ಚಿಕ್ಕಮಗಳೂರು

13 ವರ್ಷದ ಬಳಿಕ ತುಂಬಿದ ಕೆರೆ

Published On :

ಕ.ಪ್ರ.ವಾರ್ತೆ  ಕಡೂರು  ಜೂ. 3
ಹದಿಮೂರು ವರ್ಷಗಳಿಂದಲೂ ತುಂಬದೇ ಇದ್ದ ಕೆರೆಯೊಂದು ಈ ಭಾರಿ ಬಿದ್ದ ಭಾರೀ ಮಳೆಗೆ ತುಂಬುವ ಮೂಲಕ ಮತಿಘಟ್ಟ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಗಳ ಜನರಲ್ಲಿ ಸಂತಸ ತಂದಿದೆ.                             
 ಕಡೂರು ತಾಲೂಕು ಮತಿಘಟ್ಟ ಗ್ರಾಮದ ದೇವೀರಹಳ್ಳಿ ರಸ್ತೆಯ ಪಕ್ಕದಲ್ಲಿರುವ ಇತಿಹಾಸ ಪ್ರಸಿದ್ದ ಶ್ರೀ ಕಲ್ಲೇಶ್ವರಸ್ವಾಮಿ ಕೆರೆಯು ಕಳೆದ 13 ವರ್ಷದಿಂದ ಬರಗಾಲದಿಂದಾಗಿ ತುಂಬದೆ ಜನರು ನೀರಿಗಾಗಿ ಪರಿತಪಿಸುತ್ತಿದ್ದರು.  ಗ್ರಾಮದ ಹಿರಿಯರು ಹೇಳುವ ಹಾಗೆ ಈ ಕೆರೆಯಿಂದಲೇ ಊರ ದೇವರ ಪುಣ್ಯದ ಕಾರ್ಯಗಳಿಗೆ ಪುಣ್ಯಾಹ ಕಾರ್ಯ ಮಾಡುವ ಉದ್ದೇಶದಿಂದ ಇಲ್ಲಿಯೇ ದೇವರುಗಳನ್ನು ಕರೆತಂದು ಹೊಳೆಪೂಜೆ ಮಾಡಿ ಮತ್ತು ಗಂಗೆ ಪೂಜೆ ನೆರವೇರಿಸುವ ಮೂಲಕ ದೇವರ ಜಾತ್ರಾ ಮಹೋತ್ಸವಗಳಿಗೆ ಚಾಲನೆ ನೀಡಲಾಗುತ್ತಿತ್ತು.
 ಆದರೆ ಬರಗಾಲದಿಂದಾಗಿ ಅಂತರ್ಜಲವೂ ಕಡಿಮೆಯಾಗಿ ನೀರು ಸಿಗದೆ ಜನ ಕುಡಿಯುವ ನೀರಿಗಾಗಿ ಪರಿತಪಿಸುತ್ತಿದ್ದರು ಎಂದರು.                               

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.