ತ್ಯಾಗರಾಜರ ಆರಾಧನಾ ಮಹೋತ್ಸವ
ತರೀಕೆರೆ: ಪ್ರಕೃತಿ ಕಲಾ ಕುಟೀರದಿಂದ ಭಾನುವಾರ ಪಟ್ಟಣದ ವಿನಾಯಕ ಸಾಂಸ್ಕೃತಿಕ ಭವನದಲ್ಲಿ ನಾದಬ್ರಹ್ಮ ಸದ್ಗುರು ತ್ಯಾಗರಾಜರ, ಕನಕದಾಸರ, ಪುರಂದರದಾಸರ ಆರಾಧನಾ ಮಹೋತ್ಸವ ಏರ್ಪಡಿಸಲಾಗಿತ್ತು.
ಸರ್ಕಾರಿ ಬಾಲಿಕಾ ಪಪೂ ಕಾಲೇಜಿನ ಉಪ ಪ್ರಾಚಾರ್ಯ ಜೆ.ಎಂ. ಸೋಮಶೇಖರಪ್ಪ ಉದ್ಘಾಟನೆ ನೆರವೇರಿಸಿ ಮಾತನಾಡಿ, ತ್ಯಾಗರಾಜರು, ಕನಕದಾಸರು, ಪುರಂದರದಾಸರು
ಕರ್ನಾಟಕ ಸಂಗೀತ ಕ್ಷೇತ್ರದ ತ್ರಿಮೂರ್ತಿಗಳೆಂದು ಖ್ಯಾತನಾಮರು, ಭಕ್ತಿ ಚಳುವಳಿಯ ಪ್ರವರ್ತಕರು, ಇವರು ತಮ್ಮನ್ನು ತಾವು ದೇವರಲ್ಲಿ ಅರ್ಪಿಸಿಕೊಂಡವರು ಎಂದು ತಿಳಿಸಿದರು.
ಕಲಾ ಕುಟೀರದ ಅಧ್ಯಕ್ಷೆ ಉಮಾ ಪ್ರಕಾಶ್, ರಶ್ಮಿ ಉಪಸ್ಥಿತರಿದ್ದರು. ಶಾಸ್ತ್ರೀಯ ಸಂಗೀತ ಗಾಯನ, ವೀಣಾ ವಾದನ, ಹಾಡುಗಾರಿಕೆ ಮತ್ತಿತರ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಕಲಾವಿದ ವಿನೋದಾಚಾರ್ ಪಕ್ಕವಾದ್ಯ ನುಡಿಸಿದರು.
ಪೊಲೀಸರು ಸಸ್ಪೆಂಡ್
ಚಿಕ್ಕಮಗಳೂರು: ನಿಯೋಜಿತ ಕರ್ತವ್ಯಕ್ಕೆ ಗೈರು ಹಾಜರಿಯಾಗಿದ್ದ ಇಬ್ಬರು ಪೊಲೀಸರನ್ನು ಸಸ್ಪೆಂಡ್ ಮಾಡಲಾಗಿದೆ. ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸರಾದ ಪ್ರದೀಪ್‌ಕುಮಾರ್, ಮಂಜಪ್ಪ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಎನ್. ಶಶಿಕುಮಾರ್ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ. ಕರ್ತವ್ಯಕ್ಕೆ ನಿಯೋಜನೆ ಮಾಡಿರುವ ಸ್ಥಳದಲ್ಲಿ ಈ ಇಬ್ಬರು ಪೊಲೀಸರು ಹಾಜರಾಗಿರಲಿಲ್ಲ. ಆದುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

