'ಸಭಲಾ ಯೋಜನೆ ಸದ್ಭಳಕೆಯಾಗಲಿ'
ಚಿಕ್ಕಮಗಳೂರು: ಹದಿಹರೆಯದ ಹೆಣ್ಣುಮಕ್ಕಳ ಸಭಲಿಕರಣಕ್ಕಾಗಿ ಸರ್ಕಾರ ಹಲವಾರು ಯೋಜನೆಗಳನ್ನು ತಂದಿದ್ದು, ಕೀಶೋರಿಯರ ಸಂಘಟಿಸುವಿಕೆಯಿಂದ ಸಭಲಾ ಯೋಜನೆಗಳನ್ನು ಪಡೆಯಬೇಕೆಂದು ತಾಲೂಕು ಶಿಶು ಅಭಿವೃದ್ಧಿ ಅಧಿಕಾರಿ ಎಸ್.ಆರ್. ವೆಂಕಟೇಶ್ ಹೇಳಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ರಾಜೀವ್ ಗಾಂಧಿ ಪ್ರಾಯ ಪೂರ್ವ ಬಾಲಕಿಯರ ಸಬಲೀಕರಣ ಯೋಜನೆಯಡಿ ಮಾರ್ಕೇಟ್ ರಸ್ತೆ ಶಾಂತಿನಗರದ ಓಂಶಾಂತಿ ಸಮುದಾಯ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಿಶೋರಿ ದಿವಸ್ ಆಚರಣೆಯನ್ನು ಉಧ್ಘಾಟಿಸಿ ಅವರು ಮಾತನಾಡಿದರು.
ಸ್ವಚ್ಛತೆ ಬಗ್ಗೆ ಅರಿವು: ಡಾ. ಚೇತನ್ ನಾಯಕ್ ಮಾತನಾಡಿ, ಕೀಶೋರಿಯವರಲ್ಲಿ ಅಂದರೆ 12 ರಿಂದ 19 ಪ್ರಾಯದ ಹೆಣ್ಣು ಮಕ್ಕಳಲ್ಲಿ ಮುಟ್ಟಿಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳು, ಅಂದರೆ ಹೊಟ್ಟೆ ನೋವು, ಮೊಡವೆ, ತಲೆ ನೋವು ಮುಂತಾದ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳಲಿದ್ದು ಆಗ ಅಗತ್ಯ ಚಿಕಿತ್ಸೆ ಪಡೆಯಬೇಕು ಎಂದ ಅವರು, ಕಿಶೋರಿಯವರಿಗೆ ಆರೋಗ್ಯ ತಪಾಸಣೆಯನ್ನು ಮಾಡಿ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕು ಎಂದರು.
ಜನಜಾಗೃತಿ ಸಮಾಜ ಸೇವಾ ಸಂಸ್ಥೆ ಅಧ್ಯಕ್ಷ ವಿಶ್ವನಾಥ್ ಮಾತನಾಡಿ, ಹದಿಹರೆಯವರಲ್ಲಿ ಮದುವೆಯಾಗುವುದರಿಂದ ರಕ್ತ ಹೀನತೆಯಿಂದ ಬಳಲಿ ತಾಯಿ ಮಗು ಸಾವಿಗೀಡಗುವ ಸಂಭವ ಹೆಚ್ಚು ಇದನ್ನು ತಪ್ಪಿಸಬೇಕು. ಕಿಶೋರಿಯರು ಸಂಘಟನೆಯಾಗುವ ಮೂಲಕ ತಾವು ಸಭಲರಾಗಬೇಕು. ಉತ್ತಮ ಆಹಾರ ಸೇವನೆಯಿಂದ ಅಪೌಷ್ಟಿಕತೆ, ರಕ್ತ ಹೀನತೆ ದೂರ ಮಾಡಬೇಕೆಂದರು.
ಲೀಲಾವತಿ ಅವರು ಸಭಲಾ ಯೋಜನೆಯ ಉದ್ದೇಶಗಳು, ಜಾರಿಗೆ ತರುವುದರಿಂದ ಆಗುವ ಪ್ರಯೋಜನಗಳನ್ನು ಸಭೆಗೆ ತಿಳಿಸಿದರು.
ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರಾದ ಸರಸ್ವತಿ, ಶಾಂತಿ, ಪುಷ್ಪಾ, ನೇತ್ರಾವತಿ. ಅಮರವತಿ, ಯಶೋಧ ಉಪಸ್ಥಿತರಿದ್ದರು. ಅಮರವತಿ ಕಾರ್ಯಕ್ರಮ ನಿರೂಪಿಸಿದರು. ಸರಸ್ವತಿ ಸ್ವಾಗತಿಸಿದರು.
--
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

