ಚಿಕ್ಕಮಗಳೂರು

ರೇಲ್ವೆ ಬಜೆಟ್ 2013: ಜನ ಏನಂತಾರೆ?

Published On :

ಚಿಕ್ಕಮಗಳೂರು- ಬೇಲೂರು- ಸಕಲೇಶಪುರ ರೈಲ್ವೆಯ ನೂತನ ಮಾರ್ಗಕ್ಕೆ ಅನುಮೋದನೆ ನೀಡಿದ್ದು ಸ್ವಾಗತಾರ್ಹ. ಇದಕ್ಕೆ 10 ಕೋಟಿ ಸಾಕಾಗುವುದಿಲ್ಲ. ಹೆಚ್ಚು ಹಣ ಕೊಡಬೇಕು.
- ಪಿ. ಜಯರಾಮು.

ಚಿಕ್ಕಮಗಳೂರು- ಬೇಲೂರು- ಸಕಲೇಶಪುರ ರೈಲ್ವೆ ಸಂಪರ್ಕ ಹಲವು ವರ್ಷದ ಕನಸು, ಇದು, ನನಸಾಗಬೇಕು. ಈ ವರ್ಷದಲ್ಲಿ ಈ ಕಾಮಗಾರಿಯನ್ನು ತೆಗೆದುಕೊಂಡು ತ್ವರಿತಗತಿಯಲ್ಲಿ ಮುಗಿಸಬೇಕು
- ಸಿ.ಟಿ. ಲೋಕೇಶ್

ಜಿಲ್ಲೆಯ ಜನರಿಗೆ ಖುಷಿಯಾಗಿದೆ. ಕಡೂರು- ಚಿಕ್ಕಮಗಳೂರು ರೈಲ್ವೆ ಕಾಮಗಾರಿ ಮುಕ್ತಾಯಗೊಂಡ ನಂತರ ಇಲ್ಲಿಗೆ ಹೆಚ್ಚು ರೈಲು ಬಿಡಬೇಕು. ಈ ಬಜೆಟ್‌ನಲ್ಲಿಯೇ ಇದು ಘೋಷಣೆ ಮಾಡಬೇಕಾಗಿತ್ತು
- ಬಿ.ಆರ್. ಸೋಮಶೇಖರ್.

ಕಳೆದ ವರ್ಷಕ್ಕೆ ಹೋಲಿಸಿದರೆ ಸ್ವಲ್ಪಮಟ್ಟಿಗೆ ಒಳ್ಳೆಯ ಬಜೆಟ್. ಕಡೂರಿನಿಂದ ಚಿಕ್ಕಮಗಳೂರಿಗೆ ರೈಲು ಬಂದರೆ ಪ್ರಯೋಜನವಿಲ್ಲ. ಬೇಲೂರು- ಸಕಲೇಶಪುರಕ್ಕೆ ಸಂಪರ್ಕ ಕಲ್ಪಿಸಿದರೆ ಅನುಕೂಲವಾಗಲಿದೆ
- ಎಸ್. ನಾಗರಾಜ್.

ಚಿಕ್ಕಮಗಳೂರು- ಬೇಲೂರು- ಸಕಲೇಶಪುರಕ್ಕೆ ಹೊಸ ರೈಲ್ವೆ ಮಾರ್ಗ ನೀಡಿರುವುದು ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಒಳ್ಳೆಯದು. ಇದು, ಆದಷ್ಟು ಬೇಗ ಕಾರ್ಯರೂಪಕ್ಕೆ ಬರಬೇಕು. ಆಗ ಅನುಕೂಲವಾಗಲಿದೆ.
- ಆರ್. ರೇಣುಕಾರಾಧ್ಯ

ಚಿಕ್ಕಮಗಳೂರಿಗೆ ರೈಲು ಬರುವುದು ಕನಸ್ಸಿನ ಮಾತಾಗಿತ್ತು. ಕಡೂರು- ಚಿಕ್ಕಮಗಳೂರು ರೈಲ್ವೆ ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿದೆ. ಆದಷ್ಟು ಬೇಗ ಕಡೂರು- ಚಿಕ್ಕಮಗಳೂರು ಮಾರ್ಗ ಉದ್ಘಾಟನೆಯಾಗಲಿ.
- ಆರ್. ಶೀಲಾ.

ಹೊಸ ಮಾರ್ಗಕ್ಕೆ ಅನುಮೋದನೆ ನೀಡಿರುವುದು ಸ್ವಾಗತಾರ್ಹ. ಚಿಕ್ಕಮಗಳೂರಿಗೆ ರೈಲು ಬರುವುದರಿಂದ ತುಂಬಾ ಅನುಕೂಲವಾಗಲಿದೆ. ಕಡೂರು- ಚಿಕ್ಕಮಗಳೂರು ಕಾಮಗಾರಿ ಬೇಗ ಮುಗಿಸಬೇಕು
- ಬಿ. ರೇವನಾಥ್

ಚಿಕ್ಕಮಗಳೂರಿಗೆ ರೈಲು ಬರುತ್ತಿದೆ ಎಂಬುದು ನಾವು ಚಿಕ್ಕವರಾಗಿದ್ದಾಗ ಕೇಳಿದ್ದೇವು. ಆದರೆ, ಈವರೆಗೆ ರೈಲು ಬಂದಿಲ್ಲ. ಮುಂದೆ ಬರುತ್ತೋ ಇಲ್ಲವೋ ಗೊತ್ತಿಲ್ಲ. ಹೊಸ ಮಾರ್ಗ ಆರಂಭವಾಗುತ್ತದೆಯೋ ಇಲ್ಲವೋ ಅನುಮಾನ.
- ಎಚ್.ಎಸ್. ನಂದನ್‌ಕುಮಾರ್.

ಕಡೂರು- ಚಿಕ್ಕಮಗಳೂರು ರೈಲ್ವೆ  ಕೆಲಸ ನಿರೀಕ್ಷಿತ ಮಟ್ಟದಲ್ಲಿ ಬೇಗ ಆಗಲಿಲ್ಲ. ಮುಂದಿನ ಬಜೆಟ್ ಒಳಗೆ ಚಿಕ್ಕಮಗಳೂರು- ಬೇಲೂರು- ಸಕಲೇಶಪುರ ಹೊಸ ಮಾರ್ಗದ ಕಾಮಗಾರಿಯನ್ನು ಪೂರ್ಣಗೊಳಿಸಬೇಕು.
- ತಸ್ರೀಪ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.