ಚಿಕ್ಕಮಗಳೂರು

ಗುಟ್ಕಾ ನಿಷೇಧ ಹಿಂಪಡೆಯಿರಿ

Published On :

ಕ.ಪ್ರ.ವಾರ್ತೆ  ಕಡೂರು  ಜೂ. 3 ರಾಜ್ಯ ಸರ್ಕಾರ ಗುಟ್ಕಾ ನಿಷೇಧ ಮಾಡಿರುವ ಕ್ರಮದಿಂದ ಅಡಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿ ಬೀದಿಗೆ ಬೀಳುವ ಸಂಭವ ಇರುವುದರಿಂದ ಸರ್ಕಾರ ಈ ಬಗ್ಗೆ ಪರಾಮರ್ಶಿಸಿ, ರೈತರ ಪರವಾಗಿ ನಿಲುವು ತೆಗೆದುಕೊಳ್ಳಬೇಕು ಎಂದು ಬಿಜೆಪಿ ರಾಜ್ಯ ಪರಿಷತ್ ಸದಸ್ಯ ಅರೇಕಲ್ ಪ್ರಕಾಶ್ ಆಗ್ರಹಿಸಿದ್ದಾರೆ.                                   
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯ ಸರ್ಕಾರ ಏಕಾಏಕಿ ಗುಟ್ಕಾ ನಿಷೇಧ ಜಾರಿಗೆ ಮಾಡಿರುವುದರಿಂದ ರಾಜ್ಯದ ಅಡಕೆ ಬೆಳೆಗಾರರು ಅತಂಕಕ್ಕೆ ಒಳಗಾಗಿದ್ದಾರೆ. ಸರ್ಕಾರ ಈ ಬಗ್ಗೆ ಯಾವುದೇ ಪೂರ್ವಾಪರವಾಗಿ ಬೆಳೆಗಾರರೊಂದಿಗೆ ಚರ್ಚಿಸದೆ ಹಾಗೂ ರೈತರ ಅಭಿಪ್ರಾಯ ಪಡೆಯದೆ ಮತ್ತು ಪರ್ಯಾಯ ಮಾರ್ಗವನ್ನೂ ಪ್ರಕಟಿಸದೆ ಗುಟ್ಕಾ ಮತ್ತು ಪಾನ್ ಮಸಾಲ ನಿಷೇಧಿಸಿದ್ದು ಸರಿಯಲ್ಲ ಎಂದರು.
ಆತುರದ ಕ್ರಮ ಸರಿಯಲ್ಲ: ಸರ್ಕಾರದ ಈ ಆತುರದ ಕ್ರಮ ಸರಿಯಲ್ಲ. ಆದರೆ ಕೇಂದ್ರ ಸರ್ಕಾರ ಅಡಿಕೆಗೆ ಒಂದು ನೀತಿ ಮತ್ತು  ತಂಬಾಕಿಗೆ ಒಂದು ರೀತಿ ಅನುಸರಿಸಿ, ಗುಟ್ಕಾ ನಿಷೇಧ ಮಾಡಿ ತಂಬಾಕಿನ ಉತ್ಪನ್ನಗಳು ಮಾರುಕಟ್ಟೆಯಲ್ಲಿ ದೊರೆಯುವಂತೆ ಮಾಡಿದೆ. ಇದರಿಂದ ತಂಬಾಕು ಕೂಡ ಹಾನಿಕಾರಕ ವಸ್ತು ಎಂಬುದರ ಅರಿವು ಸರ್ಕಾರಕ್ಕಿದ್ದರೂ ಕೂಡ ಅಡಕೆ ಮಿಶ್ರಣದ ಗುಟ್ಕಾಕ್ಕೆ ಮಾತ್ರ ಏಕೆ ಈ ನಿಷೇಧ ಎಂದು ಪ್ರಶ್ನಿಸಿದ್ದಾರೆ.
ರಾಜ್ಯ ಸರ್ಕಾರ ಗುಟ್ಕಾ ಮತ್ತು ಪಾನ್ ಮಸಾಲ ನಿಷೇಧಿಸುವ ಬದಲು ಗುಟ್ಕಾ ಮತ್ತು ಪಾನ್ ಮಸಾಲಾಕ್ಕೆ ಮಿಶ್ರಣ ಮಾಡುವ ಹಾನಿಕಾರಕ ರಾಸಾಯನಿಕ ಪದಾರ್ಥಗಳನ್ನು ಮಿಶ್ರಣ ಮಾಡದಂತೆ ನಿರ್ಭಂಧ ಹೇರಿ ತಯಾರಿಸಿ ಮಾರಾಟ ಮಾಡುವಂತೆ ಕ್ರಮ ಕೈಗೊಂಡಲ್ಲಿ ರಾಜ್ಯದ ಲಕ್ಷಾಂತರ ಅಡಕೆ ಬೆಳೆಗಾರರು ಉಳಿಯುತ್ತಾರೆ ಎಂದವರು ಹೇಳಿದರು.
ಸರ್ಕಾರ ಈ ರೀತಿ ಗುಟ್ಕಾ ನಿಷೇಧಿಸಿರುವ ಕ್ರಮದಿಂದ ಮಾರುಕಟ್ಟೆಯಲ್ಲಿ ಅಡಕೆ ಧಾರಣೆ ಕೇವಲ  ರು. 2,000ಕ್ಕೂ ಕಡಮೆಗೆ ಕುಸಿದು ರೈತರು ಮತ್ತಷ್ಟು ಆತಂಕಕ್ಕೆ ಒಳಗಾಗಿಗ್ದಾರೆ. ರೈತರ ಹಿತರಕ್ಷಣೆ ಮಾಡಬೇಕಾದುದು ಒಂದು ಜವಬ್ದಾರಿಯುತ ಸರ್ಕಾರದ ಕರ್ತವ್ಯವಾಗಿದ್ದು, ಸರ್ಕಾರವೇ ಇಂತಹ ಆತುರದ ನಿರ್ಧಾರ ಕೈಗೊಂಡು ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ಈಡುಮಾಡಿದೆ ಎಂದರು.
ಈ ಬಗ್ಗೆ ತಜ್ಞರೊಂದಿಗೆ ಚರ್ಚಿಸಿ ಸರ್ಕಾರ ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಿ ರೈತರಿಗೆ ಪರ್ಯಾಯ ಮಾರ್ಗ ಕಲ್ಪಿಸುವ ಮೂಲಕ ಕ್ರಮ ಕೈಗೊಂಡು ರಾಜ್ಯದ ರೈತರ ಹಿತ ಕಾಪಾಡಬೇಕು ಎಂದು ಪ್ರಕಾಶ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಸ್ವಾಗತಾರ್ಹ
ರಾಜ್ಯ ಸರ್ಕಾರ ಗುಟ್ಕಾ ನಿಷೇಧಕ್ಕೆ ಮುಂದಾಗಿರುವುದು ಸ್ವಾಗತಾರ್ಹ ಕ್ರಮ ಎಂದು ಯುವಶಕ್ತಿ ಮಾನವತಾ ವೇದಿಕೆ ಅಧ್ಯಕ್ಷ ಸತೀಶ್ ಹೇಳಿದ್ದಾರೆ. ಗುಟ್ಕಾ ನಿಷೇಧದ ಬಗ್ಗೆ ರಾಜ್ಯ ಸರ್ಕಾರ ಸ್ಪಷ್ಟ ನಿಲುವು ತಾಳಿದ್ದು, ಪ್ರತಿಭಟನೆಗೆ ಒತ್ತಡಕ್ಕೆ ಮಣಿಯದೇ ಕಟ್ಟುನಿಟ್ಟಾಗಿ ಜಾರಿಗೆ ತಂದಿರುವುದು ಸ್ವಾಗತಾರ್ಹ ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.