ಚಿಕ್ಕಮಗಳೂರು

ನೂತನ ಉಪಾಧ್ಯಕ್ಷರ ನೇಮಕ

Published On :

ಕಡೂರು: ತಾಲೂಕಿನ ಸರಸ್ವತಿಪುರ ಗ್ರಾಪಂ ನೂತನ ಸಮಿತಿ ಆರಂಭದಿಂದಲೂ ಅಧ್ಯಕ್ಷ ಸ್ಥಾನದ ಮೀಸಲಾತಿ ಎಸ್‌ಟಿಗೆ ಮೀಸಲಾಗಿ ಉಪಾಧ್ಯಕ್ಷರೆ ಕಾರ್ಯಭಾರ ನಿರ್ವಹಿಸುತ್ತಿದ್ದು, ಪಂಚಾಯ್ತಿ ನೂತನ ಉಪಾಧ್ಯಕ್ಷರಾಗಿ ಕಂಸಾಗರ ಗ್ರಾಮದ ಸದಸ್ಯ ಕೆ.ಟಿ. ಮಹೇಶ್ ಅವಿರೋಧವಾಗಿ ಆಯ್ಕೆಯಾದರು.
 ಉಪಾಧ್ಯಕ್ಷಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಕಂಸಾಗರ, ಚನ್ನಾಪುರ, ಗೋವಿಂದಪುರ, ಚನ್ನೇನಹಳ್ಳಿ,  ಸರಸ್ವತೀಪುರ, ಚನ್ನೇನಹಳ್ಳಿತಾಂಡ್ಯ ಸೇರಿದಂತೆ ಏಳು ಗ್ರಾಮದಿಂದ 11 ಸದಸ್ಯರು ಇದ್ದು ಕೆ.ಟಿ. ಮಹೇಶ್ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾ ಪ್ರಕ್ರಿಯೆ ನಡೆಸಿದ ತಹಸೀಲ್ದಾರ್ ಶಾರದಾಂಬರವರು ಅವಿರೋಧ ಆಯ್ಕೆ ಘೋಷಿಸಿ ಪ್ರಮಾಣ ಪತ್ರ ನೀಡಿದರು.
 ಅಭಿನಂದನಾ ಸಮಾರಂಭದಲ್ಲಿ ಸದಸ್ಯರಾದ ಕಂಸಾಗರ ರೇವಣ್ಣ, ಸಂತೋಷ್, ಸಿ.ಟಿ. ರಾಜಶೇಖರ್ ಮಾತನಾಡಿದರು. ಉಪಾಧ್ಯಕ್ಷ ಕೆ.ಟಿ. ಮಹೇಶ್ ಮಾತನಾಡಿ, ಸದಸ್ಯರು ಇಟ್ಟಿರುವ ನಂಬಿಕೆಗೆ ತಕ್ಕಂತೆ ಪಂಚಾಯ್ತಿ ವ್ಯಾಪ್ತಿಯ ಎಲ್ಲ ಗ್ರಾಮಗಳಿಗೆ ಸರ್ಕಾರದಿಂದ ದೊರಕುವ ಸವಲತ್ತು ದೊರಕಿಸಿಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.
 ಎಸ್. ರೇವಣ್ಣ, ಸೀತಾಬಾಯಿ, ದೇವಿಕಾ ರುದ್ರೇಗೌಡ, ಸಂತೋಷ್, ಸುವರ್ಣಮ್ಮ ಪುಟ್ಟೇಗೌಡ, ವಸಂತಮ್ಮ ತೀರ್ಥಾಚಾರ್, ಸಿ.ಟಿ. ರಾಜಶೇಖರ್, ಸೋಮ್ಲಿಬಾಯಿ ಕೆ.ಎಚ್. ಲೋಕೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.