ಮದಗದಕೆರೆಗೆ ಬಾಗಿನ ಅರ್ಪಣೆ
ಕ.ಪ್ರ.ವಾರ್ತೆ ಕಡೂರು ಜು.25 ತಾಲೂಕಿನ ಇತಿಹಾಸ ಪ್ರಸಿದ್ಧ ಮದಗದಕೆರೆ ಪ್ರದೇಶವನ್ನು ಪ್ರವಾಸೀ ತಾಣವನ್ನಾಗಿಸಲು ಶಾಸಕರೊಂದಿಗೆ ಚರ್ಚಿಸಿ ಸರ್ಕಾರದಿಂದ ಅನುದಾನ ತರುವ ಮೂಲಕ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಸರಸ್ವತಿಪುರ ಜಿಪಂ ಸದಸ್ಯ ಬಿ.ಪಿ. ನಾಗರಾಜ್ ಹೇಳಿದರು.
ಅವರು ಕಡೂರು ತಾಲೂಕು ಸರಸ್ವತಿಪುರ ಜಿಪಂ ವ್ಯಾಪ್ತಿ ಎಮ್ಮೇದೊಡ್ಡಿಯ ಮದಗದಕೆರೆ ಕೋಡಿಬಿದ್ದು ಹರಿಯುತ್ತಿರುವ ಹಿನ್ನೆಲೆಯಲ್ಲಿ ಪತ್ನಿ ಮಮತಾರೊಂದಿಗೆ ಹಾಗು ಕ್ಷೇತ್ರದ ಜನರೊಂದಿಗೆ ಬಾಗಿನ ಅರ್ಪಿಸಿದ ನಂತರ ಸುದ್ದಿಗಾರೊರಂದಿಗೆ ಮಾತನಾಡಿದರು.
ಬರಗಾಲವಿತ್ತು: 3 ವರ್ಷದಿಂದ ಮಳೆಯಿಲ್ಲದೆ ಬರದಿಂದ ತತ್ತರಿಸಿದ್ದ ಕಡೂರು ತಾಲೂಕಿನ ರೈತರು ಸಂಕಷ್ಟಕ್ಕೆ ಸಿಲುಕಿ ಜನ ಜಾನುವಾರು ನೀರಿಲ್ಲದೆ ಪರದಾಡುವಂತಾಗಿತ್ತು. ಇದೀಗ ಮದಗದಕೆರೆಯ ಅಧಿದೇವತೆ ಕೆಂಚಮ್ಮನವರು ಕೃಪೆ ತೋರುವ ಮೂಲಕ ಮಲೆನಾಡು ಮತ್ತು ಈ ಭಾಗದಲ್ಲಿ ಉತ್ತಮ ಮಳೆಯಾಗಿದೆ ಎಂದರು.
ಶಾಸಕ ವೈ.ಎಸ್.ವಿ. ದತ್ತರವರು ಮದಗದಕೆರೆಗೆ ಭೇಟಿ ನೀಡಲಿದ್ದು, ಮದಗದಕೆರೆಯ ದಾರಿಗೆ ಸಾರಿಗೆ ಸಂಪರ್ಕ ಅನುಕೂಲವಾಗಲು ಸುಮಾರು ರು. 2 ಕೋಟಿ ವೆಚ್ಚದಲ್ಲಿ ಓವರ್ ಬ್ರಿಡ್ಜ್ ಮಾಡಿಸಲು ಕ್ರಮ ಕೈಗೊಳ್ಳುವಂತೆ ಈಗಾಗಲೇ ಮನವರಿಕೆ ಮಾಡಲಾಗಿದೆ ಎಂದರು.
ಬಾಕಿನಕೆರೆ ಸೇರಿದಂತೆ ಮದಗದಕೆರೆಯನ್ನು ಪ್ರವಾಸೋದ್ಯಮ ಕ್ಷೇತ್ರವನ್ನಾಗಿ ಮಾಡಿ ಮೂಲ ಸೌಕರ್ಯ ಒದಗಿಸಲು ಸರ್ಕಾರದಿಂದ ಒದಗಿಸುವ ಮೂಲಕ ವಿವಿಧ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ವೈ.ಎಸ್.ವಿ. ದತ್ತರವರ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದವರು ಹೇಳಿದರು.
ಪ್ರಸ್ತಾವನೆ: ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ಹಾಗೂ ದೇವೇಗೌಡರ ಸಂಸದರ ನಿಧಿಯಿಂದ ಎಮ್ಮೇದೊಡ್ಡಿ ರಸ್ತೆ ಸೇರಿದಂತೆ ವಿವಿಧ ರಸ್ತೆ ಅಭಿವೃದ್ಧಿಗೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ ಎಂದು ನಾಗರಾಜ್ ತಿಳಿಸಿದರು.
ಎಮ್ಮೇದೊಡ್ಡಿ ಗ್ರಾಪಂ ಮಾಜಿ ಅಧ್ಯಕ್ಷ ಸುಧಾಕಾಂತ್, ಬೀರೂರು ಜೆಡಿಎಸ್ ಯುವ ಘಟಕದ ಅಧ್ಯಕ್ಷ ಉಮಾಶಂಕರ್, ಪುರಸಭಾ ಸದಸ್ಯ ಕವಿತಾ ಹರಿಪ್ರಸಾದ್, ವಸಂತ ರಮೇಶ್, ಭಾರತಿ ಚಂದ್ರಶೇಖರ್,
ಮುಖಂಡರಾದ ಸೋಮೇಶ್, ಆನಂದಪ್ಪ, ರಾಮಣ್ಣ, ಹೆಳವರಹಟ್ಟಿ ಚನ್ನಪ್ಪ, ಸಿದ್ದಮ್ಮ, ನಿಂಗಪ್ಪ, ಮೂರ್ತಿ, ಸಿದ್ದಪ್ಪ, ರಮೇಶ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

