ನರಸಿಂಹರಾಜಪುರ ಪಪಂ ಅತಂತ್ರ ಸ್ಥಿತಿ
ಕ.ಪ್ರ ವಾರ್ತೆ, ನರಸಿಂಹರಾಜಪುರ, ಮಾ.11
ಪಟ್ಟಣ ಪಂಚಾಯ್ತಿ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು 11 ಸ್ಥಾನಗಳಲ್ಲಿ ಬಿಜೆಪಿ 4, ಕಾಂಗ್ರೆಸ್ 4, ಜೆಡಿಎಸ್ 2 ಹಾಗೂ 1 ಸ್ಥಾನವನ್ನು ಪಕ್ಷೇತರ ಅಭ್ಯರ್ಥಿ ಗೆದ್ದಿದ್ದು ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಬಾರದೆ ಪಟ್ಟಣ ಪಂಚಾಯ್ತಿ ಅತಂತ್ರ ಸ್ಥಿತಿ ಏರ್ಪಟ್ಟಿದೆ.
ಯಾವುದೇ ಪಕ್ಷವು ಪಟ್ಟಣ ಪಂಚಾಯ್ತಿಯಲ್ಲಿ ಅಧಿಕಾರ ಹಿಡಿಯಬೇಕಾದರೆ ಇನ್ನೊಂದು ಪಕ್ಷವನ್ನು ಅವಲಂಬಿಸಬೇಕಾದ ಪರಿಸ್ಥಿತಿ ಏರ್ಪಟ್ಟಿದೆ. 3ನೇ ವಾರ್ಡ್ನಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಲಕ್ಷ್ಮಣ ಶೆಟ್ಟರು 50 ಮತಗಳ ಅಂತರದಿಂದ ಬಿಜೆಪಿಯ ಎಸ್.ಎ. ಖಾಸಿಂಖಾನ್ ಅವರನ್ನು ಸೋಲಿಸಿ 7ನೇ ಬಾರಿ ಪಟ್ಟಣ ಪಂಚಾಯ್ತಿ ಪ್ರವೇಶಿಸುವ ಮೂಲಕ ದಾಖಲೆ ಮಾಡಿದ್ದಾರೆ.
ಪಟ್ಟಣ ಪಂಚಾಯ್ತಿ ಸದಸ್ಯರಾಗಿದ್ದ ಬಿಜೆಪಿಯ ಆರ್. ರಾಜಶೇಖರ್, ಕಾಂಗ್ರೆಸ್ ಪಕ್ಷದ ಪಿ.ಆರ್. ಸುಕುಮಾರ್, ಲೇಖಾ ವಸಂತ್, ಜೆಡಿಎಸ್ನ ಅಬ್ದುಲ್ ಸುಬಾನ್ ಮರು ಆಯ್ಕೆಯಾಗಿದ್ದಾರೆ.
ಹಾಲಿ ಪಟ್ಟಣ ಪಂಚಾಯ್ತಿ ಉಪಾಧ್ಯಕ್ಷರಾಗಿದ್ದ ಬಿಜೆಪಿ ಪಕ್ಷದ ಕೆ. ರಾಜೇಂದ್ರ, ಸದಸ್ಯ ಕಾಂಗ್ರೆಸ್ ಪಕ್ಷದ ಅಪ್ರೋಜ್ ಸೋತಿದ್ದಾರೆ. 5ನೇ ವಾರ್ಡ್ನಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಫರ್ಧಿಸಿದ್ದ ಸಮೀರ ನಹೀಂ ಗೆದ್ದಿದ್ದು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳನ್ನು ಸೋಲಿಸಿ ಗಮನ ಸೆಳೆದಿದ್ದಾರೆ.
ಗೆದ್ದ ಅಭ್ಯರ್ಥಿಗಳು:
1ನೇ ವಾರ್ಡ್- ಕಾಂಗ್ರೆಸ್ನ ಲೇಖಾ ವಸಂತಕುಮಾರ್ (134 ಮತ ) 2ನೇ ವಾರ್ಡ್- ಜೆಡಿಎಸ್ನ ಸುನೀಲ್ ಕುಮಾರ್ ಎಚ್.ಕೆ (237 ಮತ), 3ನೇ ವಾರ್ಡ್- ಕಾಂಗ್ರೆಸ್ ಪಕ್ಷದ ಲಕ್ಷ್ಮಣಶೆಟ್ಟರು (169 ಮತ) 4ನೇ ವಾರ್ಡ್- ಬಿಜೆಪಿಯ ಆಶಾ ಶ್ರೀನಾಥ್ (158 ಮತ ) 5ನೇ ವಾರ್ಡ್- ಪಕ್ಷೇತರ ಅಭ್ಯರ್ಥಿ ಸಮೀರಾ ನಹೀಂ (109) 6ನೇ ವಾರ್ಡ್- ಜೆಡಿಎಸ್ ಪಕ್ಷದ ಅಬ್ದುಲ್ ಸುಬಾನ್ (171 ಮತ) 7ನೇ ವಾರ್ಡ್ ಬಿಜೆಪಿಯ ನಾಗರತ್ನ (188 ಮತ) 8ನೇ ವಾರ್ಡ್- ಬಿಜೆಪಿಯ ರಾಜಶೇಖರ ( 195 ಮತಗಳು) 9ನೇ ವಾರ್ಡ್- ಕಾಂಗ್ರೆಸ್ ಪಕ್ಷದ ನಜೀರ್ ಅಹಮ್ಮದ್ (158 ಮತಗಳು ) 10ನೇ ವಾರ್ಡ್- ಬಿಜೆಪಿಯ ಲ್ಲಿ (145 ಮತ) 11ನೇ ವಾರ್ಡ್- ಕಾಂಗ್ರೆಸ್ ಪಕ್ಷದ ಪಿ.ಆರ್. ಸುಕುಮಾರ್ (207 ಮತಗಳು)
ಯಾವ ಪಕ್ಷಕ್ಕೂ ಸಮಾಧಾನವಿಲ್ಲ: ಪಟ್ಟಣ ಪಂಚಾಯ್ತಿಯ ಚುನಾವಣೆ ಫಲಿತಾಂಶ ಯಾವ ರಾಜಕೀಯ ಪಕ್ಷಗಳಿಗೂ ಪೂರ್ಣ ಸಮಾಧಾನ ತಂದಿಲ್ಲ. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಎಲ್ಲಾ 11 ವಾರ್ಡ್ಗಳಿಗೂ ತಮ್ಮ ಅಭ್ಯರ್ಥಿಗಳನ್ನು ನಿಲ್ಲಿಸಿದ್ದು ಬೇರೆ, ಬೇರೆ ಕಾರಣಗಳಿಂದ ತಮ್ಮ ಪಕ್ಷಗಳೇ ಸಂಪೂರ್ಣ ಬಹುಮತ ಬಂದು ಪಟ್ಟಣ ಪಂಚಾಯ್ತಿಯಲ್ಲಿ ಅಧಿಕಾರಕ್ಕೆ ಬರುವ ನಿರೀಕ್ಷೆ ಇಟ್ಟುಕೊಂಡಿದ್ದವು. ಬಿಜೆಪಿ ಪಕ್ಷವು ಪಟ್ಟಣದ ಅಭಿವೃದ್ಧಿಯೇ ತಮಗೆ ಶ್ರೀರಕ್ಷೆಯಾಗಿದ್ದು ಕನಿಷ್ಠ 7 ವಾರ್ಡ್ಗಳಲ್ಲಿ ಗೆದ್ದಿದ್ದು ಅಧಿಕಾರಕ್ಕೆ ಬರುವ ನಿರೀಕ್ಷೆ ಇಟ್ಟುಕೊಂಡಿದ್ದ ಬಿಜೆಪಿ ಪಕ್ಷಕ್ಕೆ ನಿರಾಸೆಯಾಗಿದೆ. ಆದರೆ, ಪಟ್ಟಣದ ಒಟ್ಟು ಮತಗಳಲ್ಲಿ ಬಿಜೆಪಿ ಪಕ್ಷವೇ ಅಧಿಕ ಬಂದಿದೆ ಎಂದು ತೃಪ್ತಿ ವ್ಯಕ್ತಪಡಿಸಿದೆ.
ಕಾಂಗ್ರೆಸ್ ಪಕ್ಷವು ಸಹ 5 ವರ್ಷಗಳ ಹಿಂದೆ ಪಟ್ಟಣ ಪಂಚಾಯ್ತಿಯಲ್ಲಿ ಅಧಿಕಾರದಲ್ಲಿತ್ತು. ಬಿಜೆಪಿ ಪಕ್ಷವು ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಮಾಡಿದೆ. ಈ ಬಾರಿ ಕಾಂಗ್ರೆಸ್ ಗೆಲ್ಲಿಸಿ ಎಂದು ಪ್ರಚಾರ ಮಾಡಿದರೂ 4 ಸ್ಥಾನ ಮಾತ್ರ ಗೆಲ್ಲಲು ಸಾಧ್ಯವಾಗಿರುವುದರಿಂದ ಕಾಂಗ್ರೆಸ್ ಪಕ್ಷಕ್ಕೆ ಸಂಪೂರ್ಣ ತೃಪ್ತಿ ಸಿಕ್ಕಿಲ್ಲ.
ಜೆಡಿಎಸ್ ಕಳೆದ ಬಾರಿ ಪಟ್ಟಣ ಪಂಚಾಯ್ತಿಯಲ್ಲಿ 1 ಸ್ಥಾನ ಮಾತ್ರ ಗೆದ್ದಿತ್ತು. ಈ ಬಾರಿ 2 ಸ್ಥಾನ ಗೆದ್ದಿದ್ದು ಸ್ವಲ್ಪ ಸಮಾಧಾನ ತಂದಿದೆ. ಜೊತೆಗೆ 4 ವಾರ್ಡ್ಗಳಲ್ಲಿ ದ್ವಿತೀಯ ಸ್ಥಾನಕ್ಕೆ ಬಂದಿದ್ದು ಮತ ಗಳಿಕೆಯಲ್ಲಿ ಹೆಚ್ಚಳ ಕಂಡು ಬಂದಿರುವುದರಿಂದ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಲು ಆತ್ಮವಿಶ್ವಾಸ ಹೆಚ್ಚಿದೆ ಎಂದು ಜೆಡಿಎಸ್ ಸ್ವಲ್ಪ ತೃಪ್ತಿ ವ್ಯಕ್ತಪಡಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

