ಚಿಕ್ಕಮಗಳೂರು

ಒತ್ತುವರಿ ತೆರವು ಬೇಡ

Published On :

ಕ.ಪ್ರ.ವಾರ್ತೆ, ಕೊಪ್ಪ,  ಜೂ.24
ತಾಲೂಕಿನಲ್ಲಿ ಅರಣ್ಯ ಇಲಾಖೆಯಿಂದ ರೈತರ ಒತ್ತುವರಿ ಭೂಮಿ ಖುಲ್ಲಾ ಮಾಡಿಸುತ್ತಿರುವ ಕ್ರಮ ಅವೈಜ್ಞಾನಿಕವಾಗಿದ್ದು, ಸರ್ಕಾರದ ಸ್ಪಷ್ಟ ಆದೇಶ ಬರುವರೆಗೂ ಇದನ್ನು ಕೈ ಬಿಡಬೇಕು ಎಂದು ಶಾಸಕ ಡಿ.ಎನ್. ಜೀವರಾಜ್ ಅರಣ್ಯಧಿಕಾರಿಗಳಿಗೆ ಸೂಚನೆ ನೀಡಿದರು.
ಸೊಮವಾರ ತಾಪಂ ಸಭಾಂಗಣದಲ್ಲಿ ಶಾಸಕ ಡಿ.ಎನ್. ಜೀವರಾಜ್ ಅಧ್ಯಕ್ಷತೆಯಲ್ಲಿ ನಡೆದ ತಾಲೂಕು ಮಟ್ಟದ ತ್ರೈಮಾಸಿಕ ಪ್ರಗತಿ ಪರೀಶಿಲನಾ ಸಭೆಯಲ್ಲಿ ಅರಣ್ಯ ಇಲಾಖೆಯ ಪ್ರಗತಿ ಪರಿಶೀಲನೆ ಮಾಡಿ ಮಾತನಾಡಿದ ಅವರು, ಸೂರಿಗಾಗಿ ಒತ್ತುವರಿ ಮಾಡಿಕೊಂಡವರಿಗೆ ಹಾಗೂ ಕೃಷಿಗಾಗಿ ಒಂದೆರಡು ಎಕರೆ ಒತ್ತುವರಿ ಮಾಡಿದವರಿಗೆ ಮಾತ್ರ ಒತ್ತುವರಿ ಭೂಮಿಯನ್ನು ಖುಲ್ಲಾ ಮಾಡಲು ನೊಟೀಸ್ ನೀಡಿದ್ದಿರಿ ದೊಡ್ಡ ಪ್ರಮಾಣದಲ್ಲಿ ಒತ್ತುವರಿ ಮಾಡಿದವರ ಭೂಮಿ ಖಲ್ಲಾ ಮಾಡಿಸುವ ಗೋಜಿಗೆ ಹೊಗಿಲ್ಲ.
ಕಾರ್ಯಚಾರಣೆ ನಿಲ್ಲಿಸಿ: ಅಲ್ಲದೆ ಎಷ್ಟು ಪ್ರಮಾಣ ಒತ್ತುವರಿಯಾಗಿದೆ ಎಂಬ ನಿಖರ ಮಾಹಿತಿ ನಿಮ್ಮ ಇಲಾಖೆಯಲ್ಲಿ ಇಲ್ಲ. ಅದ್ದರಿಂದ ಈ ಬಗ್ಗೆ  ಕಾಗೋಡು ತಿಮ್ಮಪ್ಪನವರ ಅಧ್ಯಕ್ಷತೆಯಲ್ಲಿ ಕರೆದ ವಿಶೇಷ ಸಭೆಯಲ್ಲಿ ಈ ವಿಚಾರವಾಗಿ ಪ್ರಸ್ತಾಪಿಸಿ ಅವರಿಗೆ ಮನವರಿಕೆ ಮಾಡಿದ್ದೇನೆ. ಅವರು ಬರವಸೆ ನೀಡಿರುವುದರಿಂದ ಸರ್ಕಾರದಿಂದ ಸ್ಪಷ್ಟ ಆದೇಶ ಬರುವವರಗೆ ನಿಮ್ಮ ಕಾರ್ಯಚಾರಣೆ ನಿಲ್ಲಿಸಿ ಎಂದು ಅರಣ್ಯ ಅಧಿಕಾರಿ ಕುಮಾರ್ ಕಾಂಬ್ಳೆಯವರಿಗೆ ತಿಳಿಸಿದರು.
ಅಧಿಕಾರಿಗಳ ಬೇಜಾವಬ್ದಾರಿತನ: ಜಿಪಂ ಸದಸ್ಯ ಕೆ.ಎಸ್. ರವೀಂದ್ರ ಮಾತನಾಡಿ, ಚುನಾಯಿತ ಪ್ರತಿನಿಧಿಗಳನ್ನು ಕಡೆಗಣಿಸಿ ಇತ್ತೀಚೇಗೆ ಬಸ್ರೀಕಟ್ಟೆಯಲ್ಲಿ ಮೇಸ್ಕಾಂನ ಜಿಲ್ಲಾ ಮಟ್ಟದ ಜನ ಸಂಪರ್ಕ ಸಭೆ ನಡೆಸಲಾಗಿದೆ. ಅಧಿಕಾರಿಗಳ ಬೇಜಾವಬ್ದಾರಿತನವನ್ನು ಖಂಡಿಸುತ್ತೇವೆ. ಅಲ್ಲದೇ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳುವಂತೆ ಸಭೆಯಲ್ಲಿ ಒತ್ತಾಯಿಸುತ್ತೇವೆ ಎಂದರು.
ಮೆಸ್ಕಾಂ ನಿಲಕ್ಷ್ಯ: ಮೇಗುಂದಾ ಹೋಬಳಿಯಲ್ಲಿ 2 ದಿನ ವಿದ್ಯುತ್ ಇಲ್ಲದ ಕಾರಣ ಜನರು ಕುಡಿಯುವ ನೀರಿಗೆ ಪರಿತಪಿಸುತ್ತಿದ್ದಾರೆ. ಹೇರೂರಿನಲ್ಲಿ ವಿದ್ಯುತ್ ತಂತಿ ತೀರಾ ಕಳಮಟ್ಟದಲ್ಲಿ ಹಾದು ಹೋಗಿರುವುದರಿಂದ ಜಾನುವಾರುಗಳು ಸಿಕ್ಕಿ ಸಾಯುತ್ತಿದೆ ಎಂದು ಮೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದರೂ ರಿಪೇರಿ ಮಾಡಿಲ್ಲ ಎಂದು ತಾಪಂ ಸದಸ್ಯ ಬಿ.ಕೆ. ನಾರಯಣ್ ಆರೋಪಿಸಿದರು.
ಕೊಪ್ಪ ಮೆಸ್ಕಾಂ ಜೆ.ಇ. ನಾಗರಾಜ್ ಇದಕ್ಕೆ ಉತ್ತರಿಸಿ, ಈ ಭಾಗದಲ್ಲಿರುವ ಉಪಕೇಂದ್ರಗಳ ಅಧಿಕಾರಿಗಳು ದಕ್ಷರಿಲ್ಲದ ಕಾರಣ ಈ ಸಮಸ್ಯೆಗಳು ಉಲ್ಬಣವಾಗುತ್ತಿವೆ. ಸಮಸ್ಯೆಗಳ ಬಗ್ಗೆ ಉನ್ನತಾಧಿಕಾರಿಗಳ ಗಮನಕ್ಕೆ ತಂದು ಸರ್ಮಪಕ ಕೆಲಸಮಾಡುವುದಾಗಿ ಸಭೆಗೆ ತಿಳಿಸಿದರು.
ಎಪಿಎಂಸಿ ಅಧ್ಯಕ್ಷ ಅದ್ದಡ ಸತೀಶ್ ಮಾತನಾಡಿ, ಜಲನಾಯನದ ಪಜಾ ಮತ್ತು ಪಪಂ ನವರ ಅಭಿವೃದ್ಧಿ ಯೋಜನೆಯಡಿ ಕಳೆದ ವರ್ಷ ಜಾನುವಾರಗಳನ್ನು ಕೊಳ್ಳಲು ತಲಾ ರು.  18 ಸಾವಿರ ಮಂಜೂರಾದ ಪೈಕಿ ಫಲಾನುಭಾವಿಗಳಿಗೆ ಅಧಿಕಾರಿಗಳು ರು.  14 ಸಾವಿರ ಮಾತ್ರ ನೀಡಿ ಇನ್ನುಳಿದ ಹಣದಲ್ಲಿ ಜಾನುವಾರುಗಳಿಗೆ ಮೇವನ್ನು ನೀಡುವುದಾಗಿ ಹೇಳಿದ್ದರು.
ಅದರೆ ಈವರೆಗೆ ಮೇವು ನೀಡಿಲ್ಲ ಎಂದು ಫಲಾನುಭಾವಿಗಳು ಕೇಳಿದ ಸಮಯದಲ್ಲಿ ಜಲಾನಯನ ಅಧಿಕಾರಿಗಳು ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಅಧ್ಯಕ್ಷರು ಈ ಬಗ್ಗೆ ಸಮಗ್ರ ಮಾಹಿತಿ ನೀಡುವಂತೆ ಜಲನಯನ ಅಧಿಕಾರಿ ಸತ್ಯಪ್ಪರಿಗೆ ಸೂಚನೆ ನೀಡಿದರು.
ಜಿಪಂ ಸದಸ್ಯರಾದ ಅನ್ನಪೂರ್ಣ ಚನ್ನಕೇಶವ, ಸುಚಿತಾ ನರೇಂದ್ರ, ತಾಪಂ ಅಧ್ಯಕ್ಷೆ ಪದ್ಮಾವತಿ ರಮೇಶ್, ಉಪಾಧ್ಯಕ್ಷ ಬೆಳಗೊಳ ರಮೇಶ್, ಸದಸ್ಯರಾದ ಪೂರ್ಣಚಂದ್ರ, ಇ.ಓ. ತಿಪ್ಪೇಶ್, ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.