ಹಠ, ಛಲ, ಧೈರ್ಯದಿಂದ ಪ್ರಗತಿ
ಚಿಕ್ಕಮಗಳೂರು: ಮಹಿಳೆ ತನ್ನ ಅನುಭವ, ಶಕ್ತಿ, ಕಾರ್ಯವಿಧಾನ, ಆಲೋಚನಾ ಶಕ್ತಿಯ ಮೂಲಕ ಅಸಾಧ್ಯಕರ ಕಾರ್ಯಗಳನ್ನೂ ನಿರ್ವಹಿಸುವ ಕ್ಷಮತೆ ಪಡೆದಿದ್ದಾಳೆ ಎಂದು ಅಖಿಲ ಕರ್ನಾಟಕ ಆರ್ಯವೈಶ್ಯ ಮಹಾಸಭಾ ಅಧ್ಯಕ್ಷೆ ಸುಶೀಲಾ ಬಾಲಕೃಷ್ಣ ಹೇಳಿದ್ದಾರೆ.
ಚಿಕ್ಕಮಗಳೂರು ಶ್ರೀವಾಸವಿ ಮಹಿಳಾ ಮಂಡಳಿಗೆ 50 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ನಗರದ ಕುವೆಂಪು ಕಲಾಮಂದಿರದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಸುವರ್ಣ ಮಹೋತ್ಸವ ಸಂಭ್ರಮ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿವೇಚನೆ ಬೆಳೆಸಿಕೊಳ್ಳಿ: ಹಠ, ಛಲ ಹಾಗೂ ಧೈರ್ಯಗಳೆಂಬ ಸಹಚರರೊಂದಿಗೆ ನಿರ್ಭೀತಿಯಿಂದ ಪ್ರಗತಿಯ ಹಾದಿಯಲ್ಲಿ ಮುನ್ನಡೆಯಬೇಕು. ಸ್ವಕಲ್ಪನೆ, ಸ್ವಪ್ರಯತ್ನ ಮತ್ತು ಸದಾ ಉತ್ಸಾಹದ ಬುಗ್ಗೆಯಂತಾಗಬೇಕು. ದುಃಖ- ದುಮ್ಮಾನಗಳು ಆಂತರ್ಯದ ಸಿರಿ ಎಂಬುದನ್ನರಿತರೆ ಮತ್ತಷ್ಟು ಆತ್ಮಶಕ್ತಿ ಹೊಂದಬಹುದು. ಸತ್ಯಾಸತ್ಯತೆಗಳು, ನ್ಯಾಯ ಅನ್ಯಾಯಗಳ ಬಗ್ಗೆ ವಿವೇಚನೆ ಬೆಳೆಸಿಕೊಳ್ಳಬೇಕು. ಆತ್ಮವಿಶ್ವಾಸ ಮತ್ತು ಸಂಯಮ ಇಲ್ಲದೆ ಪೂರ್ಣತೆ ಸಾಧ್ಯವಾಗದು ಎಂದರು.
ಮಂಡಳಿಯ ಮಾಜಿ ಅಧ್ಯಕ್ಷರಾದ ಪ್ರೇಮಾ ಕೋದಂಡರಾಮಶೆಟ್ಟಿ, ವಿಜಯಲಕ್ಷ್ಮೀ ಸುಬ್ಬರಾಜು, ಶಾಂತಾರತ್ನಮ್ಮ, ವಿನೋದ, ಸುಲೋಚನಾ ಶ್ರೀನಿವಾಸಶೆಟ್ಟಿ, ಪರಿಮಳಾ ಆನಂದ ಮತ್ತು ಜಯಂತಿಶೇಖರ್ ತಮ್ಮ ಅವಧಿಯ ಪಕ್ಷಿನೋಟ ನೀಡಿದ್ದು ಎಲ್ಲರನ್ನೂ ಸನ್ಮಾನಿಸಲಾಯಿತು.
ಶ್ರೀವಾಸವಿ ಐದು ಸಹಸ್ರನಾಮ ಕೃತಿಯನ್ನು ಅಖಿಲ ಕರ್ನಾಟಕ ಆರ್ಯವೈಶ್ಯ ಮಹಾಸಭಾ ಉಪಾಧ್ಯಕ್ಷೆ ಪಾರ್ವತಿ ಎಸ್.ಎನ್. ಶೆಟ್ಟಿ ಬಿಡುಗಡೆ ಮಾಡಿದರು. ಭದ್ರಾವತಿ ವಾಸವಿ ಮಹಿಳಾಮಂಡಳಿ ಅಧ್ಯಕ್ಷೆ ಚಂದ್ರಕಲಾ ವೆಂಕಟೇಶ್ ಮೂರ್ತಿ ಮತ್ತು ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷೆ ಬಿ.ಕೆ. ಸತೀಶ್ ಮಾತನಾಡಿ ಶುಭ ಕೋರಿದರು.
4 ಲಕ್ಷ ದೇಣಿಗೆ: ಚಿಕ್ಕಮಗಳೂರು ಶ್ರೀವಾಸವಿ ಮಹಿಳಾ ಮಂಡಳಿ ಅಧ್ಯಕ್ಷೆ ರಜನೀ ಸತೀಶ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ನವಗ್ರಹ ದೇವಸ್ಥಾನಕ್ಕೆ 4 ಲಕ್ಷ ನೀಡಲಾಗಿದೆ. ಎರಡು ವರ್ಷಗಳ ಕಾರ್ಯಗಳ ಜೊತೆಗೆ ಸುವರ್ಣ ಮಹೋತ್ಸವ ವರ್ಷಾಚರಣೆ ಯಶಸ್ವಿಯಾಗುತ್ತಿರುವುದಕ್ಕೆ ಕುಲಬಾಂಧವರ ಸಹಕಾರ ಸ್ಮರಿಸಿದರು.
ಶ್ರೀವಾಸವಿ ಕನ್ನಿಕಾಪರಮೇಶ್ವರಿ ದೇವಿಗೆ 5 ಲಕ್ಷ ವೆಚ್ಚದಲ್ಲಿ ಬಂಗಾರದ ಸಿಂಹಲಲಾಟ ಮತ್ತು ಸ್ವರ್ಣ ಕರ್ಣಗಳು ಜೊತೆಗೆ ವಜ್ರದ ಮೂಗುತಿಯೊಂದಿಗೆ ಪಿತಾಂಬರವನ್ನು ನೀಡಿದರು.
ಕರ್ನಾಟಕ ಆರ್ಯವೈಶ್ಯ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಸ್.ಎ. ವಾಸುದೇವಮೂರ್ತಿ, ಚಿಕ್ಕಮಗಳೂರು ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಎಂ. ವೆಂಕಟಸುಬ್ಬರಾವ್, ಶ್ರೀವಾಸವಿ ಸೊಸೈಟಿ ಅಧ್ಯಕ್ಷ ಎಂ.ಎ. ಶ್ರೀಧರಮೂರ್ತಿ, ಶ್ರೀವಾಸವಿ ವಿದ್ಯಾಸಂಸ್ಥೆ ಅಧ್ಯಕ್ಷ ಎಂ.ಎಸ್. ನರಸಿಂಹಮೂರ್ತಿ, ಯುವಜನ ಸಂಘದ ಅಧ್ಯಕ್ಷ ಜಿ.ಎ. ದಿನೇಶ್ ಗುಪ್ತಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಪಂಕಜಾ ಗೋಪಾಲ್ ಸ್ವಾಗತಿಸಿ, ಜಮುನಾ ಪದ್ಮಾಕರ್ ಕಾರ್ಯಕ್ರಮ ನಿರೂಪಿಸಿದರು, ಖಜಾಂಚಿ ಸರಳಾ ಶ್ರೀಧರ್ ವಂದಿಸಿದರು. ಗಾಯಿತ್ರಿ ನಟರಾಜ್ ನಿರ್ದೇಶನದ ವಾವಿವೈಭವಂ ತೆಲುಗಿನ ನೃತ್ಯರೂಪಕ ಆಕರ್ಷಕವಾಗಿ ಮೂಡಿಬಂತು. ಉದಯಸಿಂಹ ನೇತೃತ್ವದಲ್ಲಿ ಶಿವನಭಜನೆ, ಪ್ರೇಮಾ ಕೋದಂಡರಾಮಶೆಟ್ಟಿ ಭಗವದ್ಗೀತೆ ಶ್ಲೋಕಗಳು ಮತ್ತು ಎಚ್.ಎಂ. ನಾಗರಾಜ್ ರಾವ್ ಸಂಗೀತ ಸಂಯೋಜನೆಯಲ್ಲಿ ಶತಕಂಠ ನಾಮಾವಳಿ ಗಾಯನ ಗಮನ ಸೆಳೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

