ಜ್ಞಾನಕ್ಕಾಗಿ ಓದು ಅಗತ್ಯ
ಕ.ಪ್ರ ವಾರ್ತೆ, ತರೀಕೆರೆ, ಮಾ.28
ಹೆಚ್ಚು ಆಸಕ್ತಿಯಿಂದ ವಿಷಯ ಜ್ಞಾನ ಪಡೆದುಕೊಳ್ಳಬಹುದು ಎಂದು ಶಿವಮೊಗ್ಗ ಬಸವಕೇಂದ್ರದ ಚರಮೂರ್ತಿ ಮರುಳಸಿದ್ದ ಸ್ವಾಮೀಜಿ ತಿಳಿಸಿದ್ದಾರೆ.
ಅವರು ಗುರುವಾರ ಎಸ್ಜೆಎಂ ಪ್ರಥಮ ದರ್ಜೆ ಕಾಲೇಜು ಗ್ರಂಥಾಲಯ ವಿಭಾಗ, ಕನ್ನಡ ವೇದಿಕೆ, ಎಸ್ಬಿಐ ತರೀಕೆರೆ ಶಾಖೆಯಿಂದ ಯಂಡಮೂರಿ ವಿರೇಂದ್ರನಾಥರ ಓದು-ಏಕಾಗ್ರತೆ ಪುಸ್ತಕ ಕುರಿತು ಏರ್ಪಾಡಾಗಿದ್ದ ವಿದ್ಯಾರ್ಥಿಗಳ ಆವಲೋಕನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡುತ್ತಿದ್ದರು.
ವಿಚಾರಗಳನ್ನು ತಿಳಿಯುವುದಕ್ಕೆ ಓದು ಅಗತ್ಯ. ಹೆಚ್ಚು ಆಸಕ್ತಿಯಿಂದ ಗ್ರಹಿಕೆ ಸಾಧ್ಯವಾಗುತ್ತದೆ. ಅಂಕಗಳಿಗೋಸ್ಕರ ಓದು ಬೇಡ. ಬದುಕಿಗೋಸ್ಕರ ಪಾಠ ಕಲಿಯಬೇಕು. ಬದುಕಿನ ಪ್ರಶ್ನೆಗಳಲ್ಲಿ ಉತ್ತೀರ್ಣರಾಗಬೇಕು. ಪರೀಕ್ಷೆಯ ಯಶಸ್ಸು ಜೀವನದ ಯಶಸ್ಸಲ್ಲ. ಪ್ರಶ್ನೆಗಳಿಂದ ನಮ್ಮ ಅಂತಶಕ್ತಿ ಹೆಚ್ಚುತ್ತದೆ ಎಂದು ತಿಳಿಸಿದರು.
ತರ್ಕಬದ್ಧವಾಗಿ ಆಲೋಚಿಸಿ: ಶಿವಮೊಗ್ಗ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಪ್ರೊ.ವೈ. ಮಂಜಪ್ಪ ಮಾತನಾಡಿ, ಆಲೋಚನೆಗಳಲ್ಲಿ ತರ್ಕ ಮತ್ತು ಕಾರಣ ಇರಬೇಕು. ಸ್ವತಂತ್ರವಾಗಿ ತರ್ಕಬದ್ಧವಾಗಿ ಆಲೋಚಿಸಬೇಕು. ಪ್ರಾಮಾಣಿಕತೆ, ಮಾತಿನ ಬದ್ಧತೆ ಇರಬೇಕು ಎಂದು ತಿಳಿಸಿದರು.
ಶಿವಮೊಗ್ಗ ವಿಶ್ರಾಂತ ಕನ್ನಡ ಪ್ರಾದ್ಯಾಪಕರಾದ ಪ್ರೊ.ಸ.ಉಷಾ ಮಾತನಾಡಿ, ಗುರುವಿಗೆ ಬಹಳ ದೊಡ್ಡ ಗೌರವವಿದೆ. ಓದುವವರಿಗೆ ಪುಸ್ತಕ ರುಚಿಸುತ್ತದೆ. ಒಂದರ ನಂತರ ಮತ್ತೊಂದರಂತೆ ಓದಿಸುತ್ತದೆ. ಅದು ನಿರಂತರ ಅಭ್ಯಾಸವಾಗುತ್ತದೆ. ಕಣ್ಣಿಂದ, ಪೆನ್ನಿಂದ ಓದಬೇಕು. ವಿದ್ಯಾರ್ಥಿಗಳು ಪರೀಕ್ಷೆಯನ್ನು ಹೆದರಿಸಬೇಕು. ಜೀವನದಲ್ಲಿ ಯಶಸ್ಸು ಸಾಧಿಸಬೇಕು ಎಂದು ತಿಳಿಸಿದರು.
ಪ್ರಾಚಾರ್ಯ ಪ್ರೊ.ಕೆ.ವಿ. ಸಜ್ಜನ ಶೆಟ್ಟರ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತರೀಕೆರೆ ಶಾಖೆ ವ್ಯವಸ್ಥಾಪಕ ಆರ್. ಶಿವನಾಗಪ್ಪ ಬಹುಮಾನ ವಿತರಣೆ ಮಾಡಿ ಮಾತನಾಡಿದರು.
ಗ್ರಂಥಾಲಯಾಧಿಕಾರಿ ಸಿ.ಈ. ಜಯದೇವಪ್ಪ, ಸಿ. ನಾಗೇಶ್, ಪ್ರೊ.ಸಿ.ಎಸ್. ಜಗದೇವನವರ್, ಪ್ರೊ.ಜಿ.ಎಸ್.ಬಸವರಾಜಪ್ಪ, ಟಿ.ಜಿ. ರಂಗನಾಥ್, ಪ್ರೊ. ಹೆಗಡಾಳ್ ಮತ್ತಿತರರು ಉಪಸ್ಥಿತರಿದ್ದರು.
ಪ್ರೊ. ಬಸವರಾಜಪ್ಪ ಕಾರ್ಯಕ್ರಮ ನಿರೂಪಿಸಿದರು. ಪುಸ್ತಕ ಪ್ರದರ್ಶನ ಏರ್ಪಡಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

