ಚಿಕ್ಕಮಗಳೂರು

ರಸ್ತೆ ಅಪಘಾತ: ವ್ಯಕ್ತಿ ಸಾವು

Published On :

ಶೃಂಗೇರಿ: ಮಂಗಳೂರು ಶಿವಮೊಗ್ಗ ರಾ.ಹೆ.13 13 ರ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕೆರೆಕಟ್ಟೆ ಬಳಿ ನಡೆದ ರಸ್ತೆ ಅಪಘಾತವೊಂದರಲ್ಲಿ ವ್ಯಕ್ತಿಯೊರ್ವ ಮೃತಪಟ್ಟು ಇಬ್ಬರು ಗಾಯಗೊಂಡ ಘಟನೆ ಶನಿವಾರ ಸಂಭವಿಸಿದೆ.
ಶೃಂಗೇರಿಯತ್ತ ಬರುತ್ತಿದ್ದ ಕಾರ್‌ಗೆ ಮಂಗಳೂರಿನತ್ತ ಹೋಗುತ್ತಿದ್ದ ಮಿನಿ ಲಾರಿ ಅಪ್ಪಳಿಸಿದಾಗ ಕಾರ್‌ನಲ್ಲಿದ್ದ ಬೆಳ್ತಂಗಡಿ ಮೂಲದ ಕಿನ್ಯಣ್ಣ ರೈ (60), ದಿನೇಶ್ ಶೆಟ್ಟಿ (38), ಶಕುಂತಲ ಶೆಟ್ಟಿ(34) ಗಂಭೀರ ಗಾಯಗೊಂಡರು. ಗಾಯಳುಗಳನ್ನು ಆಸ್ಪತ್ರೆಗೆ ಸಾಗಿಸುವಾಗ ತೀವ್ರ ಗಾಯಗೂಂಡ ಕಿನ್ಯಣ್ಯ ರೈ ಮಾರ್ಗ ಮದ್ಯದಲ್ಲಿಯೇ ಮೃತಪಟ್ಟರು. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಂಚನೆ: ತರೀಕೆರೆ ದಂಪತಿ ವಿರುದ್ಧ ದೂರು ದಾಖಲು
ಶಿವಮೊಗ್ಗ: ನಗರದ ಆಭರಣ ಜ್ಯುವೆಲರಿ ಅಂಗಡಿಯಲ್ಲಿ ಮುಂಗಡ ಹಣ ನೀಡಿ ಮುತ್ತಿನ ಸರ ಖರೀದಿಸಿ, ತಮ್ಮ ಸಂಬಂಧಿಕರಿಗೆ ತೋರಿಸಿ ಬರುವುದಾಗಿ ಹೇಳಿ ಹೋದವರು ಉಳಿದ ಹಣ ನೀಡದೆ ವಂಚಿಸಿದ ಘಟನೆ ನಗರದಲ್ಲಿ ನಡೆದಿದೆ.
ತರೀಕೆರೆಯ ಮಲ್ಲಿಕಾರ್ಜುನ ಮತ್ತು ಪಂಕಜ ದಂಪತಿಗಳು ಹಣ ನೀಡದೆ ವಂಚಿಸಿದವರು. ಇವರು 44 ಗ್ರಾಂ ತೂಕದ ಮುತ್ತಿನ ಸರ ತಯಾರಿಸಲು 24,421 ಸಾವಿರ ರುಪಾಯಿ ಮುಂಗಡ ಹಣ ನೀಡಿದ್ದರು. ಸರ ತಯಾರಾದ ನಂತರ ಜ್ಯುವೆಲರ್‌ಗೆ ಬಂದು ಸಂಬಂಧಿಕರಿಗೆ ತೊರಿಸಿಕೊಂಡು ಬರುತ್ತೇವೆ ಎಂದು ಹೇಳಿ ಸರ ತೆಗೆದುಕೊಂಡು ಪರಾರಿಯಾಗಿದ್ದಾರೆ. ಬಾಕಿ ಹಣ 1,23,192 ಲಕ್ಷ ಪಾವತಿಸದೆ ವಂಚಿಸಿದ್ದಾರೆ ಎಂದು ಆಭರಣ ಜ್ಯುವೆಲರ್‌ನ ಕ್ಯಾಷಿಯರ್ ಗಣಪತಿ ಶೆಣೈ ದೊಡ್ಡಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.