಯುರ್ವೇದ ಆವಿಷ್ಕಾರವಾಗಿದೆ.
ಜಗತ್ತಿನ ಕಣ್ಣು ಭಾರತವೇ ಆಗಿದ್ದು ಆಯುರ್ವೇದವೇ ಕಾರಣ. ಅರಣ್ಯ ಇಲಾಖೆ ಮೂಲಕ ಪಶ್ಚಿಮ ಘಟ್ಟಗಳನ್ನು ಗುರುತಿಸುವ ಕಾರ್ಯ ಆಗುತ್ತಿದೆ ಎಂದು ತಿಳಿಸಿದರು.
ಪಾರಂಪರಿಕ ವೈದ್ಯ ಪರಿಷತ್ನ ರಾಜ್ಯಾಧ್ಯಕ್ಷ ಮಲ್ಲಪ್ಪ ಮಾತನಾಡಿ, ದಿನನಿತ್ಯ ಆರೋಗ್ಯದಲ್ಲಿ ಅವಿಷ್ಕಾರ ನೆಡೆಯುತ್ತಿದೆ. ದೇಶದಲ್ಲಿ ನೈಸರ್ಗಿಕ ಸಂಪನ್ಮೂಲ ಇದೆ, ನಾವು ಜಾಗೃತರಾಗ ಬೇಕು ಎಂದು ತಿಳಿಸಿದರು.
ಪಾರಂಪರಿಕ ವೈದ್ಯ ಪರಿಷತ್ ತಾಲೂಕು ಅಧ್ಯಕ್ಷ ಎಚ್.ಎಂ. ಸದಾಶಿವಯ್ಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಈಶ್ವರನಾಯಕ್, ಮಲ್ಲಪ್ಪ, ತರೀಕೆರೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರೆಡ್ಡೇರ್, ಆರ್ಎಫ್ಒ ರಂಗಸ್ವಾಮಿ, ಆಯುರ್ವೇದ ವೈದ್ಯರು, ಗ್ರಾಮ ಆರಣ್ಯ ಸಮಿತಿ ಸದಸ್ಯರು
ಸಮಾರಂಭದಲ್ಲಿ ಉಪಸ್ಥಿತರಿದ್ದರು. ನಾಟಿ ವೈದ್ಯರನ್ನು ಸನ್ಮಾನಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

