ಚಿಕ್ಕಮಗಳೂರು

ಬೆಂಕಿ: 5 ಜಾನುವಾರು ಸಜೀವ ದಹನ

Published On :

ತರೀಕೆರೆ: ಶುಕ್ರವಾರ ತಡರಾತ್ರಿ 12-30ರ ಸಮಯದಲ್ಲಿ ಸಮೀಪದ ಗೇರಮರಡಿ ಗ್ರಾಮದಲ್ಲಿ ಬೆಂಕಿ ಆನಾಹುತದಿಂದ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ 5 ಜಾನುವಾರುಗಳು ಸಜೀವ ದಹನಗೊಂಡ ದುರ್ಘಟನೆ ನಡೆದಿದೆ. ಎರಡು ಸಿಂಧಿ ಹಸು, ಎರಡು ಕರುಗಳು ಮತ್ತು ಒಂದು ಎತ್ತು ಬೆಂಕಿಗಾಹುತಿಯಾಗಿದ್ದು, ಜೊತೆಯಲ್ಲಿ ಕಟ್ಟಿಹಾಕಿದ್ದ ಸುಟ್ಟಿಹೋಗಿದ್ದ ಮತ್ತೊಂದು ಎತ್ತು ಭಾಗಶಃ ಸುಟ್ಟಿದ್ದು ರಕ್ಷಿಸಲಾಗಿದೆ. ಗ್ರಾಮದ ನಿವಾಸಿ ಶಿವಣ್ಣ ಎನ್ನುವವರಿಗೆ ಈ ಜಾನುವಾರುಗಳು ಸೇರಿದ್ದು ಬೇಸಾಯ ಕೆಲಸ ಮುಗಿಸಿಕೊಂಡು ಬಂದು ಎತ್ತು ಕರುಗಳ ಜೊತೆಯೇ ಸಿಂಧಿ ಹಸುಗಳನ್ನು ಕೊಟ್ಟಿಗೆಯಲ್ಲಿ ಕಟ್ಟಲಾಗಿತ್ತು ಎನ್ನಲಾಗಿದೆ. ರಾತ್ರಿ ಸುಮಾರು 12-30 ರ ಸಮಯದಲ್ಲಿ ಕೊಟ್ಟಿಗೆಯಲ್ಲಿ ಬೆಂಕಿ ಹತ್ತಿ ಉರಿಯುತ್ತಿದ್ದ ಶಬ್ಧದಿಂದ ಮನೆಯವರು,  ಅಕ್ಕಪಕ್ಕದವರು ಎದ್ದು ಬೆಂಕಿ ನಂದಿಸಿದರು. ಪಟ್ಟಣದಿಂದ ಅಗ್ನಿಶಾಮಕದಳ ಆಗಮಿಸಿ ಬೆಂಕಿಯನ್ನು ನಿಯಂತ್ರಿಸಿದರು. ಪಶು ವೈದ್ಯಾದಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.