ಪದಾಧಿಕಾರಿಗಳ ಆಯ್ಕೆ
ಚಿಕ್ಕಮಗಳೂರು: ಚಿಕ್ಕಮಗಳೂರು ಮೋಟಾರ್ಸ್ ಸ್ಪೋಟ್ಸ್ ಕ್ಲಬ್ ಅಧ್ಯಕ್ಷರಾಗಿ ನಗರದ ಬಿ.ಎಚ್. ಜಯಂ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಫಾರೂ ಅಹಮದ್, ಕಾರ್ಯದರ್ಶಿಯಾಗಿ ಐ.ಟಿ. ಮಾಚಯ್ಯ, ಸಹ ಕಾರ್ಯದರ್ಶಿಯಾಗಿ ಆಜಾದ್, ಖಜಾಂಚಿಯಾಗಿ ದೀಲೀಪ್ಕುಮಾರ್ ಉಳಿದಂತೆ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಬಿ.ಎಚ್. ಅಬಿಜಿತ್ ಪೈ, ಮೆತಾಬ್ ಅಹಮದ್, ನುಸ್ರತ್ ಆಲಿ, ಜೆ.ಇ. ದಿವಿನ್, ವಿಕ್ರಂ ಸಾರಗೋಡು, ದಿಲೀಪ್ಕುಮಾರ್ ಜೈನ್ ಆಯ್ಕೆಯಾಗಿದ್ದಾರೆ.
ವಾಲಿಬಾಲ್ ಪಂದ್ಯಾವಳಿ
ತಾಲೂಕಿನ ಅತ್ತಿಗಿರಿ ಗ್ರಾಮದ ಗಿರೀಶ್ ಅಭಿಮಾನಿ ಬಳಗದ ವತಿಯಿಂದ ಮಾ. 10ರಂದು ಕಂಬಿಹಳ್ಳಿಯ ಮೈದಾನದಲ್ಲಿ ಗಿರೀಶ್ ಸ್ಮರಣಾರ್ಥ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿ ನಡೆಯಲಿದೆ.
ವಿಜೇತ ತಂಡಗಳಿಗೆ ಪ್ರಥಮ ಬಹುಮಾನ ರು. 5001 ನಗದು ಮತ್ತು ಟ್ರೋಫಿ, ದ್ವಿತೀಯ ಬಹುಮಾನ 3001 ನಗದು ಮತ್ತು ನೀಡಲಾಗುವುದು. ಪಂದ್ಯಾವಳಿಯಲ್ಲಿ ಭಾಗವಹಿಸುವ ಆಸಕ್ತ ತಂಡಗಳು 94486 54710, 94816 25346, 82775 59940ಗೆ ಕರೆ ಮಾಡಿ ತಂಡದ ಹೆಸರನ್ನು ನೋಂದಾಯಿಸುವಂತೆ ಗಿರೀಶ್ ಅಭಿಮಾನಿ ಬಳಗದ ಅಧ್ಯಕ್ಷ ಎ.ಟಿ. ಅನಿಲ್ಕುಮಾರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಬಲೀಕರಣ ಅಗತ್ಯ
ಶಿವಮೊಗ್ಗ: ಮಹಿಳಾ ಆರ್ಥಿಕ ಸಬಲೀಕರಣ ಹಾಗೂ ಸ್ವಾವಲಂಬನೆಯ ಉದ್ದೇಶದಿಂದ ಕೆನರಾ ಬ್ಯಾಂಕ್ ಹಮ್ಮಿಕೊಂಡ ಮೂರು ದಿನಗಳ ಕ್ಯಾನ್ ಉತ್ಸವ ಶುಕ್ರವಾರ ಕುವೆಂಪು ರಸ್ತೆಯ ಬ್ಯಾಂಕಿನ ವೃತ್ತ ಕಚೇರಿ ಆವರಣದಲ್ಲಿ ಆರಂಭವಾಯಿತು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಸಿಕಾಂತ್ ಸಂಥಿಲ್ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

