ಅಸಮರ್ಪಕ ವಿದ್ಯುತ್ ಸಂಪರ್ಕ
ಕ.ಪ್ರ.ವಾರ್ತೆ ಹೊನ್ನಾಳಿ ಜೂ.5: ತಾಲೂಕಿನ ಗಂಗನಕೋಟೆ, ಗಡೇಕಟ್ಟೆ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಸರ್ಕಾರದಿಂದ
ಬೋರ್ವೆಲ್ ಕೊರೆಸಿದರೆ ಅದಕ್ಕೆ ಬೆಸ್ಕಾಂ ಅಧಿಕಾರಿಗಳು ವಿದ್ಯುತ್ ಸಂಪರ್ಕ ಕಲ್ಪಿಸದೆ ಇರುವುದಕ್ಕೆ ತಾಪಂ ಸದಸ್ಯ ಸುರೇಶ್ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ತಾಪಂ ಸಾಮರ್ಥ್ಯ ಸೌಧದಲ್ಲಿ ತಾಪಂ ಅಧ್ಯಕ್ಷೆ ಪ್ರಭಾವತಿ ಜುಂಜಾನಾಯ್ಕ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ತಾಪಂ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.
ವಿದ್ಯುತ್ ಸಂಪರ್ಕ: ಇದಕ್ಕೆ ಪ್ರತಿಕ್ರಿಯಿಸಿದ ಬೆಸ್ಕಾಂ ಅಧಿಕಾರಿ ಲಕ್ಷ್ಮಪ್ಪ, ಕೊರೆಸಿರುವ ಬೋರ್ವೆಲ್ಗಳು ನೋಂದಣಿ ಆಗಿದ್ದರೆ ಅವುಗಳಿಗೆ ಕೂಡಲೇ ವಿದ್ಯುತ್ ಸಂಪರ್ಕ ಕಲ್ಪಿಸಿ ಕುಡಿಯುವ ನೀರಿಗೆ ಅನುವು ಮಾಡಿಕೊಡುವುದಾಗಿ ತಿಳಿಸಿದರು.
ರು. 38ಕೋಟಿ ಬಾಕಿ: ತಾಲೂಕಿನ 48 ಗ್ರಾಪಂ ಹಾಗೂ ಸರ್ಕಾರಿ ಕಚೇರಿಗಳಿಂದ ರು. 38 ಕೋಟಿ ವಿದ್ಯುತ್ ಬಿಲ್ ಹಣ ಾಕಿ ಇದೆ ಎಂದು ಬೆಸ್ಕಾಂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಲಕ್ಷ್ಮಪ್ಪ ಹೇಳಿದರು.
ಸಾಮಾಜಿಕ ಆರಣ್ಯ ಇಲಾಖೆ ಅಧಿಕಾರಿ ವಿಜಯ್ಕುಮಾರ್ ಮಾತಾನಾಡಿ, ತಾಲೂಕಿನಲ್ಲಿ ಈ ಬಾರಿ ಉತ್ತಮ ಮಳೆಯಾಗಿದ್ದು, 1 ಲಕ್ಷ ಸಸಿಗಳನ್ನು ತಾಲೂಕಿನ ರಸ್ತೆ ಬದಿಗಳಲ್ಲಿ ಕೆರೆ ಏರಿ ಮೇಲೆ ಹಾಗೂ ಸರ್ಕಾರಿ ಜಾಗ ಸೇರಿದಂತೆ ಶಾಲಾ ಕಾಲೇಜು ಅವರಣಗಳಲ್ಲಿ ಸಸಿ ಬೆಳೆಸುವುದಾಗಿ ತಿಳಿಸಿದರು.
ಜಾಬ್ ಕಾರ್ಡ್ ಹೊಂದಿದ್ದ ರೈತರಿಗೆ ಸಸಿ ನೀಡುವ ವ್ಯವಸ್ಥೆ ಹಮ್ಮಿಕೊಳ್ಳಲಾಗಿದೆ ಎನ್ನುತ್ತಿದ್ದಂತೆ ತಾಪಂ ಸದಸ್ಯ ಕಾಂತ್ರಾಜ್ ಅಧಿಕಾರಿಗಳು ಯಾವುದೇ ಗ್ರಾಪಂಗೆ ಭೇಟಿ ಮಾಡದೇ ಜಾಬ್ಕಾರ್ಡ್ ರೈತರನ್ನು ಸಂಪರ್ಕಿಸದೇ ಸುಳ್ಳು ಮಾಹಿತಿ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಶೇ. 90 ಪಠ್ಯಪುಸ್ತಕ: ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಸಿ ಮಲ್ಲಿಕಾರ್ಜುನ್ ಮಾತಾನಾಡಿ, ತಾಲೂಕಿನ ಎಲ್ಲಾ ಸರ್ಕಾರಿ ಶಾಲೆಗಳಿಗೆ ಶೇ.90 ಪಠ್ಯಪುಸ್ತಕ ಬಂದಿದೆ. ಪ್ರೌಢಶಾಲೆಗಳಲ್ಲಿ ಎರಡು ವಿಷಯಗಳನ್ನು ಹೊರತುಪಡಿಸಿ ಎಲ್ಲಾ ಪಠ್ಯಪುಸ್ತಕಗಳು ಹಾಗೂ ಎರಡು ಜೊತೆ ಸಮವಸ್ತ್ರಗಳು ಎಲ್ಲಾ ಸರ್ಕಾರಿ ಶಾಲೆಗಳಿಗೆ ಸರಬರಾಜು ಮಾಡಿದೆ ಎಂದ ಅವರು, ಇಂದು ಪರಿಸರ ದಿನಾಚಾರಣೆ ಅಂಗವಾಗಿ ಪ್ರತಿ ಶಾಲೆಯಲ್ಲಿ ಕನಿಷ್ಠ 5 ಸಸಿ ನೆಡುವ ವ್ಯವಸ್ಥೆ ಮಾಡಲಾಗಿದೆ ಎಂದರು.
ಸರ್ಕಾರಿ ಶಾಲೆಗಳಲ್ಲಿ ಶಾಲಾ ಮಕ್ಕಳಿಂದ ಪಠ್ಯಪುಸ್ತಕ ಮತ್ತು ಬಟ್ಟೆಗಳಿಗೆ ಶಿಕ್ಷಕರು ಹಣ ವಸೂಲಿ ಮಾಡುತ್ತಿದ್ದಾರೆಂದು ತಾಪಂ ಸದಸ್ಯ ಕಾಂತ್ರಾಜ್ ಆರೋಪಿಸಿದರು. ತಕ್ಷಣ ಉತ್ತರಿಸಿದ ಕ್ಷೇತ್ರಶಿಕ್ಷಣಾಧಿಕಾರಿ, ಸರ್ಕಾರ ಬಟ್ಟೆ ಹಾಗೂ ಪುಸ್ತಕಗಳನ್ನು ಉಚಿತವಾಗಿ ವಿತರಿಸುತ್ತಿದೆ. ಹಣ ವಸೂಲು ಮಾಡುವ ಶಿಕ್ಷಕರ ಬಗ್ಗೆ ದೂರು ಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಶಿಕ್ಷಕರನ್ನು ಸಸ್ಪೆಂಡ್ ಮಾಡುವುದಾಗಿ ತಿಳಿಸಿದರು.
ಶಿಕ್ಷಕರು ಭರ್ತಿ: ಶಿಕ್ಷಕರ ಕೊರತೆ ಇರುವ ಕೆಲ ಪ್ರೌಢಶಾಲೆಗಳಿಗೆ ಹೊಸದಾಗಿ ನೇಮಕಗೊಂಡ ಶಿಕ್ಷಕರು ಕರ್ತವ್ಯಕ್ಕೆ ಹಾಜರಾಗುತ್ತಿದ್ದು, ಸಿ.ಬಿ.ಜಡ್ ಶಿಕ್ಷಕರನ್ನು ಭರ್ತಿ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಎಸ್.ಎಸ್.ಎ. ಯೋಜನೆ ಮುಕ್ತಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ಯೋಜನೆಯಡಿಯಲ್ಲಿ ಅನುದಾನ ಬಾರದೇ ಇರುವ ಕಾರಣ ಅನೇಕ ಗ್ರಾಮಗಳಲ್ಲಿನ ಶಾಲೆಗಳ ಕೊಠಡಿಗಳ ದುರಸ್ತಿ ಅವಶ್ಯಕತೆ ಇದ್ದು, ತಾಲೂಕು ಪಂಚಾಯಿತಿ ಬೇರೆ ಅನುದಾನದಲ್ಲಿ ಹಣದ ವ್ಯವಸ್ಥೆ ಮಾಡಬೇಕಾಗಿದೆ ಎಂದು ಹೇಳಿದರು.
ಜಮೀನು ಹದ: ಕೃಷಿ ಇಲಾಖೆ ಅಧಿಕಾರಿ ರೇವಣಸಿದ್ದನಗೌಡ ಮಾತಾನಾಡಿ, ತಾಲೂಕಿನಲ್ಲಿ 137 ಮಿ.ಮೀ ಮಳೆ ನಿರೀಕ್ಷೆ ಇದ್ದು, ಈಗಾಗಲೇ 110 ಮಿ.ಮೀ. ಮಳೆಯಾಗಿದ್ದು, ರೈತರು ತಮ್ಮ ಎಲ್ಲಾ ಜಮೀನುಗಳನ್ನು ಹದಮಾಡಿದ್ದಾರೆ. 55 ಸಾವಿರ ಬಿತ್ತನೆ ಗುರಿ ನಿರೀಕ್ಷೆಯಲ್ಲಿದ್ದು, ತಾಲೂಕಿನ 10 ಕೇಂದ್ರಗಳಲ್ಲಿ ಬಿತ್ತನೆ ಬೀಜ ವಿತರಿಸಿದ್ದೇವೆ ಎಂದ ಅವರು ಈ ಹಿಂದೆ ಇದ್ದ 6 ರೈತ ಸಂಪರ್ಕ ಕೇಂದ್ರಗಳ ಜೊತೆಯಲ್ಲಿ ರೈತರ ಅನುಕೂಲಕ್ಕಾಗಿ ಹೆಚ್ಚುವರಿ ಮೂರು ಹೆಚ್ಚುವರಿ ರೈತ ಸಂಪರ್ಕ ಕೇಂದ್ರಗಳನ್ನು ತೆರೆದು ತನ್ಮೂಲಕ ಬೀಜ ಗೊಬ್ಬರ ಸರಬರಾಜಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.. ತಾಲೂಕು ಆರೋಗ್ಯಾಧಿಕಾರಿ ಡಾ. ಕೆಂಚಪ್ಪ ಆರ್ ಬಂತಿ ಮಾತನಾಡಿದರು. ಸಭೆಯಲ್ಲಿ ತಾಲೂಕು ಪಂಚಾಯಿತಿ ಉಪಾಧ್ಯಕ್ಷೆ ವಿಶಾಲಾಕ್ಷಮ್ಮಅಲ್ಬರ್ಟ್ ಸೇರಿದಂತೆ ಎಲ್ಲಾ ಸದಸ್ಯರುಗಳು ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

