ಬತ್ತ ಬೆಳೆ ನಾಟಿಗೆ ಸಕಾಲ
ನರಸಿಂಹರಾಜಪುರ: ತಾಲೂಕಿನಲ್ಲಿ ಈಗ ಮಳೆ ಕಡಿಮೆಯಾಗಿರುವುದರಿಂದ ಬತ್ತ ಬೆಳೆಯ ನಾಟಿ ಮಾಡಲು ಸಕಾಲವಾಗಿದ್ದು, ರೈತರು ನಾಟೀ ಮಾಡುವ ಮುನ್ನ ಕೆಲವು ಕ್ರಮಗಳನ್ನು ಅನುಸರಿಸಬೇಕು ಎಂದು ಕೃಷಿ ಇಲಾಖೆ ಸಲಹೆ ನೀಡಿದೆ.
ಒಂದು ಎಕರೆ ಬತ್ತದ ಗದ್ದೆಗೆ 2 ರಿಂದ 3 ಟನ್ ಕೊಟ್ಟಿಗೆ ಗೊಬ್ಬರ ಅಥವಾ ಕಾಂಪೋಸ್ಟ್ ಗೊಬ್ಬರ ಹಾಕಬೇಕು. ಪ್ರತಿ ಎಕರೆ ಗದ್ದೆಗೆ 30 ಕೆಜಿ ಸಾರಜನಕ, 30 ಕೆಜಿ ರಂಜಕ ಹಾಗೂ 35 ಕೆಜಿ ಪೊಟ್ಯಾಶ್ ಪೋಷಕಾಂಶಗಳನ್ನು ಕೃಷಿ ಇಲಾಖೆ ಶಿಪಾರಸು ಮಾಡಿದ್ದು, ನಾಟೀ ವೇಳೆ ಮೂಲ ಗೊಬ್ಬರವಾಗಿ 15 ಕೆಜಿ ಸಾರಜನಕ, 30 ಕೆಜಿ ರಂಜಕ ಹಾಗೂ 35 ಕೆಜಿ ಪೊಟ್ಯಾಷ್ ಒದಗಿಸುವ ರಸಗೊಬ್ಬರ ಬಳಸಬೇಕು. ಪ್ರತಿ ಎಕರೆಗೆ 8 ಕೆಜಿ ಜಿಂಕ್ ಸಲ್ಫೇಟ್ ಲಘು ಪೋಷಕಾಂಶ ಹಾಕಬೇಕು ರೈತ ಸಂಪರ್ಕ ಕೇಂದ್ರದಲ್ಲಿ ಶೇ.50 ರಿಯಾಯ್ತಿಯಲ್ಲಿ ವಿತರಿಸಲಾಗುತ್ತದೆ.
15 ಕೆಜಿ ರಸಗೊಬ್ಬರ: ಬತ್ತದ ಸಸಿಗಳನ್ನು ಪ್ರತಿ ಚದರ ಮೀಟರಿಗೆ 50 ರಿಂದ 55 ಗುಣಿಗಳಂತೆ ಹಾಗೂ ಆಳ 2 ಅಂಗುಲ ಮೀರದಂತೆ 2 ರಿಂದ 3 ಬತ್ತದ ಸಸಿಯ ಕಣೆಗಳನ್ನು ತೇಲಿಸಿ ನಾಟೀ ಮಾಡುವುದು. ನಾಟಿ ಮಾಡಿದ 1 ತಿಂಗಳಿಗೆ ಒಂದು ಎಕರೆಗೆ 15 ಕೆಜಿ ರಸಗೊಬ್ಬರ ಕೊಡಲು ತಿಳಿಸಲಾಗಿದೆ.
ಕಳೆ ನಾಶಕ ಬಳಸುವ ರೈತರು ನಾಟಿಯಾದ 3 ರಿಂದ 7 ದಿನಗಳಲ್ಲಿ ಒಂದು ಎಕರೆಗೆ 1 ಲೀ.ನಂತೆ ಕಳೆನಾಶಕವನ್ನು ಮರಳಿನಲ್ಲಿ ಮಿಶ್ರಮಾಡಿ ಹಾಕಬೇಕು. ವಿವರಗಳಿಗೆ ಸಮೀಪದ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಕೃಷಿ ಇಲಾಖೆ ಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

