ಶ್ರೀನಿವಾಸ ಕಲ್ಯಾಣೋತ್ಸವ
ಕ.ಪ್ರ.ವಾರ್ತೆ, ಕಡೂರು, ಜೂ.30
ಕಡೂರು ಕೋಟೆಯ ಶ್ರೀಚನ್ನಕೇಶವಸ್ವಾಮಿ ದೇವಾಲಯ ಜೀರ್ಣೋದ್ಧಾರ ಮಹಾ ಸಂಪ್ರೋಕ್ಷಣಾ ಮಹೋತ್ಸವದ ಅಂಗವಾಗಿ ನಡೆದ ಶ್ರೀನಿವಾಸ ಕಲ್ಯಾಣೋತ್ಸವದ ಭಕ್ತಿ ಸಂಕೀರ್ತನಾ ಯಾತ್ರೆಯನ್ನು ಪಟ್ಟಣದಲ್ಲಿ ಅದ್ಧೂರಿಯಾಗಿ ನಡೆಸಲಾಯಿತು.
ಮೂರು ದಿನಗಳ ಕಾಲ ನಡೆದ ಶ್ರೀ ಚನ್ನಕೇಶವಸ್ವಾಮಿಯರ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕಡೂರು ಕೋಟೆಯ ಶ್ರೀಶೃಂಗೇರಿ ಶಾರದಾಂಬ ಸಭಾ ಭವನದಿಂದ ಸಂಜೆ 5 ಗಂಟೆಗೆ ಶ್ರೀ ವೆಂಕಟೇಶ್ವರಸ್ವಾಮಿ ಕಲ್ಯಾಣೋತ್ಸವಕ್ಕೆ ಶ್ರೀಸ್ವಾಮಿಯವರನ್ನು ಸಾಲಂಕೃತ ಕುದುರೆಯ ರಥದಲ್ಲಿ ಕುಳ್ಳಿರಿಸಿ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ದಾರಿಯುದ್ದಕ್ಕೂ ಭಕ್ತರು ಭಜನೆ, ಕೀರ್ತನೆಗಳನ್ನು ಹಾಡಿ ಶ್ರೀ ಸ್ವಾಮಿಯವರನ್ನು ನೆನೆದು ಭಕ್ತಿಯ ಪರಾಕಾಷ್ಟತೆ ಮೆರೆದರು.
ಕೋಟೆಯಿಂದ ಸಾಗಿದ ಮೆರವಣಿಗೆಯಲ್ಲಿ ಕೆರೆಸಂತೆ ಮಹಾಲಕ್ಷ್ಮಿ ಭಜನಾ ಮಂಡಳಿ ಮತ್ತು ಕಡೂರು ಪಟ್ಟಣದ ಗಾಯತ್ರಿ ವಿಪ್ರ ಮಹಿಳಾ ಮಂಡಳಿ ಸೇರಿದಂತೆ ವಿವಿಧ ಸಂಘಟನೆಗಳೊಂದಿಗೆ ಶ್ರೀಸ್ವಾಮಿಯವರ ಕಲ್ಯಾಣೋತ್ಸವ ಯಾತ್ರೆ ನಡೆಸಲಾಯಿತು.
ಇದೇ ಸಂದರ್ಭದಲ್ಲಿ ಶ್ರೀ ಚನ್ನಕೇಶವಸ್ವಾಮಿ ದೇವಾಲಯ ಸೇವಾ ಸಮಿತಿಯ ಪದಾಧಿಕಾರಿಗಳು, ಪುರಸಭಾ ಸದಸ್ಯೆ ಜಯಮ್ಮ, ಕೆರೆಸಂತೆ ಭಜನಾ ಮಂಡಳಿಯ ಸದಸ್ಯರಾದ ರಮೇಶ್, ಜಯರಾಂ, ಲಕ್ಷ್ಮೀ, ಕಮಲಮ್ಮ, ವಿನುತಾ, ಲಲಿತಮ್ಮ, ವನಜಾಕ್ಷಮ್ಮ, ಜನಾರ್ಧನ ಅಯ್ಯಂಗಾರ್, ರಂಗನಾಥ್, ಪುರಸಭಾ ಸದಸ್ಯ ಜಿ. ಸೋಮಯ್ಯ, ದತ್ತಾತ್ರಿ, ರಾಜಾನಾಯ್ಕ, ಅನಂತ ಪದ್ಮನಾಭ್ ಸೇರಿದಂತೆ ಭಕ್ತರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

