ಕಾರ್ಮಿಕ ಸಂಘಟನೆ ಪ್ರತಿಭಟನೆ
ಮೂಡಿಗೆರೆ: ಅವೈಜ್ಞಾನಿಕವಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಡಿಸೇಲ್ ದರ ಹೆಚ್ಚಳದ ಹಿಂದೆ, ಸಾರಿಗೆ ನಿಗಮಗಳನ್ನು ದಿವಾಳಿ ಮಾಡುವ ಹುನ್ನಾರವಿದೆ ಎಂದು ಕರಾರಸಾಸಂಸ್ಥೆಯ ಸಾರಿಗೆ ನಿಗಮಗಳ ಮೂಡಿಗೆರೆ ವಲಯದ ಕಾರ್ಮಿಕ ಸಂಘಟನಾ ಪ್ರಧಾನ ಕಾರ್ಯದರ್ಶಿ ಪೆದ್ದಣ್ಣ ಆರೋಪಿಸಿದರು.
ತಾಲೂಕಿನ ಬಿದರಹಳ್ಳಿಯ ಕರಾರಸಾಸಂಸ್ಥೆಯ ಘಟಕದ ಸಮೀಪದಲ್ಲಿರುವ ಸಂಘದ ಕಚೇರಿಯ ಮುಂಭಾಗದಲ್ಲಿ ಕೇಂದ್ರ ಸರ್ಕಾರದ ಡಿಸೇಲ್ ಏರಿಕೆ ನಿತಿಯನ್ನು ಖಂಡಿಸಿ. ಬುಧವಾರದಂದು ಎಐಟಿಯುಸಿ ಸಂಘಟನೆ ಆಶ್ರಯದಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ಸಾರಿಗೆ ನಿಗಮಗಳು, ಹಿರಿಯ ನಾಗರಿಕರಿಗೆ, ವಿದ್ಯಾರ್ಥಿಗಳಿಗೆ, ಅಂಗವಿಕಲರಿಗೆ, ಸ್ವಾತಂತ್ರ್ಯ ಹೋರಾಟಗಾರರಿಗೆ ವಿಶೇಷ ರಿಯಾಯಿತಿ ನೀಡಿ ಪ್ರಯಾಣಕ್ಕೆ ಅನುಕೂಲ ಮಾಡಿಕೊಟ್ಟಿದೆ. ಇಂತಹ ಸಾಮಾಜ ಸೇವೆಯಲ್ಲಿ. ತೊಡಗಿರುವ ಸಾರ್ವಜನಿಕ ಕ್ಷೇತ್ರದ ಎಲ್ಲಾ ಸಾರಿಗೆ ಸಂಸ್ಥೆಗಳಿಗೆ ಡಿಸೇಲ್ ಬೆಲೆಯನ್ನು ಖಾಸಗಿ ವಾಹನಗಳು ಖರೀದಿಸುವ ದರಕ್ಕಿಂತ ರು. 12 ಹೆಚ್ಚಳಗೊಳಿಸಿದೆ. ಇದರಿಂದಾಗಿ ಖಾಸಗಿ ವಾಹನಗಳಿಗೆ ಕಡಿಮೆ ದರದಲ್ಲಿ ಡಿಸೇಲ್ ದೊರಕುವುದರಿಂದ ಖಾಸಗಿ ಬಸ್ಗಳು. ಕರಾರಸಾಸಂಸ್ಥೆಯ ಬಸ್ ದರಕ್ಕಿಂತ ಕಡಿಮೆ ದರದಲ್ಲಿ ಸಂಚರಿಸುತ್ತಿವೆ. ಈ ಡಿಸೇಲ್ ಬೆಲೆಯ ಹಿಂದೆ ಖಾಸಗೀ ವಾಹನಗಳ ಲಾಬಿಯಿದ್ದು, ಸಾರಿಗೆ ನಿಗಮಗಳನ್ನು ದಿವಾಳಿ ಮಾಡುವ ಹುನ್ನಾರವಿದೆ ಎಂದು ಆರೋಪಿಸಿದರು. ತಕ್ಷಣವೇ ಬೆಲೆ ಇಳಿಸುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಘಟಕದ ಅಧ್ಯಕ್ಷ ರಾಮು, ಕಾರ್ಯದರ್ಶಿ ರವಿಕುಮಾರ್, ಅಚ್ಯುತ್ಕುಮಾರ್, ಉಲ್ಲಾಸ್, ಬಸವೇಗೌಡ, ಮಂಜುನಾಥ್, ಉಮೇಶ್, ಆನಂದ್ ಚಾಲಕರು, ನಿರ್ವಾಹಕರು, ಕಾರ್ಮಿಕರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

