ಬಸ್ಸಿನಿಂದ ಬಿದ್ದು ಗಾಯ
ಶೃಂಗೇರಿ: ಶಿವಮೊಗ್ಗ ಮಂಗಳೂರು ರಾ.ಹೆ.13 ರ ದುರ್ಗಾದೇವಸ್ಥಾನ ಬಳಿ ಚಲಿಸುತ್ತಿದ್ದ ಬಸ್ಸಿನಿಂದ ಕೆಳಗೆ ಬಿದ್ದು ವ್ಯಕ್ತಿಯೊಬ್ಬರು ಗಾಯಗೊಂಡ ಘಟನೆ ಶನಿವಾರ ರಾತ್ರಿ ಸಂಭವಿಸಿದೆ. ಗಾಯಾಳು ಶಿವಪ್ಪಗೌಡ ಬಸ್ನಿಂದ ರಸ್ತೆಗೆ ಬಿದ್ದ ಪರಿಣಾಮ ಗಾಯಗೊಂಡರು. ಕೈ ಕಾಲು, ತಲೆಗೆ ಗಾಯಗೊಂಡ ಇವರನ್ನು ಪಟ್ಟಣದ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲಾಗಿದೆ.
ಮನೆ ಮನೆಗೆ ಬೆಳಕು
ಯೋಜನೆಯು ಕೇವಲ ಹಣಕಾಸು ವ್ಯವಹಾರವನ್ನಷ್ಟೇ ತನ್ನ ಉದ್ದೇಶವಾಗಿರಿಸಿಕೊಳ್ಳದೆ ಸೋಲಾರ್ ವಿತರಣೆ, ಗೋಬರ್ ಗ್ಯಾಸ್, ಶೈಕ್ಷಣಿಕ ಕ್ಷೇತ್ರಕ್ಕೆ ಸಹಾಯ ನೀಡುವ ಮೂಲಕ ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಯೋಜನೆಯ ಸಾಗರ ವಲಯದ ಯೋಜನಾಧಿಕಾರಿ ಸುನೀತಾ ನಾಯಕ್ ತಿಳಿಸಿದರು. ಅವರು ಇಲ್ಲಿಗೆ ಸಮೀಪದ ಹೆನ್ನಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಸೆಲ್ಕೊ ಸೋಲಾರ್ ಕಂಪನಿ ಸಂಯುಕ್ತಾಶ್ರಯದಲ್ಲಿ 22 ಕುಟುಂಬಗಳಿಗೆ ಸೋಲಾರ್ ದೀಪಗಳನ್ನು ವಿತರಿಸಿ ಮಾತನಾಡಿದರು. ಸೆಲ್ಕೊ ಸೋಲಾರ್ ಕಂಪನಿಯ ವಿ.ಜಿ. ಹೆಗಡೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಹೆನ್ನಿ ಒಕ್ಕೂಟದ ಅಧ್ಯಕ್ಷ ರಾಮಪ್ಪ, ಜೋಗ ಒಕ್ಕೂಟದ ಅಧ್ಯಕ್ಷೆ ಪಾರ್ವತಿ, ತಾಳಗುಪ್ಪ ವಲಯದ ಮೇಲ್ವಿಚಾರಕ ಪ್ರಶಾಂತ್ ನಾಯ್ಕ್, ಜೋಗ್ ಕಾರ್ಯಕ್ಷೇತ್ರದ ಸೇವಾನಿರತ ಸಚಿನ್ ಮತ್ತಿತರರು ಹಾಜರಿದ್ದರು.
ಚುನಾವಣೆ
ಚಿಕ್ಕಮಗಳೂರು: ನಗರದ ಅಂಡೇ ಛತ್ರ ಅಂಜುಮಾನ್ ಇಸ್ಲಾಮಿಯಾ ಸಂಸ್ಥೆಯ ಪದಾಧಿಕಾರಿಗಳ ಆಯ್ಕೆಗೆ ಮಾರ್ಚ್ 4 ರಂದು ನಗರದ ಎಂ.ಜಿ. ರಸ್ತೆಯ ತಾಜಿರಾನ್ ಶಾದಿಮಹಲ್ನಲ್ಲಿ ಚುನಾವಣೆ ನಡೆಯಲಿದೆ ಎಂದು ಚುನಾವಣಾಧಿಕಾರಿಯಾಗಿರುವ ಹಾಸನ ಉಪ ವಿಭಾಗಾಧಿಕಾರಿ ಕಚೇರಿ ತಹಸೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

