ಡೇರಿ ಪ್ರತ್ಯೇಕಿಸಲು ಆಗ್ರಹ
ನರಸಿಂಹರಾಜಪುರ: ಹಾಸನ ಹಾಲು ಒಕ್ಕೂಟದವರು ಚಿಕ್ಕಮಗಳೂರು ಜಿಲ್ಲೆಯನ್ನು ತಮ್ಮ ಒಕ್ಕೂಟದಿಂದ ಬೇರ್ಪಡಿಸಬೇಕು ಎಂದು ಮುಖ್ಯಮಂತ್ರಿಗಳು ಸೂಚನೆ ನೀಡಿದ್ದರೂ ಇನ್ನೂ ಬೇರ್ಪಡಿಸಿಲ್ಲ. ಇದರಿಂದಾಗಿ ಇಲ್ಲಿನ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ತೊಂದರೆಯಾಗುತ್ತಿದೆ ಎಂದು ರಾಜ್ಯ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಡಿ.ಎನ್.ಜೀವರಾಜ್ ಹೇಳಿದರು.
ಅವರು ಭಾನುವಾರ ಬಿ.ಎಚ್.ಕೈಮರದಲ್ಲಿ ಸೀತೂರು ವ್ಯವಸಾಯ ಸೇವಾ ಸಹಕಾರ ಸಂಘದ ಶಾಖೆಯ ನೂತನ ಗೋದಾಮು ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಹಾಸನ ಹಾಲು ಒಕ್ಕೂಟದ ಅಧ್ಯಕ್ಷ ರೇವಣ್ಣವರ ಜೊತೆ ಚರ್ಚೆ ನಡೆಸಿದ್ದೆ. ಅವರು ಒಪ್ಪಿಗೆ ನೀಡಿದ್ದರು. ಆದರೆ, ಚಿಕ್ಕಮಗಳೂರು ಜಿಲ್ಲೆಯ ಜೆಡಿಎಸ್ ಮುಖಂಡರು ಇದಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದರು.
ಕೂಡಲೇ ಬೇರ್ಪಡಿಸಿ: ಹಾಸನದಿಂದ ಚಿಕ್ಕಮಗಳೂರು ಜಿಲ್ಲೆಗೆ ಕೆಎಂಎಫ್ ಹಾಲು ಮಾರಾಟವಾಗುತ್ತಿದೆ. ಆದರೆ, ಇಲ್ಲಿಯ ಹಾಲನ್ನು ಕೊಳ್ಳಲು ಅವರು ಸಿದ್ದವಿಲ್ಲ. ಈಗ ನರಸಿಂಹರಾಜಪುರ ಹಾಗೂ ಕೊಪ್ಪ ತಾಲೂಕುಗಳ ಹಾಲನ್ನು ಶಿವಮೊಗ್ಗ ಹಾಲು ಒಕ್ಕೂಟಕ್ಕೆ ಕಳಿಸಬೇಕಾಗಿದೆ. ಹಾಸನ ಹಾಲು ಒಕ್ಕೂಟದವರು ತಕ್ಷಣ ಚಿಕ್ಕಮಗಳೂರು ಜಿಲ್ಲೆಯನ್ನು ಬೇರ್ಪಡಿದ್ದೇವೆ ಎಂಬ ನಿರ್ಣಯ ಪಾಸು ಮಾಡಿ ಸರ್ಕಾರಕ್ಕೆ ಕಳಿಸಿಬೇಕು. ನಿರ್ಣಯ ಕೈಗೊಳ್ಳದಿದ್ದರೆ ಚಿಕ್ಕಮಗಳೂರು ಜಿಲ್ಲೆಯ ಎಲ್ಲಾ ಹಾಲನ್ನು ಕೊಳ್ಳಲು ಸಿದ್ದರಾಗಿ ಎಂದು ಅವರು ಹಾಸನ ಹಾಲು ಒಕ್ಕೂಟದವರಿಗೆ ಸವಾಲು ಹಾಕಿದರು.
ಚಿಕ್ಕಮಗಳೂರು ಜಿಲ್ಲೆಯನ್ನು ಹಾಸನದವರು ಬೇರ್ಪಡಿಸುವ ನಿರ್ಣಯ ತೆಗೆದುಕೊಂಡರೆ ಚಿಕ್ಕಮಗಳೂರು ಜಿಲ್ಲೆಗೆ ಪ್ರತ್ಯೇಕ ಹಾಲಿನ ಡೇರಿ ಮಾಡಲು ಸರ್ಕಾರ ಸಿದ್ದವಿದೆ. ಈ ಬಗ್ಗೆ ಮುಖ್ಯಮಂತ್ರಿಗಳು ಸಹ ಒಪ್ಪಿಗೆ ನೀಡಿದ್ದಾರೆ ಎಂದರು.
ವೈಯಕ್ತಿಕ ಜಗಳದ ಪರಿಣಾಮ: ಇತ್ತೀಚಿನ ಕೆಲವು ದಿನಗಳಿಂದ ವೈಯಕ್ತಿಕ ಜಗಳದ ಪರಿಣಾಮವಾಗಿ ಒತ್ತುವರಿ ಸಮಸ್ಯೆಯ ಬಗ್ಗೆ ಪರಸ್ಪರ ಅರ್ಜಿಗಳನ್ನು ಬರೆಯುತ್ತಿದ್ದಾರೆ. ಈ ಹಿಂದೆ ವೈಯಕ್ತಿಕ ಜಗಳದ ಪರಿಣಾಮವಾಗಿ ಚಿಕ್ಕಮಗಳೂರು ಜಿಲ್ಲೆಯ 55 ಸಾವಿರ ಹೆಕ್ಟೇರ್ ಕಂದಾಯ ಭೂಮಿಯು ಅರಣ್ಯಕ್ಕೆ ಸೇರಿತು. ಇದರಿಂದ ಸಾವಿರಾರು ರೈತರು ಸಂಕಷ್ಟಕ್ಕೆ ಸಿಕ್ಕಿದರು ಎಂದರು.
ಕಳಸದಲ್ಲೂ ಸಹ ಇಬ್ಬರ ವೈಯಕ್ತಿಕ ಜಗಳವೇ ಇನಾಂ ಭೂಮಿ ಪ್ರಕರಣವಾಗಿ ಹೈಕೋರ್ಟ್ ಮೆಟ್ಟಲೇರಿ ಈಗ ರೈತರು ತೊಂದರೆಗೆ ಸಿಕ್ಕಿದ್ದಾರೆ.ಒತ್ತುವರಿ ಬಗ್ಗೆ ಯಾವುದೇ ರಾಜಕೀಯ ಬೇಡ. ಎಂದು ಅವರು ಕಿವಿ ಮಾತು ಹೇಳಿದರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

