ಚಿಕ್ಕಮಗಳೂರು

15 ಗ್ರಾಮದಲ್ಲಿ ಸಮುದಾಯ ಭವನ

Published On :

ಮೂಡಿಗೆರೆ: ತಾಲೂಕಿನಲ್ಲಿ ಸಮುಧಾಯ ಭವನಗಳ ನಿರ್ಮಾಣಕ್ಕೆ ಬೇಡಿಕೆ ಇದ್ದು, 15ಗ್ರಾಮಗಳಿಗೆ ತಲಾ 10 ಲಕ್ಷ ರು. ವೆಚ್ಚದಲ್ಲಿ ಸಮುದಾಯ ಭವನಗಳನ್ನು ನಿರ್ಮಿಸಲಾಗುತ್ತಿದೆ ಎಂದು ಶಾಸಕ ಎಂ.ಪಿ. ಕುಮಾರಸ್ವಾಮಿ ತಿಳಿಸಿದರು.
 ತಾಲೂಕಿನ ಬಿ. ಹೊಸಹಳ್ಳಿ ಗ್ರಾಪಂನಲ್ಲಿ ಸುವರ್ಣಗ್ರಾಮ ಯೋಜನೆಯಡಿ ನಿರ್ಮಿಸಲಾದ ಸುವರ್ಣ ಸೌಧ ಕಟ್ಟಡ ಹಾಗೂ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಿ ಮಾತನಾಡಿದರು.
  ಮಲೆನಾಡಿನಲ್ಲಿ ಅತಿಯಾಗಿ ಮಳೆಯಾಗುವ ಕಾರಣ ರಸ್ತೆಗಳು ಹದಗೆಡುತ್ತಿದ್ದು, ಬಹುತೇಕ ರಸ್ತೆಗಳನ್ನು ಸಮರ್ಪಕವಾಗಿ ದುರಸ್ತಿ, ಕಾಂಕ್ರಿಟೀಕರಣ, ಡಾಂಬರೀಕರಣ ಮಾಡಲಾಗುತ್ತಿದೆ.
   ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು. ಬಿಪಿಎಲ್ ಕಾರ್ಡ್‌ಗಳನ್ನು ಸಮರ್ಪಕವಾಗಿ ವಿತರಿಸಲಾಗುತ್ತಿದೆ. ಕೊಟ್ಟಿಗೆಹಾರದಿಂದ ಎಸ್‌ಕೆ ಬಾರ್ಡ್‌ವರಗೆ 24 ಕೋಟಿ ರು.ಗಳ ವೆಚ್ಚದಲ್ಲಿ ರಸ್ತೆ ನಿರ್ಮಾಣವಾಗುತ್ತಿದೆ ಎಂದು ಹೇಳಿದರು.
 ನಿವೇಶನ ರಹಿತರಿಗೆ ಈಗಾಗಲೇ 150 ಎಕರೆ ಭೂಮಿಯನ್ನು ಕಾಯ್ದಿರಸಲಾಗಿದ್ದು, ಗ್ರಾಪಂಗಳ ಅನುಮತಿಯಂತೆ ಗ್ರಾಮದ ನಿವೇಶನ ರಹಿತರು ಪಡೆದುಕೊಳ್ಳಬೇಕು. ಆದರೆ ಕೆಲವು ಕಡೆ ಟೆಂಟ್ ಹಾಕಿಸ, ಬಾವುಟ ಹಾರಾಡಿಸುತ್ತಾ ಬೇಲಿ ನಿರ್ಮಿಸುತ್ತಿರುವ ಕ್ರಮ ಸರಿಯಲ್ಲ ಎಂದರು.
 ವಿಧಾನ ಪರಿಷತ್ ಸದಸ್ಯ ಮೋಟಮ್ಮ ಮಾತನಾಡಿ, ಆಡಳಿತ ನಡೆಸುವವರು ಬಿಗಿಯಾಗಿದ್ದಲ್ಲಿ ಅಧಿಕಾರಿಗಳ ಮೇಲೆ ನಿಯಂತ್ರಣವಿಡಲು ಸಾಧ್ಯ. ಜನ ಪ್ರತಿನಿಧಿಗಳೊಂದಿಗೆ ಗ್ರಾಮಸ್ಥರು ಕೈಜೋಡಿಸಿದಲ್ಲಿ ಸರ್ಕಾರದ ಯೋಜನೆಗಳು ಫಲ ನೀಡುತ್ತವೆ ಎಂದರು.
    ಅರಣ್ಯ ವಸತಿ ಮತ್ತು ವಿಹಾರಧಾಮದ ಅಧ್ಯಕ್ಷ ಎಂ.ಕೆ.ಪ್ರಾಣೇಶ್, ಸರ್ಕಾರದಿಂದ ಗ್ರಾಪಂಗೆ ಬರುವ ಅನುಧಾನಗಳ ಬಗ್ಗೆ ವಿವರಣೆ ನೀಡಿದರು. ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷ ಸುಪ್ರಿಯಾ ಮಂಜುನಾಥ್ ವಹಿಸಿದ್ದರು. ಜಿಪಂ ಸದಸ್ಯರಾದ ಜ್ಯೋತಿ ಹೇಮಶೇಖರ್, ಅರೇಕುಡಿಗೆ ಶಿವಣ್ಣ, ತಾಪಂ ಸದಸ್ಯ ದೇವರಾಜ್, ಎಪಿಎಂಸಿ ಸದಸ್ಯೆ ರಚನಾ ಅರುಣ್ ಕುಮಾರ್, ಎಚ್.ಎಂ. ರತೀಶ್, ತಾಪಂ ಕಾರ್ಯನಿರ್ವಹಣಾಧಿಕಾರಿ ಚೆನ್ನಬಸಪ್ಪ ಮೇಕಾಲಿ, ವಿಕ್ರಂ, ಎಚ್.ಕೆ. ಅರುಣ್, ಜಯರಾಮೇಗೌಡ, ಪದ್ಮಾಕ್ಷಿ ಇದ್ದರು.
ಕಳಪೆ ಕಾಮಗಾರಿಯಲ್ಲ: 1.7 ಕೋಟಿ ರು ಗಳ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಮೂಡಿಗೆರೆ ಗಂಗನ ಮಕ್ಕಿ ಕಾಂಕ್ರೀಟ್ ರಸ್ತೆ ಕಾಮಗಾರಿಯಲ್ಲಿ ವ್ಯತ್ಯಾಸವಾಗಿಲ್ಲ.
  ಸ್ಟೀಲ್ ಬಳಸಿದಲ್ಲಿ ಗದ್ದೆ ಬದಿಯ ಮಣ್ಣಿನ ಗುಣಮಟ್ಟ ಸರಿಯಿಲ್ಲದ ಹಾಗೂ ಅಧಿಕ ಭಾರದ ವಾಹನಗಳ ಓಡಾಟದಿಂದ ಅಲುಗಾಡಿದಲ್ಲಿ ರಸ್ತೆ ಬಿರುಕು ಬಿಡುವ ಸಾಧ್ಯತೆಗಳಿರುವುದರಿಂದ ಸ್ಟೀಲ್ ಬಳಕೆ ಮಾಡದೆ ನೂತನ ಆವಿಷ್ಕಾರದಿಂದ ರಸ್ತೆ ನಿರ್ಮಿಸಲಾಗುತ್ತಿದೆ
ಎಂದು ಶಾಸಕ ಎಂ.ಪಿ. ಕುಮಾರಸ್ವಾಮಿ ಹೇಳಿದರು.
ಮಹಿಳೆಯರಿಗೆ ರಕ್ಷಣೆ ಇಲ್ಲ: ವಿಧಾನ ಪರಿಷತ್ ಸದಸ್ಯೆ ಮೋಟಮ್ಮ ಮಾತನಾಡಿ, ಇತ್ತೀಚೆಗೆ ಮಹಿಳೆಯರ ಮೇಲೆ ದೌರ್ಜನ್ಯಗಳು ನಿರಂತರವಾಗಿ ನಡೆಯುತ್ತಿದ್ದರೂ ಶಾಸಕರು, ಸಂಬಂಧ ಪಟ್ಟವರು ಕಣ್ಣು ಮುಚ್ಚಿ ಕುಳಿತಿದ್ದಾರೆ ಎನ್ನುವುದಕ್ಕೆ ಮಹಿಳಾ ದಿನಾಚರಣೆಯಂದೆ ಕಳಸ ಗ್ರಾಪಂ ಬಿಜೆಪಿ ಅಧ್ಯಕ್ಷೆ ಯೋರ್ವರ ವಿರುದ್ಧ ಮಾಜಿ ಅಧ್ಯಕ್ಷರು ಮತ್ತು ಗುಂಪೊಂದು ಅವಮಾನಕರ ರೀತಿಯಲ್ಲಿ ಪ್ರತಿಭಟನೆ ನಡೆಸಿರುವುದೆ ಸಾಕ್ಷಿ.
  ಆಕೆ ಬದುಕಿರುವಾಗಲೇ ಆಕೆಯ ಅಣುಕು ಶವ ಯಾತ್ರೆ ನಡೆಸಿ, ಅರೆ ಬೆತ್ತಲೆ ಮೆರವಣಿಗೆ ಮಾಡುವುದಲ್ಲದೆ ಆಕೆಯ ಎದುರೆ ತಿಥಿ ಮಾಡಲು ಹೊರಟಿದ್ದು, ಇದರಿಂದ ಜರ್ಜರಿತಗೊಂಡ ಅಧ್ಯಕ್ಷೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ರಾಜ್ಯ ಸರ್ಕಾರ ಮಹಿಳೆಯರಿಗೆ ಕೊಡುವ ಗೌರವ ಇದೇನಾ ಎಂದು ರಾಜ್ಯ ಸರ್ಕಾರದ ವಿರುದ್ಧ ಕೆಂಡ ಕಾರಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.