ಚಿಕ್ಕಮಗಳೂರು

ಮತ್ತೆ ಚುರುಕುಗೊಂಡ ಮಳೆ

Published On :

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಅಲ್ಪಮಟ್ಟಿಗೆ ಬಿಡುವು ಕೊಟ್ಟಿದ್ದ ಮಳೆ ಗುರುವಾರ ಮತ್ತೆ ಚುರುಕುಗೊಂಡಿದೆ.
ಮಲೆನಾಡಿನಲ್ಲಿ ನಿರಂತರವಾಗಿ ಮಳೆ ಬರುತ್ತಿದ್ದು, ತುಂಗಾ ಹಾಗೂ ಭದ್ರಾ ನದಿಗಳ ನೀರಿನ ಮಟ್ಟದಲ್ಲಿ ಏರಿಕೆ ಕಂಡಿದೆ.
ಬಯಲುಸೀಮೆ ತಾಲೂಕುಗಳಾದ ತರೀಕೆರೆ ಮತ್ತು ಕಡೂರು ತಾಲೂಕಿನಲ್ಲೂ ಮಳೆ ಬರುತ್ತಿದ್ದು, ಮಳೆ ಆಶ್ರಿತ ಬೆಳೆಗಳು ಮಳೆಯಿಂದಾಗಿ ಚೇತರಿಸಿಕೊಳ್ಳುತ್ತಿವೆ. ಕಳೆದ 24 ಗಂಟೆಗಳಲ್ಲಿ ಜಿಲ್ಲೆಯ ವಿವಿಧೆಡೆ ಬಿದ್ದಿರುವ ಮಳೆಯ ವಿವರ ಈ ಕೆಳಕಂಡಂತೆ ಇದೆ.
ಮಳೆ ವಿವರ: ಚಿಕ್ಕಮಗಳೂರು ನಗರ- 5.8 ಮಿ.ಮೀ., ಜೋಳ್ದಾಳ್- 20.8, ಅತ್ತಿಗುಂಡಿ- 44.2, ಸಂಗಮೇಶ್ವರಪೇಟೆ- 33, ಮಳಲೂರು- 9.5, ಕಡೂರು- 8, ಯಗಟಿ- 12.2,  ಸಿಂಗಟಗೆರೆ- 14.8, ಪಂಚನಹಳ್ಳಿ- 14.4, ಗಿರಿಯಾಪುರ- 27, ಬೀರೂರು- 21.8, ಕೊಪ್ಪ- 59, ಹರಿಹರಪುರ- 77, ಜಯಪುರ- 43.8, ಕಮ್ಮರಡಿ- 70.3, ಬಸರೀಕಟ್ಟೆ- 51.9, ಮೂಡಿಗೆರೆ- 15.5,  ಕೊಟ್ಟಿಗೆಹಾರ- 22.4, ಗೋಣಿಬೀಡು- 22, ಕಳಸ- 41.2, ಎನ್.ಆರ್.ಪುರ- 22, ಬಾಳೆಹೊನ್ನೂರು- 29.6, ಮೇಗರಮಕ್ಕಿ- 35, ಶೃಂಗೇರಿ- 61.2, ಕಿಗ್ಗಾ- 72.7, ಕೆರೆಕಟ್ಟೆ- 98.6, ತರೀಕೆರೆ- 35, ಲಕ್ಕವಳ್ಳಿ- 39, ಅಜ್ಜಂಪುರ- 23.2, ಶಿವನಿ- 6.7, ಲಿಂಗದಹಳ್ಳಿ- 23.2, ತಣಿಗೆಬೈಲು- 23, ಹುಣಸಘಟ್ಟ- 31.8 ಹಾಗೂ ರಂಗೇನಹಳ್ಳಿಯಲ್ಲಿ 33.6 ಮಿ.ಮೀ. ಮಳೆ ಬಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.