ಚಿಕ್ಕಮಗಳೂರು

ವಿವಿಧೆಡೆ ಗಣರಾಜ್ಯೋತ್ಸವ

Published On :

ಕಾಂಗ್ರೆಸ್ ಕಚೇರಿ
ಚಿಕ್ಕಮಗಳೂರು: ನಗರದ ವಿವಿಧೆಡೆ ಶನಿವಾರದಂದು ಗಣ ರಾಜ್ಯೋತ್ಸವ ಸಮಾರಂಭ ನಡೆಯಿತು. ಇಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಗಣ ರಾಜ್ಯೋತ್ಸವ ಸಮಾರಂಭದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಎಂ.ಎಲ್. ಮೂರ್ತಿ ಅವರು, ಧ್ವಜಾರೋಹಣ ನೆರವೇರಿಸಿದರು. ಪಕ್ಷದ ಹಿರಿಯ ಜಿಲ್ಲಾ ಉಪಾಧ್ಯಕ್ಷ ಡಾ. ಡಿ.ಎಲ್. ವಿಜಯಕುಮಾರ್, ಪ್ರಧಾನ ಕಾರ್ಯದರ್ಶಿ ಕೆ. ಮಹಮದ್,  ಶಿವಾನಂದಸ್ವಾಮಿ. ನಗರಸಭೆ ಸದಸ್ಯ ಶ್ರೀಧರ್ ಉರಾಳ್, ಮುಖಂಡರಾದ ಹಿರೇಮಗಳೂರು ರಾಮಚಂದ್ರ,ಶಹಾಬುದ್ದಿನ್, ನಳಿನಾ ಡೀಸಾ ಮಾತನಾಡಿದರು.
ರತ್ನಗಿರಿ ಕ್ರೀಡಾ, ಸಾಂಸ್ಕೃತಿಕ ಸಂಘ
ದೇಹ ಮತ್ತು ಮನಸ್ಸು ಧಣಿದಾಗ ಬದಲಾವಣೆಯನ್ನು ಬಯಸುವುದು ಸಹಜ. ಮನರಂಜನೆ ಮನಸ್ಸನ್ನು ಉಲ್ಲಾಸಗೊಳಿಸಲು ಸಹಕಾರಿ ಎಂದು ನಗರಸಭಾ ಅಧ್ಯಕ್ಷ ಸಿ.ಆರ್. ಪ್ರೇಂಕುಮಾರ್ ಹೇಳಿದ್ದಾರೆ. ಜ್ಯೋತಿನಗರದಲ್ಲಿರುವ ರತ್ನಗಿರಿ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ಆಯೋಜಿಸಿದ್ದ ಗಣ ರಾಜ್ಯೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಕಾರಾತ್ಮಕ ವಿಚಾರಗಳತ್ತ ಪ್ರೇರೇಪಿಸಲು ಒಳ್ಳೆಯ ಸ್ನೇಹಿತರ ಸಹವಾಸ ಅಗತ್ಯ. ಮನರಂಜನೆಗಾಗಿ ಇಲ್ಲಿ ಸೇರಿ ಒಂದಷ್ಟು ಸಮಾಜಕ್ಕೆ ಅನುಕೂಲವಾಗುವ ಸೇವಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿರುವುದು ಮಾದರಿ ಎಂದರು.  ರಾಷ್ಟ್ರೀಯ ಹಬ್ಬಗಳನ್ನು ಸದಸ್ಯರ ಕುಟುಂಬದ ಜೊತೆಗೆ ಕಲೆತು ಆಚರಿಸುವುದು, ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ನಡೆಸುವುದರಿಂದ ಇಲ್ಲಿ ಕೌಟುಂಬಿಕ ವಾತಾವರಣವಿದೆ. ಈರೀತಿ ಪರಸ್ಪರ ಸೇರುವುದರಿಮದ ಕುಟುಂಬದ ಕಲಹಗಳು ಸಹಜವಾಗಿ ತಪ್ಪಿ ಆ ಮೂಲಕ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೂ ಅನುಕೂಲವಾಗುತ್ತಿದೆ ಎಂದರು.
ಬಿ.ಎಚ್. ನರೇಂದ್ರ ಪೈ ಮಾತನಾಡಿದರು. ಸಂಘದ ಅಧ್ಯಕ್ಷ ಬಿ. ವಿರೂಪಾಕ್ಷಪ್ಪ ಅಧ್ಯಕ್ಷತೆ ವಹಿಸಿದ್ದರು. ಖಜಾಂಚಿ ಎಸ್.ಎಚ್. ವೆಂಕಟೇಶ್, ನಿರ್ದೇಶಕರುಗಳಾದ ಬಿ. ವೇಣುಗೋಪಾಲಪ್ರಭು ಮತ್ತು ಮುಗುವಳ್ಳಿ ಉಮೇಶ್ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.