ತಾಪಂ ಸಭೆಯಲ್ಲಿ 'ಮೇವಿನ ಕೊರತೆ'
ಕ.ಪ್ರ.ವಾರ್ತೆ ಕಡೂರು ಜೂ.4
ಮೇವಿದ್ದರೂ ನೀಡಲು ಟಾಸ್ಕ್ ಫೋರ್ಸ್ ಸಮಿತಿ ಅಪ್ಪಣೆ ಬೇಕು, ಜಾನುವಾರುಗಳಿಗೆ ಕಾಲುಬಾಯಿ, ಚಪ್ಪೆರೋಗ ಬಂದು ಸಾವಪ್ಪಿದ್ದರೂ ಇಲಾಖೆ ನಿರ್ಲಕ್ಷ್ಯ, ತಾಪ ಸಮಿತಿಯಲ್ಲಿ ಬಿಲ್ ನೀಡದಿರುವಂತೆ ನಿರ್ಣಯಿಸಿದ್ದರೂ ಬಿಲ್ ಪಾವತಿ, ಆರ್ಟಿಇನಲ್ಲಿ ಮಕ್ಕಳ ಸೇರ್ಪಡೆ ಬಗ್ಗೆ ಶಿಕ್ಷಣ ಇಲಾಖೆಯಿಂದ ಸದಸ್ಯರಿಗೆ ಮಾಹಿತಿ ಇಲ್ಲ, ಸಭೆಯಲ್ಲಿ ಆಗುವ ನಿರ್ಣಯ ಒಂದಾದರೆ ನಡೆಯುವುದೇ ಮತ್ತೊಂದು...
ಇದು ಕಡೂರು ತಾಪ ಸಾಮಾನ್ಯ ಸಭೆಯಲ್ಲಿ ಸದಸ್ಯರು ಮತು ಅಧಿಕಾರಿಗಳ ಚರ್ಚೆಯಲ್ಲಿ ಕೇಳಿಬಂದ ಮಾತುಗಳು. ಕಡೂರು ತಾಪ ಸಭಾಂಗಣದಲ್ಲಿ ಅಧ್ಯಕ್ಷ ಓಂಕಾರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆರಂಭದಲ್ಲಿ ಕೈಗಾರಿಕೆ ಇಲಾಖೆಯ ವಿಸ್ತರಣಾಧಿಕಾರಿ ವೀರೇಶನಾಯ್ಕ ಸಭೆಗೆ ಮಾಹಿತಿ ನೀಡಿ, ಗ್ರಾಮೀಣ ಪ್ರದೇಶದ 16 ಜನ ಕರಕುಶಲ ವೃತ್ತಿಯವರಿಗೆ ತಲಾ 5 ಸಾವಿರ ರು. ವೃತ್ತಿ ಪರಿಕರ ವಿತರಿಸಿದೆ ಎಂದರು.
ತರಕಾರಿ ಸಂರಕ್ಷಣೆ: ಸಮಾಜ ಕಲ್ಯಾಣ ಇಲಾಖೆಯ ಅಧೀಕ್ಷಕ ಶಂಕರಮೂರ್ತಿ ಮಾತನಾಡಿ, ಪಟ್ಟಣದ ರೈಲ್ವೆ ಗೇಟ್ ಪಕ್ಕದ ಮುಸಾಫಿರ್ ಖಾನೆ ಜಾಗದಲ್ಲಿ ಅಂಬೇಡ್ಕರ್ ಭವನ ಮತ್ತು ವಾಣಿಜ್ಯ ಮಳಿಗೆಗಳ ನಿರ್ಮಾಣಕ್ಕೆ ಸಭೆ ಅನುಮತಿ ನೀಡಬೇಕು ಎಂದರು.
ತೋಟಗಾರಿಕಾ ಇಲಾಖೆ ನಿರ್ದೇಶಕ ಸಂಜಯ್ ತಾಲೂಕಿನ ಪ.ಜಾ.ಮತ್ತು ಗಿರಿಜನರ ಉಪಯೋಗ ಯೋಜನೆಯಲ್ಲಿ ರೈತರ ತೆಂಗಿನ ತೋಟ ನಿರ್ಮಾಣದ ಪ್ರತೀ ಘಟಕಕ್ಕೆ 2 ಸಾವಿರ ರು. ಔಷಧಿ ನೀಡಲಾಗುವುದು.
ತರಕಾರಿ ಸಂರಕ್ಷಣೆ ಮತ್ತು ತಂತ್ರಜ್ಞಾನದ ಬಗ್ಗೆ 2 ದಿನದ ತರಬೇತಿ ಮತ್ತು ಅಲಂಕಾರಿಕ ಗಿಡಗಳ ವಿತರಣೆ, ಆಯ್ದ ಫಲಾನುಭವಿಗಳಿಗೆ ತೆಂಗು, ಮಾವು, ಸಪೋಟ, ನಿಂಬು ಇತ್ಯಾದಿ ಗಿಡ ವಿತರಣೆ ಮತ್ತು ರೋಗಭಾಧೆ ನಿಯಂತ್ರಣಕ್ಕೆ ಶೇ.50 ರಷ್ಟು ಸಹಾಯಧನ ವಿತರಿಸಲಾಗುವುದು ಎಂದರು.
ಅಂಗನವಾಡಿ ಕೇಂದ್ರಗಳ ದುರಸ್ತಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯಲ್ಲಿ 877 ಅಂಗನವಾಡಿ ಕಾರ್ಯಕರ್ತೆಯರಿದ್ದು 13ಲಕ್ಷರು. ಅಂಗನವಾಡಿ ಕೇಂದ್ರಗಳ ದುರಸ್ತಿಗೆ ಅನುದಾನ ಬೇಕಾಗಿದೆ ಎಂದಾಗ ಸದಸ್ಯ ನಿಂಗಪ್ಪ ಬಹಳಷ್ಟು ಅಂಗನವಾಡಿ ಕೇಂದ್ರಗಳಲ್ಲಿ ಕಳಪೆ ಕಾಮಗಾರಿ ನಡೆಯುತ್ತಿದ್ದು 1 ಚೀಲ ಸಿಮೆಂಟ್ಗೆ 3 ಚೀಲ ಮರಳು ಮಿಶ್ರಣ ಮಾಡಿ ಕಾಮಗಾರಿ ಮಾಡುತ್ತಿದ್ದರೂ ಇಲಾಖೆ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.
ಸದಸ್ಯೆ ಚಂದ್ರಕಲಾ ಸಖರಾಯಪಟ್ಟಣ ಮತ್ತು ಬಾಣೂರು ಹೋಬಳಿ ಸುತ್ತ ಮುತ್ತಲಿನ ಕೇಂದ್ರಗಳಲ್ಲಿ ಗರ್ಭಿಣಿ ಬಾಣಂತಿಯರಿಗ ನೀಡುವ ಆಹಾರ ಸರಿಯಾಗಿ ವಿತರಿಸುತ್ತಿಲ್ಲ. ಸದಸ್ಯರಾದ ಪ್ರಭುಕುಮಾರ್, ಆರ್. ಶಿವಕುಮಾರ್ ಮತ್ತು ಎ.ಇ. ರತ್ನ ಮಾತನಾಡಿ, ಆಹಾರದ ಚೀಲದಲ್ಲಿ 52 ಕೆಜಿ ಎಂದು ಇರುತ್ತದೆ. ಆದರೆ ಕಡಿಮೆ ಇದ್ದರೂ ಕ್ರಮ ತೆಗೆದುಕೊಂಡಿಲ್ಲ ಎಂದು ಸಿಡಿಪಿಒ ಓಂಕಾರಪ್ಪನವರನ್ನು ಪ್ರಶ್ನಿಸಿದಾಗ, ಈ ಬಗ್ಗೆ ಕ್ರಮ ವಹಿಸಲಾಗುವುದು ಎಂದು ಉತ್ತರಿಸಿ, ಸರ್ಕಾರ ಶಿಶು ಶ್ನೇಹಿ ಶೌಚಾಲಯಗಳನ್ನು ಕೆರೆಸಂತೆ, ಬಾಣೂರು, ವೈ. ಮಲ್ಲಾಪುರ, ಉಡುಗೆರೆ ಹೋಚೀಹಳ್ಳಿ ಮತ್ತಿತರ ಕಡೆ ಮಂಜೂರು ಮಾಡಿದ್ದು, ಸದಸ್ಯರು ಅನುಮೋದನೆ ನೀಡಬೇಕು ಎಂದರು.
ಪ್ಲಾಸ್ಟಿಕ್ ಕ್ರೇಟ್: ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ, ಈ ಭಾರಿ ಯಾವುದೇ ಕೆರೆಕಟ್ಟೆಗಳಿಗೆ ಮೀನುಮರಿ ಬಿಟ್ಟಿಲ್ಲ.
ಆದರೆ 45 ಸಾವಿರರು. ವೆಚ್ಚದಲ್ಲಿ ಪ.ಜಾತಿಗೆ ಸೇರಿದ ಮೀನುಗಾರರಿಗೆ ಬಲೆ ಮತ್ತು ಪ್ಲಾಸ್ಟಿಕ್ ಕ್ರೇಟ್ಗಳನ್ನು ನೀಡಲು ಅನುಮೋದನೆ ನೀಡಬೇಕು ಎಂದರು. ಸದಸ್ಯ ಪ್ರಭುಕುಮಾರ್ ಮಾತನಾಡಿ, ಹಿರೇನಲ್ಲೂರು ಶಾಲೆಯ ಸರ್ವ ಶಿಕ್ಷಣ ಅಭಿಯಾನಕ್ಕೆ ಸಂಭಂದಿಸಿ ಬಿಲ್ ಪಾವತಿ ಮಾಡಬಾರದೆಂದು ತಾಪಂ ಸಭೆಯಲ್ಲಿ ನಿರ್ಣಯಿಸಿದ್ದರೂ ಸಂಭಂದಿಸಿದ ಎಂಜಿನಿಯರ್ ಬಿಲ್ ನೀಡಿ, ಹಣ ಡ್ರಾ ಮಾಡಲಾಗಿದೆ ಎಂದು ಆರೋಪಿಸಿ, ಇಂದಿನ ಸಭೆ ಈ ಬಗ್ಗೆ ಏನು ನಿರ್ಣಯ ತೆಗೆದುಕೊಳ್ಳುತ್ತದೆ ಅದನ್ನು ತಮಗೆ ನೀಡಿದಲ್ಲಿ ತಾವು ಕಾನೂನು ಮೊರೆ ಹೋಗುವುದಾಗಿ ಹೇಳಿದರು.
ಅನುಮತಿ ಅಗತ್ಯ: ಈ ನಡುವೆ ಹುಲಿಕೆರೆ ಸದಸ್ಯ ನೀಲಂಕಠಪ್ಪ, ಗೋಶಾಲೆಗಳನ್ನು ಮುಚ್ಚಿದ್ದರೂ ಗೋವುಗಳು ಮೇವಿಲ್ಲದೆ ಬಳಲುತ್ತಿವೆ. ಆದರೂ ಮೇವು ವಿತರಿಸುತ್ತಿಲ್ಲ ಎಂದಾಗ ಪಶುಪಾಲನಾ ಇಲಾಖೆಯ ನಿರ್ದೇಶಕ ಲಿಂಗರಾಜ್ 160 ಟನ್ ಮೇವು ದಾಸ್ತಾನಿದೆ.
ವಿತರಿಸಲು ಟಾಸ್ಕ್ ಫೋರ್ಸ್ ಸಮಿತಿ ಅನುಮತಿ ಅಗತ್ಯ ಎಂದಾಗ ದನಕರುಗಳು ಸತ್ತಮೇಲೆ ಮೇವು ನೀಡುತ್ತೀರಾ ಎಂದು ನೀಲಕಂಠಪ್ಪ ಖಾರವಾಗಿ ಕೇಳಿದರು. ಸದಸ್ಯೆ ಚಂದ್ರಕಲಾ ಮಾತನಾಡಿ, ಬಾಣೂರು, ಸಖರಾಯಪಟ್ಟಣ ಹೋಬಳಿಯಲ್ಲಿ ಇಲಾಖೆ ನಿರ್ಲಕ್ಷ್ಯದಿಂದ ಐದಾರು ದನಕರುಗಳು ಕಾಲುಬಾಯಿ ರೋಗ ಮತ್ತು ಚಪ್ಪೆರೋಗದಿಂದ ಮೃತಪಟ್ಟು ದೂರು ನೀಡಿದರೂ ಗಮನಹರಿಸುತ್ತಿಲ್ಲ ಎಂದಾಗ ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದು ಲಿಂಗರಾಜು ಉತ್ತರಿಸಿದರು.
ಬಿಸಿಎಂ ಇಲಾಖೆ ಅಧಿಕಾರಿ ಇಲಾಖೆಯ ಖರ್ಚು ವೆಚ್ಚದ ಬಗ್ಗೆ ಮಾಹಿತಿ ನೀಡಿ, ವೇತನಕ್ಕೆ 4.75 ಲಕ್ಷರು., ಸ್ಟೇಷನರಿಗೆ 45 ಸಾವಿರ ರು., ಹೋಲಿಗೆ ಯಂತ್ರ ತರಬೇತಿಗೆ 2.51 ಲಕ್ಷರು. ಮತ್ತು ವಿದ್ಯಾರ್ಥಿ ವೇತನ ಸೇರಿದಂತೆ ಇತರೆ ನಿರ್ವಹಣೆಗೆ 33 ಲಕ್ಷರು. ಸೇರಿ ಒಟ್ಟು 66 ಲಕ್ಷರು. ವೆಚ್ಚ ತಗಲುತ್ತದೆ ಎಂದರು.
ಉಳಿದಂತೆ ಮೆಸ್ಕಾಂ, ಡಿಎಲ್ಡಿಬಿ, ಸಾಮಾಜಿಕ ಅರಣ್ಯ ಇಲಾಖೆ, ಲೋಕೋಪಯೋಗಿ ಮತ್ತಿತರ ಇಲಾಖೆಗಳ ಕುರಿತ ಚರ್ಚೆ ನಡೆಯಿತು. ಉಪಾಧ್ಯಕ್ಷೆ ಶೋಭಾ ವೆಂಕಟೇಶ್, ಕಾರ್ಯ ನಿರ್ವಹಣಾಧಿಕಾರಿ ಟಿ.ಎನ್. ಮೂರ್ತಿ, ಸದಸ್ಯರು ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

