ಐಟಿ ದಾಳಿ ಖಂಡಿಸಿ ಪ್ರತಿಭಟನೆ
ಶೃಂಗೇರಿ: ಆದಿಚುಂಚನಗಿರಿ ಮಠದ ಮೇಲೆ ಆದಾಯತೆರಿಗೆ ಇಲಾಖೆಯವರು ನಡಸಿರುವ ಘಟನೆಯನ್ನು ಖಂಡಿಸಿ ಪಟ್ಟಣದಲ್ಲಿ ಸೋಮವಾರ ತಾಲೂಕು ಒಕ್ಕಲಿಗ, ಯುವ ಒಕ್ಕಲಿಗರ ಸಂಘಟನೆ ಬೃಹತ್ ಪ್ರತಿಭಟನೆ ನಡೆಸಿತು.
ಪಟ್ಟಣದ ಆದಿಚುಂಚನಗಿರಿ ಮಹಾದ್ವಾರದಿಂದ ಹೊರಟ ಪ್ರತಿಭಟನಾ ಮೆರವಣಿಗೆ ಆದಾಯ ತೆರಿಗೆ ಇಲಾಖೆ ವಿರುದ್ದ ಘೋಷಣೆಗಳೊಂದಿಗೆ ಪಟ್ಟಣದ ಮುಖ್ಯ ಬೀದಿಯಲ್ಲಿ ಸಾಗಿ ಪಟ್ಟಣ ಪಂಚಾಯಿತಿ ಮುಂಬಾಗದಗೌರೀಶಂಕರ ಸಭಾಂಗಣದಲ್ಲಿ ಸಮಾವೇಶಗೊಂಡಿತು.
ಪ್ರತಿಭಟನಾ ಕಾರರನ್ನು ಉದ್ದೇಶಿಸಿ ಮಾತನಾಡಿದ ತಾಲೂಕು ಒಕ್ಕಲಿಗ ಸಂಘದ ಅಧ್ಯಕ್ಷ ಹೆಚ್.ಎಂ. ರಾಜಶೇಖರ್ ಈ ದಾಳಿ ಖಂಡನೀಯವಾಗಿದೆ. ಆದಿಚುಂಚನಗಿರಿ ಮಠ ಸೇರಿದಂತೆ ದೇಶದ ಇತರೆ ಧಾರ್ಮಿಕ ಸಂಸ್ಥೆಗಳು ಸಾರ್ವಜನಿಕ ಸ್ವತ್ತಾಗಿದೆ. ಇಂತಹ ಧಾರ್ಮಿಕ ಸಂಸ್ಥೆಗಳ ಮೇಲೆ ದಾಳಿ ಮಾಡುವ ಮೊದಲು ಅಧಿಕಾರಿಗಳು ಯೋಚಿಸಬೇಕಿತ್ತು. ರಾಜ್ಯಕ್ಕೆ ಮಠದ ಕೊಡುಗೆ ಅಪಾರವಾಗಿದೆ. ಇದು ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಹುನ್ನಾರವಾಗಿದೆ ಎಂದರು.
ತಾಲೂಕು ಯುವ ಒಕ್ಕಲಿಗರ ವೇದಿಕೆ ಅಧ್ಯಕ್ಷ ರಾಜೇಂದ್ರ ಮಾತನಾಡಿದರು. ನಿವೃತ್ತ ಕನ್ನಡ ಪ್ರಾದ್ಯಾಪಕ ಪ್ರೊ. ಪುಟ್ಟಯ್ಯ,ಶ್ರೀನಿವಾಸ್, ಗಂಡಘಟ್ಟ ಮಂಜುನಾಥ್, ನಯನ ಮತ್ತಿತರರು,ನಂತರ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಒಕ್ಕಲಿಗರ ಸಂಘ ಖಂಡನೆ
ಕೊಪ್ಪ: ಇತ್ತೀಚೆಗೆ ಆದಾಯ ತೆರಿಗೆ ಇಲಾಖಾಧಿಕಾರಿಗಳು ಶ್ರೀ ಆದಿಚುಂಚನಗಿರಿ ಮಠದ ಮೇಲೆ ಏಕಾಏಕಿ ದಾಳಿ ನಡೆಸಿರುವುದನ್ನು ತಾಲೂಕು ಒಕ್ಕಲಿಗರ ಸಂಘ ಉಗ್ರವಾಗಿ ಖಂಡಿಸುತ್ತದೆ ಎಂದು ಸಂಘದ ಉಪಾಧ್ಯಕ್ಷ ಹೆಚ್.ಜಿ.ವೆಂಕಟೇಶ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅದಿಚುಂಚನಗಿರಿ ಮಹಾ ಸಂಸ್ಥಾನದ ಮಠಾಧೀಶರು ನಮ್ಮ ದೇಶದ ಹಲವು ಭಾಗಗಳಲ್ಲಿ ಶಿಕ್ಷಣ, ಆರೋಗ್ಯ ಮತ್ತು ಅನ್ನ ದಾಸೋಹಗಳೊಂದಿಗೆ ಸಮಾಜದ ವಿವಿಧ ವರ್ಗಗಳ ಲಕ್ಷಾಂತರ ಜನರ ಬದುಕಿನಲ್ಲಿ ಚೈತನ್ಯ ತುಂಬುತ್ತಿದ್ದಾರೆ. ಹೀಗಿದ್ದೂ ಶ್ರೀ ಮಠದ ಮೇಲೆ ದಾಳಿ ನಡೆಸಿರುವುದು ಭಕ್ತಾದಿಗಳಿಗೆ ಹಾಗೂ ಒಕ್ಕಲಿಗ ಜನಾಂಗದವರ ಭಾವನೆಗಳಿಗೆ ತೀವ್ರ ನೋವುಂಟು ಮಾಡಿದೆ. ದಾಳಿ ನಡೆಸಿದ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳವಂತೆ ಅವರು ಸರ್ಕಾರವನ್ನು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಹೆಚ್.ಎಸ್.ಇನೇಶ್, ಕೆ.ಆರ್, ಶ್ರೀನಿವಾಸ್ ಗೌಡ್ರು, ನಿರ್ದೇಶಕರುಗಳಾದ ಕೌರಿ ಪ್ರಕಾಶ್ , ಶಿವಪ್ಪ,ಕೆ.ಎಸ್.ಕಳಸಪ್ಪ, ಕಾಡಪ್ಪಗೌಡ. ಕೃಷ್ಣಪ್ಪ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

