ಅಂಚೆ: ಬಿಲ್ ಪಾವತಿ ಪ್ರಾರಂಭ
ಅಂಚೆ ಕಚೇರಿಗಳ ಮೂಲಕ ಮೆಸ್ಕಾಂ ಬಿಲ್ ಪಾವತಿ ಪ್ರಾರಂಭವಾಗಿದ್ದು, ಸಾರ್ವಜನಿಕರು ತಮ್ಮ ಹತ್ತಿರ ಅಂಚೆ ಕಚೇರಿಗಳಲ್ಲಿ ಮೆಸ್ಕಾಂ ಬಿಲ್ ಪಾವತಿಸಬಹುದಾಗಿದೆ. ಒಂದು ಸಾವಿರ ರೂ. ಒಳಗೆ ಇರುವ ಬಿಲ್ಲುಗಳನ್ನು ನಗದು ರೂಪದಲ್ಲಿ ಮಾತ್ರ ಸ್ವೀಕರಿಸಲಾಗುವುದು. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದೆಂದು ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೇಗೂರಿಗೆ ಟವರ್
ಚಿಕ್ಕಮಗಳೂರು: ಬಹುದಿನಗಳ ಕನಸಾಗಿದ್ದ ಕೊಪ್ಪ ತಾಲೂಕು ಮೇಗುಂದಾ ಹೋಬಳಿಯ ನಕ್ಸಲ್ ಬಾಧಿತ ಪ್ರದೇಶವಾದ ಮೇಗೂರಿಗೆ ಬಿಎಸ್ಎನ್ಲ್ ಟವರ್ ನಿರ್ಮಾಣಗೊಳ್ಳುವ ಭಾಗ್ಯ ನನಸಾಗಲಿದ್ದು, ಇತ್ತೀಚೆಗೆ ಬಿಎಸ್ಎನ್ಎಲ್ ಅಧಿಕಾರಿ ಗೋಪಾಲಕೃಷ್ಣ ಮತ್ತು ತಂಡ ಮೇಗೂರು ದೇವಸ್ಥಾನ ಸುತ್ತ ಮುತ್ತ ಪರಿಶೀಲನೆ ನಡೆಸಿದ್ದಾರೆ. ಜಯಪುರ, ಕಚಿಗೆ, ಕೊಪ್ಪ ಗೋಪುರಗಳು ಈ ಭಾಗದ ಜನರಿಗೆ ಯಾವುದೇ ಪ್ರಯೋಜನಕಾರಿಯಾಗದೆ ಸಂಪರ್ಕ ವ್ಯವಸ್ಥೆಯಿಂದ ವಂಚಿತವಾಗಿವೆ. ಹೊಸ ಟವರ್ ನಿರ್ಮಾಣ ವಿಷಯ ಗ್ರಾಮಸ್ಥರನ್ನು ಸಂತೋಷಪಡಿಸಿದೆ. ಹಲವು ವರ್ಷದ ಕನಸು ನನಸಾಗುತ್ತಿರುವ ಸೂಚನೆ ಕಾಣುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

