ಚಿಕ್ಕಮಗಳೂರು

ಕಾರ್ಯಕರ್ತರ ಸಭೆ ರದ್ದು

Published On :

ಕೊಪ್ಪ: ಜಿಲ್ಲಾ ಬಿಜೆಪಿಯಿಂದ 21 ರಂದು ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಕಾರ್ಯಕರ್ತರ ಸಭೆಯನ್ನು ವಿಧಾನ ಸಭಾ ಚುನಾವಣೆಯ ನೀತಿಸಂಹಿತೆ ಇರುವುದರಿಂದ ನಡೆಸಬಾರದೆಂದು ತಾಲೂಕು ಕಾಂಗ್ರೆಸ್ ಆಕ್ಷೇಪಿಸಿದ ಹಿನ್ನಲೆಯಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳು ಸಭೆಯನ್ನು ರದ್ದುಗೊಳಿಸುವಂತೆ    ಆದೇಶ ನೀಡಿದ್ದರಿಂದ ಸಭೆ ರದ್ದುಗೊಳಿಸಲಾಗಿದೆ. ಇದು ಕಾಂಗ್ರೆಸ್‌ನವರ ಪಿತೂರಿಯಾಗಿದೆ ಎಂದು ಬಿಜೆಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಸ್.ಎನ್. ರಾಮಸ್ವಾಮಿ ತುರ್ತು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
ಬೀದಿ ನಾಯಿ ಹಾವಳಿ ತಡೆಗೆ ಕ್ರಮ
ಚಿಕ್ಕಮಗಳೂರು: ನಗರ ವ್ಯಾಪ್ತಿಯಲ್ಲಿ ಬೀದಿ ನಾಯಿ ಮತ್ತು ಹಂದಿಗಳ ಹಾವಳಿ ಹೆಚ್ಚಾಗಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಬೀಡಾಡಿ ನಾಯಿಗಳು ಹಾಗೂ ಹಂದಿಗಳನ್ನು ಹಿಡಿದು, ನಗರದಿಂದ ಹೊರ ಪ್ರದೇಶಕ್ಕೆ ಸಾಗಿಸಲು ನಿರ್ಧರಿಸಲಾಗಿದೆ ಎಂದು ನಗರಸಭೆ ಪ್ರಕಟಣೆ ತಿಳಿಸಿದೆ.  ಸಾರ್ವಜನಿಕರು ತಾವು ಸಾಕಿರುವ ನಾಯಿಗಳು ಅಥವಾ ಹಂದಿಗಳನ್ನು ಬೀದಿಗೆ ಬಿಡದಂತೆ ನೋಡಿಕೊಳ್ಳಬೇಕು. ಬೀದಿಯಲ್ಲಿ ಸಾಕು ಅಥವಾ ಹಂದಿಯನ್ನು ಹಿಡಿದು ಹೊರ ಸಾಗಿಸಿದಲ್ಲಿ ನಗರಸಭೆಯು ಜವಾಬ್ದಾರಿಯಾಗಿರುವುದಿಲ್ಲ ಎಂದು ಹೇಳಿದೆ.
ಮತದಾರರಿಗೆ ಕೃತಜ್ಞತೆ
ತರೀಕೆರೆ: ಸ್ಥಳೀಯ ಪುರಸಭೆ ಚುನಾವಣೆಯಲ್ಲಿ ಜನರು ನೀಡಿರುವ ತೀರ್ಪನ್ನು ಪಕ್ಷ ಸ್ವೀಕರಿಸಿದೆ, ಪಕ್ಷವನ್ನು ಬೆಂಬಲಿಸಿದ ಮತದಾರರಿಗೆ ಅವರು ಕೃತಜ್ಞತೆಗಳು ಪುರಸಭೆ ಮಾಜಿ ಸದಸ್ಯ ಟಿ.ಜಿ. ಸದಾನಂದ್ ಮಾತನಾಡಿ ಅರ್ಪಿಸಿದರು. ಆರ್. ದೇವಾನಂದ್, ಸುನೀಲ್ ಮೊದಲಾದವರು ಇದ್ದರು.
22 ರಂದು ಕೆಜೆಪಿ ಸಭೆ
ಕಡೂರು: 22 ರಂದು ಪಟ್ಟಣದಲ್ಲಿ ಕರ್ನಾಟಕ ಜನತಾಪಕ್ಷದ ಕಡೂರು ವಿಧಾನಸಭಾ ಕ್ಷೇತ್ರದ ಭೂತ್ ಮಟ್ಟದ ಕಾರ್ಯಕರ್ತರ ಸಮಾವೇಶ ನಡೆಯಲಿದೆ ಎಂದು ಕೆಜೆಪಿ ಮುಖಂಡ ಬೆಳ್ಳಿ ಪ್ರಕಾಶ್ ತಿಳಿಸಿದ್ದಾರೆ.  ಈ ಬಗ್ಗೆ ಹೇಳಿಕೆ ನೀಡಿ, 22 ರ ಮಧ್ಯಾಹ್ನ 2 ಗಂಟೆಗೆ ಪಟ್ಟಣದ ಬನಶಂಕರಿ ಸಮುದಾಯ ಭವನದಲ್ಲಿ ಸಮಾವೇಶ ನಡೆಯಲಿದ್ದು, ಸಮಾವೇಶದಲ್ಲಿ ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಬಿ.ಆರ್. ಪಾಟೀಲ್ ಭಾಗವಹಿಸಲಿದ್ದಾರೆ ಎಂದು ಪ್ರಕಾಶ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.