ಜೀವ ಬೆದರಿಕೆ: 7 ಮಂದಿಯ ಬಂಧನ
ಮೂಡಿಗೆರೆ: ನ್ಯಾಯಾಲಯದಲ್ಲಿ ತನ್ನ ವಿರುದ್ದ ಸಾಕ್ಷಿ ಹೆಳಿದ ಎಂಬ ಸಿಟ್ಟಿಗೆದ್ದ ವ್ಯಕ್ತಿ ಯೋರ್ವ ಕೆಲವು ವ್ಯಕ್ತಿಗಳೊಂದಿಗೆ ಅತಿಕ್ರಮ ಪ್ರವೇಶ ಮಾಡಿ. ಜೀವ ಬೆದರಿಕೆ ಹಾಕುವುದರ ಮೂಲಕ ಅವಾಚ್ಯ ಶಬ್ಧ ನಿಂದನೆ ಮಾಡಿದ ಹಿನ್ನೆಲೆಯಲ್ಲಿ ಮೂಡಿಗೆರೆ ಪೊಲೀಸರು ಏಳು ಜನರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಹೆಸಗಲ್ನ ಸುಹಾಸ್ ಎಂಬುವವರು ಸುಬ್ರಹ್ಮಣ್ಯ ವಿರುದ್ದ ಮೂಡಿಗೆರೆ ನ್ಯಾಯಾಲಯದಲ್ಲಿ ಸಾಕ್ಷಿ ಹೇಳಿದ್ದರ ಹಿನ್ನಲೆಯಲ್ಲಿ ಕುಪಿತ ಗೊಂಡ ತ್ರಿಪುರ ಗ್ರಾಮದ ಸುಬ್ರಹ್ಮಣ್ಯ ಸೇರಿದಂತೆ ಯುವಕರ ಗುಂಪೊಂದು ಅಕ್ರಮ ಕೂಟ ಕಟ್ಟಿಕೊಂಡು. ಮನೆ ಪ್ರವೇಶಿಸಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುವುದರೊಂದಿಗೆ ಪ್ರತಿಭಟನೆ ನಡೆಸಿದ್ದು. ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಮನೆಯ ಮಾಲೀಕ ಸುಹಾಸ್ ದೂರು ನೀಡಿದ್ದು.
ಮೂಡಿಗೆರೆ ಪೊಲೀಸರು ಈ ಸಂಬಂಧವಾಗಿ ತ್ರಿಪುರ ಗ್ರಾಮದ ರಾಮು, ಮಂಜುನಾಥ್, ಮಹೇಂದ್ರ, ಪ್ರೇಂಕುಮಾರ್, ಸಂದೀಪ್, ಶರತ್, ಸಂದೇಶ್ ಅವರನ್ನು ವಶಕ್ಕೆ ತೆಗೆದುಕೊಂಡಿದ್ದು. ನಾಪತ್ತೆಯಾಗಿರುವ ಸುಬ್ರಹ್ಮಣ್ಯ ಮತ್ತಿತರರ ಶೋಧಾಕಾರ್ಯ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

