ಆಧ್ಯಾತ್ಮದಿಂದ ಯುವಜನ ದೂರ
ಸಾಗರ: ಧರ್ಮ, ಸಂಸ್ಕೃತಿ, ಆಧ್ಯಾತ್ಮಿಕತೆಯಿಂದ ಯುವಜನ ದೂರವಾಗುತ್ತಿದ್ದಾರೆ ಎಂದು ಕಾಣಿಯೂರು ಮಠದ ವಿದ್ಯಾವಲ್ಲಭತೀರ್ಥರು ವಿಷಾದ ವ್ಯಕ್ತಪಡಿಸಿದರು.
ಮುಂದಿನ ಉಡುಪಿ ಪರ್ಯಾಯ ಪೀಠ ಅಲಂಕರಿಸುವ ಪೂರ್ವಭಾವಿಯಾಗಿ ಸಾಗರಕ್ಕೆ ಸೋಮವಾರ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ಧರ್ಮದ ಹತ್ತಿರಕ್ಕೆ ಜನರು ಬರಬೇಕು ಎನ್ನುವುದನ್ನು ಗುರಿಯಾಗಿಟ್ಟುಕೊಂಡು ಈ ಬಾರಿಯ ಪರ್ಯಾಯದಲ್ಲಿ ಹಲವು ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ತಿಳಿಸಿದರು.
ಕಿರುಹೊತ್ತಿಗೆ: ಪರ್ಯಾಯ ಸಂದರ್ಭದಲ್ಲಿ ಮಹಾಭಾರತದ ಪಾತ್ರಗಳ ಕುರಿತ ಕಿರುಹೊತ್ತಿಗೆ ಹೊರತಂದು ಮಹಾಭಾರತದ ಮಹತ್ವವನ್ನು ಜನರಿಗೆ ತಿಳಿಸುವ ಕೆಲಸ ಮಾಡಲಾಗುವುದು. ಗುರು ಪರಂಪರೆಯ ವಿದ್ವಾಂಸರಾದ ಬನ್ನಂಜೆ ಗೋವಿಂದಾಚಾರ್ಯ, ವ್ಯಾಸನಕೆರೆ ಪ್ರಭಂಜನಾಚಾರ್ಯ ಮೊದಲಾದವರನ್ನು ಕರೆಸಿ ನಿರಂತರ ಪ್ರವಚನ ಕಾರ್ಯಕ್ರಮ ಹಮ್ಮಿಕೊಳ್ಳುವ ಉದ್ದೇಶ ಹೊಂದಲಾಗಿದೆ ಎಂದರು.
ಮಧ್ವಾಚಾರ್ಯರ ತತ್ವಗಳು ಕೇವಲ ಒಂದು ಜನಾಂಗಕ್ಕೆ ಸೀಮಿತವಾದುದಲ್ಲ. ಅವು ಇಡೀ ಮನುಕುಲಕ್ಕೆ ಅನ್ವಯಿಸುತ್ತವೆ. ಭಗವಂತನ ಸಾಕ್ಷಾತ್ಕಾರ ಹೇಗೆ ಪಡೆಯಬೇಕು ಎಂಬುದನ್ನು ಪ್ರಚುರಪಡಿಸಿರುವ ಆಚಾರ್ಯರು ಆಡಂಬರದ ಭಕ್ತಿ ಸಾಧುವಲ್ಲ ಎಂದು ಪ್ರತಿಪಾದಿಸಿದ್ದಾರೆ. ಇವುಗಳ ಬಗ್ಗೆ ಅರಿವು ಮೂಡಿಸಬೇಕಾದ ಕೆಲಸ ನಡೆಯಬೇಕಿದೆ ಎಂದು ಹೇಳಿದರು.
ಪಟ್ಟಣದ ಕೆರೆಕೋಡಿ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಶ್ರೀಗಳನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು. ದೇವಾಲಯದ ಪ್ರಧಾನ ಅರ್ಚಕ ರಾಘವೇಂದ್ರಾಚಾರ್, ಮಾಧ್ವ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ ಆಚಾರ್, ಕಾರ್ಯದರ್ಶಿ ಶ್ರೀಶಾಚಾರ್, ಅನಂತರಾವ್, ವಾಸುದೇವಾಚಾರ್, ಶ್ರೀಧರ್ ಎನ್. ಭೋಜ, ರಘುನಂದನ ಪುರೋಹಿತ್, ಜಿ.ವಿ. ಕಲ್ಲಾಪುರ, ವೈ. ಮೋಹನ್, ಸುಮತೀಂದ್ರಚಾರ್, ಮಂಜುಳಾ ಬದರೀನಾಥ್ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

