ಚಿಕ್ಕಮಗಳೂರು

ಮನೆಗಳ್ಳತನಕ್ಕೆ ವಿಫಲ ಯತ್ನ

Published On :

ನರಸಿಂಹರಾಜಪುರ: ಮಲ್ಲಂದೂರಿನ ನಾಗಭೂಷಣ್ ಎಂಬವರ ಮನೆಗೆ ನುಗ್ಗಿ ಕಳ್ಳತನ ಮಾಡುವ ವಿಫಲ ಯತ್ನ ನಡೆಸಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಮಲ್ಲಂದೂರಿನ ಕೃಷಿಕರಾದ ಎಂ.ಎಸ್. ನಾಗಭೂಷಣ್ ಮತ್ತು ಅವರ ಕುಟುಂಬದವರು ಶಿವಮೊಗ್ಗದಲ್ಲಿ ಸಂಬಂಧಿಕರ ಮನೆ ಗೃಹ ಪ್ರವೇಶಕ್ಕೆ ಶುಕ್ರವಾರ ಸಂಜೆ ತೆರಳಿದ್ದರು.
ಮನೆಯಲ್ಲಿ ಕೆಲಸದವರಾದ ಎಂ.ಡಿ. ಗಣೇಶ  ಹಾಗೂ ಆತನ ಪತ್ನಿ, ರಮೇಶ್ ಎಂಬವರು ಇದ್ದರು. ರಾತ್ರಿ 9.30ರ ಸುಮಾರಿಗೆ ವಿದ್ಯುತ್ ಇಲ್ಲದ ಸಮಯದಲ್ಲಿ  ಮನೆಯ ಉಪ್ಪರಿಗೆಯಲ್ಲಿ ಶಬ್ದ ಕೇಳಿ ಬಂದಿದೆ.
ಆಗ ಗಣೇಶ ಮಹಡಿಗೆ ಹೋಗಿ ನೋಡುವಾಗ ಅಲ್ಲಿ ಕಳ್ಳನೊಬ್ಬ ನಿಂತಿರುವುದು ಕಂಡು ಬಂದಿದೆ. ಗಣೇಶನನ್ನು ನೋಡಿದ ತಕ್ಷಣ ಆ ಕಳ್ಳ ಮನೆಯ ಹಿಂಬಾಗಿಲಿನಿಂದ ಪರಾರಿಯಾಗಿದ್ದಾನೆ.
ಈ ಬಗ್ಗೆ ಪೊಲೀಸರರಿಗೆ ದೂರು ನೀಡಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.