ಮಲೆನಾಡ ಮಡಿಲಲ್ಲೇ ನೀರಿಗೆ ಬರ
-ಎಸ್.ಎಲ್ .ರಾಘವೇಂದ್ರ
ಮೂಡಿಗೆರೆ: ಮಲೆನಾಡಿನ ತವರೂರೆಂದೇ ಪ್ರಖ್ಯಾತವಾಗಿರುವ ಮೂಡಿಗೆರೆ ತಾಲೂಕಿನಲ್ಲಿ ಕೆಲವು ಗ್ರಾಮಗಳಲ್ಲಿ ನೀರಿಗೆ ಹಾಹಾಕಾರ ಉಂಟಾಗಿದೆ.
ಪಪಂ ವ್ಯಾಪ್ತಿಗೆ ಸೇರುವ ಪಟ್ಟಣದ 11 ವಾರ್ಡ್ಗಳಿಗೆ ಹೇಮಾವತಿ ನದಿಯಿಂದ ನೀರು ಸರಬರಾಜುಗುತ್ತಿದ್ದು. ಒಂದಡೆ ಹೇಮಾವತಿ ನದಿಯಲ್ಲಿ ನಿರಾಂತಂಕವಾಗಿ ಅಕ್ರಮ ಮರಳು ದಂಧೆ ನಡೆಯವುದರ ಮೂಲಕ ನದಿಯ ಒಡಲು ಬರಿದಾಗಿದೆ.
ಹೀಗಾಗಿ ಹೇಮಾವತಿ ಕೆಳಮಟ್ಟದಲ್ಲಿ ಹರಿಯುತ್ತಿದ್ದು, ಈ ಬಾರಿಯ ಮಳೆಯಿಂದ ಜಲ ಬಾರದ ಪರಿಣಾಮ ಬೇಸಿಗೆ ಬಂದರೆ ಮಲೆನಾಡಿನಲ್ಲಿ ಜಲಕ್ಷಾಮ ಕಟ್ಟಿಟ್ಟ ಬುತ್ತಿಯಾಗಿದೆ.
ಮೋಟರ್ ಸಮಸ್ಯೆ: ತಾಲೂಕಿನಲ್ಲಿ ಹರಿಯುವ ಹೇಮಾವತಿ ನದಿಯ ನೀರು ತಾಲೂಕಿನ ಸುತ್ತ ಮುತ್ತಲಿನ ಗ್ರಾಪಂ ಮತ್ತು ಪಪಂಗೆ ಆಸರೆಯಾಗಿದೆ. ಆದರೆ ನೀರಿನ ಸ್ಥಾವರದಲ್ಲಿ 60 ಎಚ್.ಪಿ ಯ 2 ಮೋಟರ್ಗಳನ್ನು ಅಳವಡಿಸಲಾಗಿದ್ದು. ಒಂದು ಮೋಟರ್ ಕೈಕೊಟ್ಟು ತಿಂಗಳು ಕಳೆದರೂ ಅದನ್ನು ದುರಸ್ತಿ ಮಾಡಿಸಲು ಪಪಂ ಅಧಿಕಾರಿಗಳಿಗೆ ಪುರುಸೊತ್ತೇ ಇಲ್ಲದಂತಾಗಿದೆ. ನೀರಿನ ಸ್ಥಾವರದಿಂದ ಮೂಡಿಗೆರೆ ಪಟ್ಟಣದವರೆಗೂ ಎಕ್ಸ್ಪ್ರೆಸ್ ಲೈನ್ ಅಳವಡಿಸಲು ಹಿಂದಿನ ಅಧ್ಯಕ್ಷರುಗಳು ಯೋಜನೆ ರೂಪಿಸಿ ಒಂದೂ ಕಾಲು ಲಕ್ಷ ಇಡಲಾಗಿದ್ದು. ಆ ಹಣವನ್ನು ತಮ್ಮದಲ್ಲದ ಲೋಕೋಪಯೋಗಿ ಇಲಾಖೆಗೆ ಸೇರಿದ ಗಂಗನಮಕ್ಕಿ ರಸ್ತೆಗೆ ಸಿಮೆಂಟ್ ರಸ್ತೆ ನಿರ್ಮಿಸಲು ಬಳಸಲಾಗಿದೆ.
ವಾರಗಟ್ಟಲೆ ಪರದಾಟ: ಕುಡಿಯುವ ನೀರಿಗಿಂತ ರಸ್ತೆಯೇ ಮುಖ್ಯವಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಆರೋಪ ವ್ಯಕ್ತವಾಗುತ್ತಿವೆ. ಒಂದು ಮೋಟರ್ ಕೈಕೊಟ್ಟಲ್ಲಿ ಪಟ್ಟಣದ ಜನತೆ 6-7 ದಿವಸ ನೀರಿಲ್ಲದೆ ಪರದಾಡುವ ಪರಿಸ್ಥಿತಿ ಸರ್ವೇ ಸಾಮಾನ್ಯವಾಗಿದೆ.
ಇನ್ನು 29 ಗ್ರಾಮ ಪಂಚಾಯಿತಿ ಹೊಂದಿರುವ ಮೂಡಿಗೆರೆ ತಾಲೂಕಿನ ಕಳಸ ಭಾಗದಲ್ಲಿ ಕಳೆದ ಹಲವು ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, ಅದಕ್ಕೆ ಪರಿಹಾರ ಕಂಡುಕೊಳ್ಳಲು ಮೀನಮೇಷ ಎಣಿಸುತ್ತಿದ್ದಾರೆ.
ಕಲ್ಮನೆಯಲ್ಲಿ ಕುಡಿಯುವ ನೀರಿಗೆ 2 ಕಿ.ಮೀಟರ್ ನಡೆದು ಬರಬೇಕಾಗಿದ್ದು. ಬಣಕಲ್ ಪಟ್ಟಣ, ಗೋಣಿಬೀಡು , ತ್ರಿಪುರ, ಗುತ್ತಿ, ಮೂಲರ ಹಳ್ಳಿ, ಔಷನ, ಕೋಗಿಲೆ, ಗುತ್ತಿಹಳ್ಳಿ, ಬಿ.ಹೊಸಳ್ಲಿ, ಫಲ್ಗುಣಿ, ದಾಸರ ಹಳ್ಳಿ, ಮತ್ತಿಕಟ್ಟೆ, ಹೆಗ್ಗುಡ್ಲು ಸೇರಿದಂತೆ ಅನೇಕ ಗ್ರಾಮೀಣ ಪ್ರದೇಶಗಳಲ್ಲಿ ನೀರಿಗೆ ಹಾಹಾಕಾರ ಎದುರಿಸಲು ಜನರು ಸಿದ್ಧರಾಗಬೇಕಾಗಿದೆ.
ಮುಂಜಾಗ್ರತಾ ಕ್ರಮ: ಶೇಷಗಿರಿ
ತಾಪಂ ಅಧ್ಯಕ್ಷ ಎಂ.ವಿ. ಶೇಷಗಿರಿ ಮಾತನಾಡಿ, ಕುಡಿಯುವ ನೀರಿನ ಹಾಹಾಕಾರ ತಪ್ಪಿಸುವ ಸಲುವಾಗಿ ಜಿಪಂ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಗಿದ್ದು, ಅದಕ್ಕೆ ತಕ್ಕ ಮುಂಜಾಗ್ರತೆಯನ್ನು ಕೈಗೊಳ್ಳಲಾಗುತ್ತಿದೆ. ಜಿಪಂ ಅಧಿಕಾರಿಗಳು ಮತ್ತು ಮೆಸ್ಕಾಂ ಇಲಾಖೆ ಅಧಿಕಾರಿ ತಮ್ಮೊಂದಿಗೆ ಕೈಜೋಡಿಸುವುದರೊಂದಿಗೆ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಪ್ರಯತ್ನ ನಡೆಸುತ್ತಿದ್ದೇವೆ ಎಂದರು.
ಮೂಡಿಗೆರೆ ತಾಲೂಕಿನಲ್ಲಿ ನೀರಿನ ಸಮಸ್ಯೆ ಎದುರಾಗದಂತೆ 29 ಗ್ರಾಮ ಪಂಚಾಯತಿಗಳಿಗೆ ಲಕ್ಷಾಂತರು ರೂಪಾಯಿ ಇಡಲಾಗಿದ್ದು. ನೀರಿನ ಸಮಸ್ಯೆ ಉಂಟಾದಲ್ಲಿ ಅಂತಹ ಸಂದರ್ಭದಲ್ಲಿಯೂ ಅದನ್ನು ಬಳಸಲಾಗುವುದು. ಯಾವುದೇ ಗ್ರಾಪಂ ಗಳಲ್ಲಿ ನೀರಿನ ಸಮಸ್ಯೆ ಎದುರಾದಲ್ಲಿ ಮೊ. 9480075759, ಅಥವಾ ಕಾರ್ಯನಿರ್ವಹಣಾಧಿಕಾರಿ ಮೊ. 9480860115 ಗೆ ಸಂಪರ್ಕಿಸುವಂತೆ ಶೇಷಗಿರಿ ಅವರು ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

