ಚಿಕ್ಕಮಗಳೂರು

ಮತದಾರ ಓಲೈಕೆಗೆ ಪ್ರಚಾರ ಭರಾಟೆ

Published On :

ಚಿಕ್ಕಮಗಳೂರು: ಜಿಲ್ಲೆಯ 8 ನಗರ ಸ್ಥಳೀಯ ಸಂಸ್ಥೆಗಳಿಗೆ ಮಾರ್ಚ್ 7 ರಂದು ಮತದಾನ ನಡೆಯಲಿದ್ದು, ಎಲ್ಲರ ಕಣ್ಣು ಚಿಕ್ಕಮಗಳೂರು ನಗರಸಭೆಯ ಮೇಲೆ.
ಹಿಂದಿನ ಅವಧಿಯಲ್ಲಿ 35 ವಾರ್ಡ್ಗಳಲ್ಲಿ ಬಿಜೆಪಿ 19 ವಾರ್ಡ್ಗಳಲ್ಲಿ ಜಯಗಳಿಸಿ ಆಡಳಿತದ ಚುಕ್ಕಾಣಿ ಹಿಡಿದಿತ್ತು. ಈ ಬಾರಿ ವಿಜಯದ ಮಾಲೆ ಯಾವ ಪಕ್ಷಕ್ಕೆ ಎಂಬ ಕುತೂಹಲ ಮೂಡಿದೆ.
ಮತಯಾಚನೆ: ನಾಮಪತ್ರ ಹಿಂದಕ್ಕೆ ಪಡೆಯುವ ದಿನಾಂಕ ಮುಗಿದ ಮರು ದಿನವೇ ಅಂದರೆ ಗುರುವಾರದಿಂದಲೇ ರಾಜಕೀಯ ಪಕ್ಷಗಳು ಹಾಗೂ ಪಕ್ಷೇತರರು ಪ್ರಚಾರದ ಭರದಲ್ಲಿ ತೊಡಗಿದ್ದಾರೆ. ಕೆಜೆಪಿ ಪಕ್ಷದ ಕಾರ್ಯಕರ್ತರು ಗುರುವಾರ ತಮ್ಮ ಪಕ್ಷದ ಅಭ್ಯರ್ಥಿಯ ಪರವಾಗಿ ಡಿಫರೆಂಟ್ ಆಗಿ ಮತಯಾಚನೆ ಮಾಡಿದರು. ಇಲ್ಲಿನ ಹಳೇ ತಾಲೂಕು ಕಚೇರಿಯಿಂದ ಕೈಯಲ್ಲಿ ತಮ್ಮ ಪಕ್ಷದ ಚಿಹ್ನೆ ತೆಂಗಿನಕಾಯಿಯನ್ನು ಪ್ರತಿಯೊಬ್ಬರು ಕೈಯಲ್ಲಿ ಹಿಡಿದು ಪ್ರಮುಖ ರಸ್ತೆಯಲ್ಲಿ ತಮ್ಮ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಿದರು.
ಇಲ್ಲಿನ 11ನೇ ವಾರ್ಡ್ ವ್ಯಾಪ್ತಿಯಲ್ಲಿರುವ ಟಿಪ್ಪುನಗರದಲ್ಲಿ ಜೆಡಿಎಸ್  ಮತ್ತು ಕಾಂಗ್ರೆಸ್ ಚುನಾವಣೆ ಪ್ರಚಾರದ ಕೇಂದ್ರಗಳು ಅಕ್ಕಪಕ್ಕದಲ್ಲಿವೆ.
ಉನ್ನತ ಶಿಕ್ಷಣ ಸಚಿವ ಸಿ.ಟಿ. ರವಿ ಅವರು ಗುರುವಾರ ನಗರದ ಕೋಟೆ ಬಡಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಿದರು. ಇತರೆ ಪಕ್ಷದವರು ಸಹ ಪ್ರಚಾರದಲ್ಲಿ ಹಿಂದೆ ಬಿದ್ದಿಲ್ಲ.
ಬಿಜೆಪಿಯಿಂದ ಈ ಹಿಂದೆ ಸ್ಪರ್ಧೆ ಮಾಡಿದ್ದವರೇ ಹೆಚ್ಚಿನ ಪಾಲು ಮತ್ತೆ ಸ್ಪರ್ಧೆ ಮಾಡಿದ್ದಾರೆ. ಕಳೆದ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಜಯಗಳಿಸಿ ಬಿಜೆಪಿಗೆ ಬೆಂಬಲ ಸೂಚಿಸಿದರು ಬಿಜೆಪಿಯ ಅಧಿಕೃತ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ.
ಕಳೆದ ಬಾರಿ ನಗರಸಭೆಯ ಅಧ್ಯಕ್ಷರಾಗಿದ್ದ ಕೋಟೆ ಕೃಷ್ಣ, ಪ್ರೇಮ್ಕುಮಾರ್, ಎಚ್.ಡಿ. ತಮ್ಮಯ್ಯ ಅವರು ಮತ್ತೆ ಸ್ಪರ್ಧೆ ಮಾಡಿದ್ದಾರೆ. ಇನ್ನುಳಿದಂತೆ ಇತರೆ ಅಭ್ಯರ್ಥಿಗಳು ತಾವು ಈ ಹಿಂದೆ ಸ್ಪರ್ಧೆ ಮಾಡಿದ್ದ ವಾರ್ಡ್ಗಳಿಂದಲೇ ಮತ್ತೆ ಸ್ಪರ್ಧೆ ಮಾಡಿದ್ದಾರೆ.
35 ವಾರ್ಡ್ 198 ಅಭ್ಯರ್ಥಿಗಳು: ಚಿಕ್ಕಮಗಳೂರು ನಗರಸಭೆಯ 35 ವಾರ್ಡ್ಗಳಲ್ಲಿ 73643 ಮತದಾರರು ಇದ್ದು, ಇಲ್ಲಿ 198 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ.
ಬಿಜೆಪಿ ಎಲ್ಲಾ 34 ವಾರ್ಡ್ಗಳಿಗೆ ಸ್ಪರ್ಧೆ ಮಾಡಿದೆ. ಕಾಂಗ್ರೆಸ್ 32, ಜೆಡಿಎಸ್ 28, ಸಿಪಿಐ 5, ಕೆಜೆಪಿ 23,  ಬಿಎಸ್ಆರ್ ಕಾಂಗ್ರೆಸ್ 10, ಎಸ್ಡಿಪಿ 1 ವಾರ್ಡ್ಗಳಲ್ಲಿ ಸ್ಪರ್ಧೆ ಮಾಡಿದ್ದು, 65 ಮಂದಿ ಪಕ್ಷೇತರರು ಸ್ಪರ್ಧಾ ಕಣದಲ್ಲಿದ್ದಾರೆ.
ವಾರ್ಡ್ ನಂಬರ್ 10 ಮತ್ತು  24ರಲ್ಲಿ ತಲಾ 10 ಮಂದಿ ಸ್ಪರ್ಧೆ ಮಾಡಿದ್ದಾರೆ. 10ನೇ ವಾರ್ಡ್ನಲ್ಲಿ ಇರುವ ಮತದಾರರ ಸಂಖ್ಯೆ 2442, 24ನೇ ವಾರ್ಡ್ನಲ್ಲಿರುವ ಮತದಾರರ ಸಂಖ್ಯೆ 1501.
35 ವಾರ್ಡ್ಗಳ ಪೈಕಿ ಅತಿ ಕಡಿಮೆ ಮತದಾರರು ಅಂದರೆ 1133 ಮತದಾರರು ಹೊಂದಿರುವ 28ನೇ ವಾರ್ಡ್ನಲ್ಲಿ 8 ಮಂದಿ ಸ್ಪರ್ಧೆ ಮಾಡಿದ್ದಾರೆ. 15ನೇ ವಾರ್ಡ್ನಲ್ಲಿ 1203 ಮತದಾರರು ಇದ್ದು ಇಲ್ಲಿ 3 ಮಂದಿ ಸ್ಪರ್ಧಿಗಳು ಇದ್ದಾರೆ. 13ನೇ ವಾರ್ಡ್ನಲ್ಲಿ 1431 ಮತದಾರರು ಇದ್ದು, ಈ ವಾರ್ಡ್ನಲ್ಲಿ 4 ಮಂದಿ ಸ್ಪರ್ಧಿಗಳು ಇದ್ದಾರೆ.
5 ವಾರ್ಡ್ಗಳಲ್ಲಿ ಪ್ರಮುಖ ರಾಜಕೀಯ ಪಕ್ಷಗಳು ಮಾತ್ರ ಸ್ಪರ್ಧೆ ಮಾಡಿದ್ದರೆ, ಇನ್ನು ಕೆಲವೆಡೆ ರಾಜಕೀಯ ಪಕ್ಷಗಳಿಗಿಂತ ಪಕ್ಷೇತರ ಅಭ್ಯರ್ಥಿಗಳೇ ಹೆಚ್ಚು ಮಂದಿ ಕಣದಲ್ಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.