ಚಿಕ್ಕಮಗಳೂರು

ಮಹಿಳಾ ದಿನಾಚರಣೆ

Published On :

ತರೀಕೆರೆ: ಮಹಿಳೆ ಇಂದು  ಇಂದು ಎಲ್ಲ  ಕ್ಷೇತ್ರದಲ್ಲೂ ಸಾಧನೆ ಮಾಡುತ್ತಿದ್ದು, ಆಕೆ ಅಬಲೆಯಲ್ಲ ಎನಿಸಿಕೊಳ್ಳದೆ   ಸಬಲೆಯಾಗಿದ್ದಾಳೆ ಎಂದು ತರೀಕೆರೆ ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ನಿರ್ಮಲಾರಾಜ್ ಹೇಳಿದರು.  ಅವರು, ಶುಕ್ರವಾರ ಇನ್ನರ್ ವೀಲ್ ಕ್ಲಬ್‌ನಿಂದ ಪಟ್ಟಣದ ಮಮತಾ ಮಹಿಳಾ ಸಮಾಜದಿಂದ ಸಮಾಜದ ಆವರಣದಲ್ಲಿ ಏರ್ಪಡಿಸಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದರು.  ಡಾ.ಅಂಜನಾ ಆಚಾರ್ಯ ಮಾತನಾಡಿ, ಮಗುವಿನ ಜನ್ಮ ಸಾರ್ಥಕವಾಗುವ ತನಕ ತಾಯಿ ಪ್ರಯತ್ನಿಸುತ್ತಾಳೆ ಎಂದು ತಿಳಿಸಿದರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಅಂಧ ಸಂಗೀತ ಶಿಕ್ಷಕಿ ನಂಜಮ್ಮ, ಸಮಾಜ ಸೇವಕಿ ಅನ್ನಪೂರ್ಣಮ್ಮ ಅವರನ್ನು ಸನ್ಮಾಸಲಾಯಿತು.  ಸಂಗೀತ ವಿದುಷಿ ಅಪರ್ಣ ಜಯರಾಂ, ಗೀತಾ ಶ್ರೀಹರ್ಷ, ಗಮಕಿ ಶಶಿಕಲಾ, ಉಮಾ ಪ್ರಕಾಶ್, ಜಯರಾಂ ಅವರು ಅವರಿಂದ ಹಾಡುಗಾರಿಕೆ ಏರ್ಪಡಿಸಲಾಗಿತ್ತು.  ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ಅನ್ನಪೂರ್ಣಮ್ಮ ಮತ್ತು ಲಕ್ಷ್ಮಿ   ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.