ಚಿಕ್ಕಮಗಳೂರು

ಮೋಡಿ ಮಾಡಿದ ಶ್ಯಾನ್‌ಭಾಗ್ ಗಾಯನ

Published On :

ಚಿಕ್ಕಮಗಳೂರು: ಸಾಂಸ್ಕೃತಿಕ ಸಂಘ ಮತ್ತು ಸುಗಮ ಸಂಗೀತ ಗಂಗಾ ಆಶ್ರಯದಲ್ಲಿ ನಗರದ ಶ್ರೀ ಶಾರದಾ ಪೈ ಕಲ್ಯಾಣ ಮಂಟಪದಲ್ಲಿ ಶನಿವಾರ ಸಂಜೆ ನಡೆದ ದಾಸವಾಣಿ ಕಾರ್ಯಕ್ರಮ ಸಭಿಕರನ್ನು ಭಕ್ತಿಯ ಭಾವಪರವಶತೆಗೆ ಒಳಪಡಿಸಿತು.
ಖ್ಯಾತ ಯುವ ಗಾಯಕ ವಿದ್ವಾನ್ ಶಂಕರ್ ಶ್ಯಾನ್‌ಭಾಗ್ ಅವರ ಕಂಚಿನ ಕಂಠದ ಹಿಂದೂಸ್ತಾನಿ ಶೈಲಿಯ ಗಾಯನ ರಾಗಗಳ ಸುಧೀರ್ಘ ಆಲಾಪನೆ, ಸ್ವರಗಳ ಏರಿಳಿತ ಕೇಳುಗರನ್ನು ಮೋಡಿಗೊಳಪಡಿಸಿ ಎರಡು ಗಂಟೆಗೂ ಅಧಿಕ ಕಾಲ ಅವರನ್ನು ಹಿಡಿದಿಟ್ಟಿತ್ತು.
ಸಂತ ತುಳಸಿದಾಸರ ಕೃತಿಯೊಂದಿಗೆ ಗಾಯನವನ್ನು ಆರಂಭಿಸಿದ ಶಂಕರ್ ಶ್ಯಾನ್‌ಭಾಗ್ ನಂತರ ಪುರಂದರದಾಸರು, ಜಗನ್ನಾಥದಾಸರು ಸೇರಿದಂತೆ ಹಲವು ದಾಸಶ್ರೇಷ್ಠರ ಕೃತಿಗಳನ್ನು ತಮ್ಮ ಕಂಚಿನ ಕಂಠದಲ್ಲಿ ಹಾಡುವ ಮೂಲಕ ಸಭಿಕರ ಮನಗೆದ್ದರು.
ಧನಿಗೂಡಿಸಿದ ಪ್ರೇಕ್ಷಕರು: ಪುರಂದರದಾಸರ ಪಿಳ್ಳಂಗೋವಿಯ ಚಲ್ವ ಕೃಷ್ಣನ ಎಲ್ಲಿ ನೋಡಿದಿರಿ ಮತ್ತು ಇಷ್ಟು ದಿನ ಈ ವೈಕುಂಠ ಎಷ್ಟು ದೂರವೋ ಎನ್ನುತಲಿದ್ದೆ ಕೃತಿಗಳ ಗಾಯನ ಸಭೆಯಲ್ಲಿ ಭಕ್ತಿಯ ತರಂಗಗಳನ್ನೆಬ್ಬಿಸಿತಲ್ಲದೇ ಸಭಿಕರೂ ಗಾಯನಕ್ಕೆ ಧನಿಗೂಡಿಸುವಂತೆ ಮಾಡಿತು.
ವಿದ್ವಾನ್ ತುಕಾರಾಮ್ ತಬಲ, ಶಿವಕುಮಾರ್ ಮಹಾಂತ್ ಹಾರ್ಮೋನಿಯಂ ಮತ್ತು ತ್ರಿವಿಕ್ರಮ ಪ್ರಭು ಅವರು ತಾಳದ ಮೂಲಕ ಶ್ಯಾನ್‌ಭಾಗ್ ಅವರ ಗಾಯನಕ್ಕೆ ಉತ್ತಮ ಸಾಥ್ ನೀಡಿದರು.
ಸಾಂಸ್ಕೃತಿಕ ಸಂಘ ಮತ್ತು ಸುಗಮ ಸಂಗೀತ ಗಂಗಾ ವತಿಯಿಂದ ಶ್ಯಾನ್‌ಭಾಗ್ ಅವರನ್ನು ಸನ್ಮಾನಿಸಲಾಯಿತು. ಸಾಂಸ್ಕೃತಿಕ ಸಂಘದ ಅಧ್ಯಕ್ಷ ಎ.ಆರ್. ಶೇಷಾದ್ರಿ, ಕಾರ್ಯದರ್ಶಿ ಉಜ್ವಲ್ ಪಡುಬಿದ್ರಿ, ನಿರ್ದೇಶಕ ಗಿರಿಧರ್ ಯತೀಶ್, ಕಲ್ಯಾಣ ಮಂಟಪ ಸಮಿತಿ ಅಧ್ಯಕ್ಷ ಜಯಂತ್ ಪೈ, ಸುಗಮ ಸಂಗೀತ ಗಂಗಾದ ಕಾರ್ಯದರ್ಶಿ ಮಂಜುನಾಥ್ ಕಾಮತ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.