ಲಕ್ಷ್ಮಣಶೆಟ್ಟಿ7ನೇ ಬಾರಿಗೆ ಆಯ್ಕೆ
ಕ.ಪ್ರ ವಾರ್ತೆ, ನರಸಿಂಹರಾಜಪುರ, ಮಾ.11
ಪಟ್ಟಣ ಪಂಚಾಯ್ತಿ ಚುನಾವಣೆಯಲ್ಲಿ 3ನೇ ವಾರ್ಡ್ನ ಕಾಂಗ್ರೆಸ್ ಅಭ್ಯರ್ಥಿಯಾದ ಲಕ್ಷ್ಮಣಶೆಟ್ಟಿ ಅವರು 7ನೇ ಬಾರಿಗೆ ಪಟ್ಟಣ ಪಂಚಾಯ್ತಿಗೆ ಆಯ್ಕೆಯಾಗಿದ್ದಾರೆ.
ಲಕ್ಷ್ಮಣಗೌಡರು ಸತತವಾಗಿ 5 ಬಾರಿ 3ನೇ ವಾರ್ಡಿನಿಂದ ಹಾಗೂ 1 ಬಾರಿ 4 ನೇ ವಾರ್ಡಿನಿಂದ ಕಾಂಗ್ರೆಸ್ನಿಂದ ಸ್ಫರ್ಧಿಸಿ ಗೆದ್ದು ಬಂದು ಸೋಲಿಲ್ಲದ ಸರದಾರ ಎನ್ನಿಸಿದ್ದರು. ಆದರೆ, ಕಳೆದ ಬಾರಿ 3ನೇ ವಾರ್ಡಿನಲ್ಲಿ 7 ಮತಗಳ ಅಂತರದಿಂದ ಬಿಜೆಪಿಯ ಆಶೀಶ್ಕುಮಾರ್ ವಿರುದ್ಧ ಸೋತಿದ್ದರು. ಮತ್ತೆ ಈ ಬಾರಿ 3ನೇ ವಾರ್ಡಿನಿಂದಲೇ ಕಾಂಗ್ರೆಸ್ ಅಭ್ಯರ್ಥಿಯಾಗಿ ಜಯಗಳಿಸಿದ್ದಾರೆ. ಪಟ್ಟಣ ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷರಾಗಿ ಅನುಭವ ಪಡೆದಿದ್ದಾರೆ.
ಜನರು ನನ್ನನ್ನು ನಂಬಿದ್ದಾರೆ: ಪಟ್ಟಣ ಪಂಚಾಯ್ತಿ ಚುನಾವಣೆಯಲ್ಲಿ 7ನೇ ಬಾರಿಗೆ ಆಯ್ಕೆಯಾದ ಲಕ್ಷ್ಮಣ ಶೆಟ್ಟಿ 'ಕನ್ನಡಪ್ರಭ'ದೊಂದಿಗೆ ಮಾತನಾಡಿ, 3ನೇ ವಾರ್ಡಿನಲ್ಲಿ ಹಿಂದುಳಿದವರು, ಬಡವರೇ ಹೆಚ್ಚಾಗಿದ್ದಾರೆ. ಅವರ ಸಮಸ್ಯೆಗಳಿಗೆ ನಾನು ಸ್ಪಂದಿಸಿದ್ದೇನೆ. ಅಧಿಕಾರ ಇಲ್ಲದೆ ಇದ್ದಾಗಲೂ ಅವರ ಕಷ್ಟಗಳಿಗೆ ಸ್ಪಂದಿಸಿದ್ದೇನೆ. ಇದರಿಂದ ಇಲ್ಲಿಯ ಮತದಾರರು ನನ್ನನ್ನು ನಂಬಿದ್ದಾರೆ. ನಾನು ಸಹ ಅವರನ್ನು ನಂಬಿದ್ದೇನೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

