ರಂಗಭೂಮಿಯಲ್ಲಿ ಭದ್ಧತೆ ಮುಖ್ಯ
ತರೀಕೆರೆ: ರಂಗಭೂಮಿಯಲ್ಲಿ ಆಸಕ್ತಿ ಮುಖ್ಯ ಎಂದು ಕಿರುತೆರೆ ನಟ ಲೋಕೇಶ್ ಬಸವಟ್ಟಿ ತಿಳಿಸಿದ್ದಾರೆ.
ಶಾಂತಿ ಚಾರಿಟಬಲ್ ಟ್ರಸ್ಟ್, ಅರುಣೋದಯ ವಿದ್ಯಾ ಸಂಸ್ಥೆ ನಟನ ಮೈಸೂರು ವತಿಯಿಂದ ಭಾನುವಾರ ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ಏರ್ಪಡಿಸಿದ್ದ ಮಂಡ್ಯ ರಮೇಶ್ ನಿರ್ದೇಶಿಸಿರುವ ಮೂರು ಮಹತ್ವದ ನಾಟಕಗಳ ಪ್ರದರ್ಶನ ಮಂಡ್ಯ ರಮೇಶ್ ನಾಟಕೋತ್ಸವ ಸಮಾರಂಭದಲ್ಲಿ ಮಾತನಾಡಿ, ನಾಟಕೋತ್ಸವ ನೆಡೆಸುವುದು ಸುಲಭವಲ್ಲ, ಮಕ್ಕಳೆಲ್ಲಾ ಒಂದು ಎಂಬ ಭಾವನೆ ಬರುತ್ತದೆ ಎಂದರು. ಪತ್ರಕರ್ತ ಗಿರೀಶ್ ಬಾಬು ಉದ್ಘಾಟನೆ ನೆರವೇರಿಸಿ ಮಾತನಾಡಿ, ಮಕ್ಕಳಿಗೆ ವ್ಯಾವಹಾರಿಕ ಜ್ಞಾನವನ್ನು ಹೇಳಿಕೊಟ್ಟಾಗ ಮುಂದಿನ ಬದುಕು ಯಶಸ್ವಿಯಾಗುತ್ತದೆ. ರಂಗಭೂಮಿ ಮನಮುಟ್ಟುವ ಹಾಗೆ ಪ್ರದರ್ಶನ ನೀಡುತ್ತದೆ ಎಂದರು.
ಪತ್ರಕರ್ತ ವಿ. ಶೇಖರ್ ಮಾತನಾಡಿ, ತರೀಕೆರೆ ಕಲಾವಿದರಿಗೆ ಪ್ರಸಿದ್ಧಿ ಪಡೆದಿದೆ, ಅನೇಕ ಕಲಾವಿದರಿಗೆ ತರಬೇತಿ ನೀಡಲಾಗಿದೆ. ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದರು. ಬೆಂಗಳೂರು ಸಾಕ್ಷ್ಯ ಚಿತ್ರ ನಿರ್ದೇಶಕರು ಬಿ.ಎಸ್. ತಿಪ್ಪೇಸ್ವಾಮಿ ಮಾತನಾಡಿ, ಸ್ಥಳೀಯ ಪ್ರತಿಭೆಗಳನ್ನು ಗುರುತಿಸಬೇಕು ಎಂದು ತಿಳಿಸಿದರು.
ರಂಗ ನಿರ್ದೇಶಕ ಮಂಡ್ಯ ರಮೇಶ್, ಅರುಣೋದಯ ವಿದ್ಯಾ ಸಂಸ್ಥೆಯ ಡಾ.ಶ್ರೀಹರ್ಷ, ಶಾಂತಿ ಚಾರಿಟಬಲ್ ಟ್ರಸ್ಟ್ ಗೌರವಾಧ್ಯಕ್ಷ ಜಿ.ಎಚ್. ಶ್ರೀನಿವಾಸ್
ವಿದ್ಯಾರ್ಥಿಗಳು ಇದ್ದರು. ಚೋರ ಚರಣದಾಸ ನಾಟಕ ಪ್ರದರ್ಶನ ಏರ್ಪಡಿಸಲಾಗಿತ್ತು.
ಶುಶ್ರಾವ್ಯವಾಗಿ ಮೂಡಿಬಂದ ಜನಪದ ಗಾಯನ
ತರೀಕೆರೆ: ಶಾಂತಿ ಚಾರಿಟಬಲ್ ಟ್ರಸ್ಟ್, ಅರುಣೋದಯ ವಿದ್ಯಾ ಸಂಸ್ಥೆ, ನಟನ ಮೈಸೂರು ವತಿಯಿಂದ ಭಾನುವಾರ ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ನೆಡದ
ಮಂಡ್ಯ ರಮೇಶ್ ನಿರ್ದೇಶಿಸಿರುವ ಮೂರು ಮಹತ್ವದ ನಾಟಕ ಪ್ರದರ್ಶನ, ಮಂಡ್ಯ ರಮೇಶ್ ನಾಟಕೋತ್ಸವ ಸಮಾರಂಭದಲ್ಲಿ ಏರ್ಪಾಡಾಗಿದ್ದ, ಮುಗುಳಿ ಗ್ರಾಮದ ಲಕ್ಷ್ಮೀದೇವಮ್ಮ ಮತ್ತು ತಂಡದವರು ನೆಡೆಸಿಕೊಟ್ಟ ಜನಪದ ಗಾಯನ ಕಾರ್ಯಕ್ರಮ ಶುಶ್ರಾವ್ಯವಾಗಿ ಮೂಡಿಬಂದು ಎಲ್ಲರ ಮನಸೆಳೆಯಿತು.
ಜನಪದ ಗಾಯನ, ಲಾವಣಿ, ಒಗಟು ಪದ್ಯಗಳು ಚೆನ್ನಾಗಿ ಮೂಡಿಬಂತು. ಹನುಮಂತಪ್ಪ, ಮೈಲಾರಪ್ಪ, ಭಾಗ್ಯ ಅವರು ಸಹ ಗಾಯನ ಮತ್ತು ಪಕ್ಕವಾದ್ಯದಲ್ಲಿ ಭಾಗವಹಿಸಿದ್ದರು. ನಟ ಮಂಡ್ಯ ರಮೇಶ್, ಸಾಕ್ಷ್ಯ ಚಿತ್ರ ನಿರ್ದೇಶಕ ಬಿ.ಎಸ್. ತಿಪ್ಪೇಸ್ವಾಮಿ, ಪತ್ರಕರ್ತರಾದ ಗಿರೀಶ್ ಬಾಬು, ವಿ. ಶೇಖರ್ ಟ್ರಸ್ಟ್ನ ಗೌರವಾಧ್ಯಕ್ಷ ಜಿ.ಎಚ್. ಶ್ರೀನಿವಾಸ್, ಡಾ.ಶ್ರೀಹರ್ಷ, ವಿದ್ಯಾರ್ಥಿಗಳು, ಪೋಷಕರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

