ಚಿಕ್ಕಮಗಳೂರು

ಪಾನ ನಿಷೇಧ ಜಾರಿಗೆ ಆಗ್ರಹ

Published On :

ಕ.ಪ್ರ.ವಾರ್ತೆ, ತರೀಕೆರೆ,  ಜು.2
ಪಟ್ಟಣದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಕಚೇರಿ, ಜನಜಾಗೃತಿ ವೇದಿಕೆಯಿಂದ ಶಾಸಕರಿಗೆ ಹಾಗೂ ತಹಸೀಲ್ದಾರ್‌ಗೆ ಪಾನ ನಿಷೇದಕ್ಕೆ ಆಗ್ರಹಿಸಿ ಮನವಿ ನೀಡಲಾಯಿತು.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಿಂದ ಕಾರ್ಯ ನಿರ್ವಹಿಸುತ್ತಿರುವ ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮದ್ಯ ವ್ಯಸನಿಗಳ ಕೈ ಹಿಡಿದೆತ್ತುವ ಪ್ರಯತ್ನವನ್ನು ತ್ರಿಕರಣ ಪೂರ್ವಕವಾಗಿ ಮಾಡುತ್ತಿದೆ. ವೇದಿಕೆಯ ಪ್ರಯತ್ನದಿಂದಾಗಿ ಸಹಸ್ರಾರು ಕುಟಂಬಗಳ ಕಣ್ಣುಗಳಲ್ಲಿ ಹೊಸ ಬೆಳಕು ಮೂಡಿದೆ. ಮದ್ಯದಂಗಡಿಗಳ ವಿಸ್ತರಣೆ ವಿರುದ್ಧ ಹೋರಾಡಬೇಕೆಂದು ಮಹಿಳೆಯರು, ಸಮಾಜಪರ ಚಿಂತಕರು ವೇದಿಕೆಯನ್ನು ಒತ್ತಾಯಿಸುತ್ತಿದ್ದಾರೆಎಂದರು.
ಬೇಡಿಕೆಗಳಿಗೆ ವಿರುದ್ಧವಾಗಿ ಸ್ಪಂದಿಸಿದರೆ ಜಿಲ್ಲಾದ್ಯಂತ ಹೋರಾಟ ನೆಡೆಸಲಾಗುವುದೆಂದು ತಿಳಿಸಲಾಗಿದೆ. ವೇದಿಕೆ ಸದಸ್ಯ ಎ.ಸಿ. ಚಂದ್ರಪ್ಪ, ಅಸ್ಲಾಂಖಾನ್ ರಮೇಶ್ ಲಕ್ಕವಳ್ಳಿ, ಪಾಂಡುರಂಗ ಜಾದವ್, ಯೋಜನಾಧಿಕಾರಿ ಮಹೇಶ್, ದಿನೇಶ್ ಶಾಸಕರಿಗೆ ಮನವಿ ಅರ್ಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.