ಚಿಕ್ಕಮಗಳೂರು

ಬಾಗಿಲು ತೆರೆಯದ ಶೌಚಾಲಯ

Published On :

ಕಪ್ರ ವಾರ್ತೆ, ಕೊಪ್ಪ, ಜೂ. 20
ಇಲ್ಲಿನ ಪಪಂ ಕಚೇರಿ ಪಕ್ಕದಲ್ಲಿ ನೂತನವಾಗಿ ನಿರ್ಮಿಸಿರುವ ಆಧುನಿಕ ಸುಲಭ ಶೌಚಾಲಯ ಉದ್ಘಾಟನೆಗೊಂಡು 4 ವರ್ಷ ಕಳೆದರೂ ಸಾರ್ವಜನಿಕ ಉಪಯೋಗಕ್ಕೆ ಲಭ್ಯವಿಲ್ಲದಂತೆ ಬೀಗ ಹಾಕಲಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಪಟ್ಟಣದ ದ್ಯಾವೇಗೌಡ ವೃತ್ತದ ಬಳಿಯಲ್ಲಿ 2 ಬಸ್ ತಂಗುದಾಣ, ಸಾರ್ವಜನಿಕ ಆಸ್ಪತ್ರೆ, ಆಟೋ ನಿಲ್ದಾಣ, 2 ಪೆಟ್ರೋಲ್ ಬಂಕ್, ಅಲ್ಲದೇ ನಿತ್ಯ ಸಾವಿರಾರು ಸಾರ್ವಜನಿಕರು ಹಾಗೂ ಪಯಾಣಿಕರು ಸಂಚರಿಸುತ್ತಾರೆ ಆದ್ದರಿಂದ ಇಲ್ಲಿ ಸಾರ್ವಜನಿಕ ಶೌಚಾಲಯ ಅವಶ್ಯಕತೆ ಇದೆ ಎಂಬ ಬೇಡಿಕೆ ಇದ್ದ ಹಿನ್ನೆಲೆಯಲ್ಲಿ 2009-10 ಸಾಲಿನಲ್ಲಿ ಪಪಂನ ಎಸ್.ಎಫ್.ಸಿ. ಅನುದಾನದ ರು. 10 ಲಕ್ಷ ವೆಚ್ಚದಲ್ಲಿ ನೂತನ ಶೌಚಾಲಯ ನಿರ್ಮಿಲಾಗಿತ್ತು.
ತಿಂಗಳು ತೆರೆದ ಬೀಗ: ಪ್ರಾರಂಭದಲ್ಲಿ ನೀರಿನ ಅಭಾವವಿದ್ದುದರಿಂದ ಮೊದಲ 3 ವರ್ಷ ಉಪಯೋಗಕ್ಕೆ ನೀಡದೆ ಬೀಗ ಹಾಕಿದ್ದರು. ಆದರೆ 1 ವರ್ಷದ ಹಿಂದೆ ನೀರಿನ ಸೌಲಭ್ಯ ಕಲ್ಪಿಸಿದ ನಂತರ ಕೇವಲ 1 ತಿಂಗಳ ಕಾಲ ಸಾರ್ವಜನಿಕರ ಉಪಯೋಗಕ್ಕೆ ನೀಡಿ ಪುನಃ ಬೀಗ ಹಾಕಿದ್ದಾರೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.
ಈ ಸಂಬಂಧ ಪಪಂ ಅಧಿಕಾರಿಗಳಲ್ಲಿ ಪ್ರಶ್ನಿಸಿದ ಸಂದರ್ಭದಲ್ಲಿ ಶೌಚಾಲಯದಲ್ಲಿದ್ದ ಬಕೆಟ್‌ಗಳನ್ನು ಕಳವು ಮಾಡುತ್ತಾರೆ, ಅಲ್ಲದೇ ತುಂಬಾ ಗಾಲಿಜು ಮಾಡುತ್ತಾರೆ ಅದ್ದರಿಂದ ಬೀಗ ಹಾಕಿಸಲಾಗಿದೆ ಎಂದು ಹಾರಿಕೆಯ ಉತ್ತರವನ್ನು ಅಧಿಕಾರಿಗಳು ನೀಡುತ್ತಿದ್ದಾರೆ ಎಂಬುದು ಸಾರ್ವಜನಿಕರ ಆರೋಪ.
ಪಪಂನಿಂದ ಸಾರ್ವಜನಿಕರ ಉಪಯೋಗಕ್ಕಾಗಿ ನಿರ್ಮಿಸಿರುವ ಶೌಚಾಲಯ ನಿರ್ವಹಣೆಯೂ ಕೂಡ ಪಪಂ ನ ಜವಾಬ್ದಾರಿಯಾಗಿರುತ್ತದೆ ಆದ್ದರಿಂದ ಇದನ್ನು ಅರಿತು ನಿರ್ವಹಣೆಗೆ ಬೇಕಾದ ಎಲ್ಲಾ ಸಿದ್ಧತೆಯನ್ನೂ  ಮಾಡಿಕೊಂಡು ಮತ್ತೆ ಸಾರ್ವಜನಿಕರ ಉಪಯೋಗಕ್ಕೆ ನೀಡಬೇಕಾಗಿದೆ.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.